ರಾಮನಗರ : 2028ಕ್ಕೆ ರಾಮರಾಜ್ಯ ರೈತರ ಸರ್ಕಾರ ಬರುತ್ತದೆ ಅದಕ್ಕಾಗಿಯೇ ಭಗವಂತ ಆರನೇ ಬಾರಿ ನನ್ನನ್ನು ಬದುಕಿಸಿದ್ದಾನೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.
ರಾಮನಗರದಲ್ಲಿ ಮಾತನಾಡಿದ ಅವರು, 2028 ರಲ್ಲಿ ರಾಜ್ಯದಲ್ಲಿ ಜನತೆಯ ಸರ್ಕಾರ, ನಿಜವಾದ ರಾಮರಾಜ್ಯ ಸರ್ಕಾರ ತರಬೇಕು ಅಂತಲೇ ಆ ಭಗವಂತ ನನಗೆ 6ನೇ ಬಾರಿ ಬದುಕುಳಿಸಿದ್ದಾನೆ.
ಕಾಂಗ್ರೆಸ್ ಮಹಾನುಭಾವನಿಗೂ ಬುದ್ಧಿ ಹೇಳುತ್ತೇನೆ ಮನೆಹಾಳು ಮಾಡಬೇಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಾನು ಡಿಸಿಎಂ ಡಿಕೆ ಶಿವಕುಮಾರ್ ರೀತಿ ಕಲ್ಲು ಬಂಡೆ ಒಡೆದು ಬಂದಿಲ್ಲ. ನಾನು ಮನಸ್ಸು ಮಾಡಿದರೆ ಅವರಪ್ಪನ ರೀತಿ ಮಾಡುತ್ತಿದ್ದೆ ನಿಮ್ಮ ಒಂದಿಂಚು ಭೂಮಿ ತೆಗೆದುಕೊಳ್ಳಲು ನಾನು ಬಿಡಲ್ಲ ನನಗೆ ಬೇಕಿರುವುದು ಜನಗಳ ಪ್ರೀತಿ ಎಂದು ರಾಮನಗರದಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.




