Ad imageAd image

ಚಂದ್ರೇಶ್ ಅಭಿಮಾನಿ ಬಳಗದಿಂದ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನ ಆಚರಣೆ

Bharath Vaibhav
ಚಂದ್ರೇಶ್ ಅಭಿಮಾನಿ ಬಳಗದಿಂದ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನ ಆಚರಣೆ
WhatsApp Group Join Now
Telegram Group Join Now

ಸಮಾರಂಭದಲ್ಲೇ ಕುಮಾರಣ್ಣನಿಗೆ ಕರೆ ಮಾಡಿ ಶುಭಕೋರಿದ ದೊಡ್ಡಾಘಟ್ಟ ಚಂದ್ರೇಶ್/ ತುರುವೇಕೆರೆ ಜನರ ಪ್ರೀತಿ ಎಂದಿಗೂ ಮರೆಯಲ್ಲ ಎಂದ ಕುಮಾರಣ್ಣ

ತುರುವೇಕೆರೆ : ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ 66 ನೇ ಜನ್ಮದಿನಾಚರಣೆಯನ್ನು ದೊಡ್ಡಾಘಟ್ಟ ಚಂದ್ರೇಶ್ ಅಭಿಮಾನಿ ಬಳಗ ಸಹಸ್ರಾರು ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರೊಡಗೂಡಿ ಪಟ್ಟಣದ ರಾಘವೇಂದ್ರ ಭವನ್ ಮುಂಭಾಗದಲ್ಲಿ ಬೃಹತ್ ಕೇಕ್ ಕತ್ತರಿಸುವ ಮೂಲಕ ಆಚರಿಸಿದರು.

ಗಣ್ಯರು, ಅಭಿಮಾನಿಗಳೊಡಗೂಡಿ ಬೃಹತ್ ಕೇಕ್ ಕತ್ತರಿಸಿ ಮಾತನಾಡಿದ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಕನ್ನಡ ನಾಡಿನ ರಾಜ್ಯ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಹಾಪುರಷ ಸಿಂಹನಾದರೆ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪುರುಷ ಸಿಂಹನಾಗಿದ್ದಾರೆ. ಮರಿಸಿಂಹನಾಗಿ ನಿಖಿಲ್ ಕುಮಾರಸ್ವಾಮಿ ನಾಡಿನುದ್ದಗಲಕ್ಕೂ ಮಿಂಚಿನಂತೆ ಸಂಚರಿಸಿ ರೈತರ, ಜನರ ಕಷ್ಟಗಳನ್ನು ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು, ಚನ್ನಮ್ಮ ದಂಪತಿಗಳಲ್ಲಿನ ಸಾತ್ವಿಕ ಗುಣ, ದೈವಭಕ್ತಿ, ರೈತರು, ದೀನದಲಿತರು, ಅಲ್ಪಸಂಖ್ಯಾತರು, ಕೂಲಿಕಾರ್ಮಿಕರು, ಬಡವರ ಪರವಾಗಿ ಮಿಡಿಯುವ ಹೃದಯ ಕುಮಾರಸ್ವಾಮಿ ಅವರಿಗೂ ಬಂದಿದೆ ಎಂದರು.

ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲವೇ ತಿಂಗಳುಗಳು ಅಧಿಕಾರ ನಡೆಸಿದರೂ ಸಹ ರಾಜ್ಯದ ಮನೆಮಗನಾಗಿ ಜನಸ್ಪಂದನ, ಗ್ರಾಮ ವಾಸ್ತವ್ಯ, ರೈತರ ಸಾಲ ಮನ್ನಾದಂತಹ ಮಹತ್ತರ ಜನಪರ, ರೈತಪರ ಕಾರ್ಯಕ್ರಮಗಳನ್ನು ರೂಪಿಸಿದ ಹೆಗ್ಗಳಿಕೆ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ. ದೇಶದ ಉದ್ದಗಲದ ರಾಜಕಾರಣವನ್ನು ಗಮನಿಸಿದರೆ ಮುಖ್ಯಮಂತ್ರಿ, ಕೇಂದ್ರ ಸಚಿವ ಯಾವುದೇ ಹುದ್ದೆಯಲ್ಲಿದ್ದರೂ ಜನಸಾಮಾನ್ಯರೊಂದಿಗೆ ಸಾಮಾನ್ಯ ವ್ಯಕ್ತಿಯಂತೆ, ಸಹೋದರರಂತೆ ಜನರೊಂದಿಗೆ ಬೆರೆವ, ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡು ಕಷ್ಟಸುಖಗಳಲ್ಲಿ ಭಾಗಿಯಾಗುವ ಏಕೈಕ ರಾಜಕಾರಣಿ ನಮ್ಮ ಕುಮಾರಣ್ಣ ಮಾತ್ರ ಎಂದು ಬಣ್ಣಿಸಿದರು.

ಕುಮಾರಸ್ವಾಮಿಯವರ ಕನಸಿನ ಯೋಜನೆ ಪಂಚರತ್ನ ಯೋಜನೆ ಜಾರಿಗೆ ಬಂದಿದ್ದರೆ ರಾಜ್ಯ ಸುವರ್ಣಯುಗವನ್ನು ಕಾಣುತ್ತಿತ್ತು. ರೈತರು, ಬಡವರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಎಲ್ಲಾ ಜಾತಿ, ಧರ್ಮಗಳ ಜನರ ಅಭಿವೃದ್ದಿಯ ಪರಿಕಲ್ಪನೆಯನ್ನು ಹೊಂದಿ ಯೋಜಿಸಿದ್ದ ಯೋಜನೆ ಪಂಚರತ್ನ ಯೋಜನೆಯಾಗಿತ್ತು ಎಂದ ಅವರು, ಕುಮಾರಣ್ಣನವರು 66 ನೇ ವರ್ಷಕ್ಕೆ ಕಾಲಿಟ್ಟಿದ್ದು ಅವರಿಗೆ ಭಗವಂತ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ, ಅಧಿಕಾರ ನೀಡಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆಗೆ ಅವಕಾಶ ಕಲ್ಪಿಸಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ಮಾತನಾಡಿದ ದೊಡ್ಡಾಘಟ್ಟ ಚಂದ್ರೇಶ್ ಕುಮಾರಣ್ಣನಿಗೆ ವೈಯಕ್ತಿಕವಾಗಿ ಹಾಗೂ ತಾಲೂಕಿನ ಜನತೆಯ ಪರವಾಗಿ ಶುಭ ಕೋರಿದರು. ಇದಕ್ಕೆ ಪ್ರತಿಕ್ರಯಿಸಿದ ಕುಮಾರಸ್ವಾಮಿಯವರು, ತುರುವೇಕೆರೆ ತಾಲೂಕಿನ ಜನರ ಅಭಿಮಾನ, ಪ್ರೀತಿ ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನಿಮ್ಮ ಅಭಿಮಾನಕ್ಕೆ ನಾನೆಂದಿಗೂ ಚಿರಋಣಿಯಾಗಿದ್ದೇನೆ. ತಾಲೂಕಿನ ಜನತೆಗೆ, ಕಾರ್ಯಕರ್ತರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದರು.

ಸಮಾರಂಭದಲ್ಲಿ ಪೌರಕಾರ್ಮಿಕರಿಗೆ ಬಿಸ್ಕೆಟ್, ಹಣ್ಣುಗಳನ್ನು ವಿತರಿಸಲಾಯಿತು. ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ ದೊಡ್ಡಾಘಟ್ಟ ಚಂದ್ರೇಶ್ ಹಾಗೂ ಅಭಿಮಾನಿಗಳು ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬಿಸ್ಕೆಟ್, ಬ್ರೆಡ್ ವಿತರಿಸಿದರು. ಹುಟ್ಟುಹಬ್ಬ ಆಚರಣೆಯಲ್ಲಿ ಜೆಡಿಎಸ್ ಅಧ್ಯಕ್ಷ ದೊಡ್ಡೇಗೌಡ, ಮುಖಂಡರಾದ ವೆಂಕಟೇಶ್ ಕೃಷ್ಣಪ್ಪ, ದಂಡಿನಶಿವರ ಸಿದ್ದಗಂಗಯ್ಯ, ಲೀಲಾವತಿ ಗಿಡ್ಡಯ್ಯ, ಕಣತೂರು ರವಿಕುಮಾರ್, ಧರೀಶ್, ಡಾ.ನಂಜಪ್ಪ, ವಿಠಲದೇವರಹಳ್ಳಿ ಹರೀಶ್, ಮಲ್ಲಾಘಟ್ಟ ರವಿ, ಮಲಸೀಮೆ ಶ್ರೀನಿವಾಸಗೌಡ, ಹುಲಿಕಲ್ ಲೋಕೇಶ್, ನಿವೃತ್ತ ಶಿಕ್ಷಕ ನಾಗರಾಜ್, ಜೈಗಿರಿ ಸುಂದರ್, ದಂಡಿನಶಿವರ ಸಿದ್ದೇಗೌಡ, ಬೋರೇಗೌಡ, ದೊಡ್ಡಗೊರಾಘಟ್ಟ ಹೊನ್ನೇಗೌಡ, ಬಸವರಾಜ್, ಚಿಕ್ಕಬೀರನಕೆರೆ ಶಿವಣ್ಣ, ವಸಂತಕುಮಾರ್, ಲೋಕೇಶ್, ದೊಡ್ಡಮಾರ್ಗೋನಹಳ್ಳಿ ಪ್ರಕಾಶ್, ಮುದ್ದನಹಳ್ಳಿ ಹರೀಶ್ ಸೇರಿದಂತೆ ಸಹಸ್ರಾರು ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!