ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಇತ್ತೀಚಿನ ಡಿನ್ನರ್ ಪಾರ್ಟಿಗೆ ಹೈಕಮಾಂಡ್ ಬ್ರೇಕ್ ಹಾಕಿದ್ದು ಗೊತ್ತೇ ಇದೆ. ಎಸ್ಸಿ/ಎಸ್ಟಿ ನಾಯಕರ ಡಿನ್ನರ್ ಪಾರ್ಟಿ ರದ್ದಾಗಿಲ್ಲ ಮುಂದೂಡಲಾಗಿದೆ ಎಂದು ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಹೆಚ್.ಸಿ.ಮಹದೇವಪ್ಪ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರು ಸಭೆ ಮಾಡಬೇಡಿ ಅಂತಾ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ದಲಿತರ ಸಮಸ್ಯೆಗಳ ಕುರಿತಾಗಿ ನಿರಂತರ ಚರ್ಚೆಗಳು ಆಗುತ್ತಿರಬೇಕು. ಇಂದೂ ಚರ್ಚಿಸುತ್ತೇವೆ, ಮುಂದೆಯೂ ಚರ್ಚೆ ಮಾಡುತ್ತೇವೆ. ಬೇಕಿದ್ದರೆ ಸುರ್ಜೆವಾಲ ಅವರೇ ಡಿನ್ನರ್ ಸಭೆಗೆ ಬಂದು ಮಾಹಿತಿ ಪಡೆಯಲಿ. ದಲಿತ ಸಮುದಾಯದ ಚರ್ಚೆಗೆ ಎಲ್ಲರೂ ಸ್ವತಂತ್ರರಾಗಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ದಲಿತರ ಪರವೇ ಇದೆ, ಯಾವತ್ತೂ ಅಡ್ಡಿಪಡಿಸಲ್ಲ. ದಲಿತ ಸಮಾವೇಶ ಮಾಡಿದ್ದಕ್ಕೇ ರಾಜ್ಯದಲ್ಲಿ ಕಾಂಗ್ರೆಸ್ 136+ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ದಲಿತರೇ ಕಾಂಗ್ರೆಸ್ ಪಕ್ಷದ ಅಡಿಪಾಯ ಆಗಿದ್ದಾರೆ. ಸಭೆ ಮಾಡಬೇಡಿ ಎಂದು ಯಾವ ಕಾರಣಕ್ಕೆ ಹೈಕಮಾಂಡ್ ನಮ್ಮ ಸಭೆಗಳಿಗೆ ಬ್ರೇಕ್ ಹಾಕುತ್ತದೆ ಎಂದು ಮಹಾದೇವಪ್ಪ ಅವರು ಪ್ರಶ್ನಿಸಿದರು.
ರಾಜ್ಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅನುಪಸ್ಥಿತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಡಿನ್ನರ್ ಪಾರ್ಟಿ ಮಾಡಲಾಗಿತ್ತು.
ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸಹ ಭಾಗಿಯಾಗಿದ್ದರು. ಈ ಬೆಳವಣಿಗೆ ಭಾರೀ ಚರ್ಚೆಗೂ ಕಾರಣವಾಯಿತು. ನಂತರ ಸಚಿವ ಡಾ.ಜಿ.ಪರಮೇಶ್ವರ್ ಅವರೂ ಡಿನ್ನರ್ ಪಾರ್ಟಿ ಆಯೋಜಿಸಿದ್ದನ್ನು ರದ್ದುಪಡಿಸಿದರು.