ಅರಸೀಕೆರೆ : ನಗರದ ಬಝ್ಮೆ ಫಾರೂಕಿಯಾ ಮದ್ರಸೆಯ ವತಿಯಿಂದ ಹಜರತ್ ಮಹಮ್ಮದ್ ಪೈಗಂಬರ್ ರವರ ಜನ್ಮ ದಿನದ ಅಂಗವಾಗಿ ನಗರದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿಗಳಿಗೆ ಹಣ್ಣು ಹಂಪಲು ನೀಡುವ ಮೂಲಕ ರೋಗಿಗಳ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಝ್ಮೆ ಫಾರೂಕಿಯ ಕಾರ್ಯದರ್ಶಿ ಆರ್ ನಿಜಾಮುದ್ದೀನ್ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಹಮ್ಮದ್ ಪೈಗಂಬರ್ ಅವರ ಜನುಮದಿನದ ಅಂಗವಾಗಿ ನಮ್ಮ ಸಂಸ್ಥೆ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು ಎಂದರು.
ಈ ಸಂದರ್ಭದಲ್ಲಿ ಮದರಸ ಗುರುಗಳು. ಅಧ್ಯಕ್ಷರಾದ ಯಾಸಿನ್ ಮೂಹಿಯುದ್ದಿನ್. ಖಜಾಂಚಿ ಸಮಿಉಲ್ಲಾ. ಮುಸ್ಲಿಂ ಸಮುದಾಯದ ಮುಖಂಡರಾದ ಎನ್ ಎಸ್ ಸರ್ದಾರ್, ಜಾವೀದ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ರಾಜು ಅರಸೀಕೆರೆ




