ಪಾವಗಡ: ಭಾನುವಾರ ರಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ಇರುವ ಸರ್ಕಾರಿ ಕಾಲೇಜ್ ಮೈದಾನದಲ್ಲಿ 76ನೇ ಗಣರಾಜ್ಯೋತ್ಸವ ಸಮಾರಂಭವನ್ನು ತಾಲೂಕ್ ಆಡಳಿತ ವತಿಯಿಂದ ನಡೆಯಿತು ಈ ಸಮಯದಲ್ಲಿ 76ನೇ ಗಣರಾಜ್ಯೋತ್ಸವಕ್ಕೆ ಸಮಾರಂಭಕ್ಕೆ ಆಗಮಿಸುತ್ತಿರುವಂತಹ ತುಮಕೂರು ಜಿಲ್ಲೆ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು. ಹಾಗೂ ಪಾವಗಡ ಶಾಸಕರಾದ ಹೆಚ್ ವಿ ವೆಂಕಟೇಶ್ ಮತ್ತು ಪಾವಗಡ ತಹಸಿಲ್ದಾರ್ ವರದರಾಜ್. ಕಾರ್ಯನಿರ್ವಾಯನ ಅಧಿಕಾರಿ ಜಾನಕಿ ರಾಮ್ ಅವರನ್ನು ಅದ್ದೂರಿಯನ್ನು ಸ್ವಾಗತ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕರು ಹೆಚ್ ವಿ ವೆಂಕಟೇಶ್ ಮತ್ತು ತಹಸಿಲ್ದಾರ್ ವರದರಾಜು ತಾಲೂಕ್ ಕಾರ್ಯನಿರ್ವಾಹಣಾಧಿಕಾರಿ ಜಾನಕಿರಾಮ್ ಮತ್ತು ತಾಲೂಕ್ ಆಡಳಿತ ವತಿಯಿಂದ ಧ್ವಜಾರೋಹಣ ಮಾಡಲಾಗಿರುತ್ತಾರೆ ಈ 76ನೇ ಗಣರಾಜ್ಯೋತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ತಾಲೂಕಿನ ತಹಸಿಲ್ದಾರ್ ವರದರಾಜ್ ಮಾತನಾಡಿ 76ನೆಯ ಗಣರಾಜ್ಯೋತ್ಸವ ಶುಭಾಶಯಗಳು ತಿಳಿಸುತ್ತಾ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಬರೆದಿರ್ತಕ್ಕಂತ ಸಂವಿಧಾನವನ್ನು ಶಾಲೆ ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಬೇಕೆಂದು ಇವತ್ತೇನೋ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಬರ್ತಿಲ್ಲ ಅಂದರೆ ಧೈರ್ಯದಿಂದ ನಾವು ಬದುಕುವುದಕ್ಕೆ ಆಗುತ್ತಿಲ್ಲವೆಂದು ಹೇಳಿ. ಶಾಸಕರಾದ ಎಚ್ ವಿ ವೆಂಕಟೇಶ್ ಅವರು ನಮ್ಮ ಪಾವಗಡ ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿಗಳನ್ನು ಮಾಡುತ್ತಾ ಇದ್ದಾರೆ ಎಂದು ಮಾತನಾಡಿದ್ದಾರೆ. ನಂತರ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವಂತಹ ತುಮಕೂರು ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷರು ಹಾಗೂ ಪಾವಗಡ ಶಾಸಕ ವೆಂಕಟೇಶ್ ಅವರು ಮಾತನಾಡಿ. 76ನೆಯ ಗಣರಾಜ್ಯೋತ್ಸವ ಪಾವಗಡ ಜನತೆಗೆ ಶುಭಾಶಯಗಳು ತಿಳಿಸುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರ್ದಿರ್ತಕ್ಕಂತ ಸಂವಿಧಾನವನ್ನು ಪಾವಗಡ ಜನತೆಗೆ ತಿಳಿಸುತ್ತಾರೆ ಪ್ರತಿಯೊಂದು ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪ್ರಸ್ತಾವನೆ ಶಿಕ್ಷಕರು ಅರಿವು ಮೂಡಿಸಬೇಕು ಎಂದು ತಿಳಿಸುತ್ತಾರೆ. ಇದೇ ಕಾರ್ಯಕ್ರಮ ಸಮಾರಂಭದಲ್ಲಿ ಮಾತನಾಡಿದ ಪಾವಗಡ ತಾಲೂಕ್ ಪುರಸಭೆ ಅಧ್ಯಕ್ಷ ರಾಜೇಶ್ ಮಾತನಾಡಿ. ಇವತ್ತು ನಮ್ಮ ಸಂವಿಧಾನದ ದಿನವೆಂದು 76ನೆಯ ಗಣರಾಜ್ಯೋತ್ಸವ ಶುಭಾಶಯಗಳು ತಿಳಿಸಿ ಈ ಜನತೆಗೆ ಇವತ್ತು ನಾವು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಬರ್ತಿರ್ತಕ್ಕಂತ ಸಂವಿಧಾನ ಇಲ್ಲ ಅಂದರೆ ನಾವು ವೇದಿಕೆ ಮೇಲೆ ಇರುವುದಕ್ಕೂ ಕೂಡ ನನಗೆ ಆಗುತ್ತಿರಲಿಲ್ಲ ಸಂವಿಧಾನ ಅಂದರೆ ಒಂದು ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರ್ದಿರ್ತಕ್ಕಂತ ಸಂವಿಧಾನವನ್ನು ಶಾಲೆ ಮಕ್ಕಳಿಗೆ ಇಡೀ ತಾಲೂಕಿನ ಜನತೆಗೆ ತಿಳಿಸುತ್ತಾರೆ. ಈ ಸಮಾರಂಭಕ್ಕೆ ಆಗಮಿಸುತ್ತಿರುವ. ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್. ಬಿ ಓ ಇಂದ್ರಾನಮ್ಮ. ಪುರಸಭೆ ಮುಖ್ಯ ಅಧಿಕಾರಿ ಚಾಪೆ. ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಗಳರಾದ ಸುರೇಶ್. ಮತ್ತು ಗಿರೀಶ್. ತಾಲೂಕ್ ಆಡಳಿತ ಅಧಿಕಾರಿಗಳು ಮತ್ತು ತಾಲೂಕಲ್ಲಿರುವ ಸಂಘ ಸಂಸ್ಥೆಗಳು ಈ ಸಮಾರಂಭಕ್ಕೆ ಆಗಮಸಿದ್ದರು.
ವರದಿಗಾರರು. ಶಿವಾನಂದ




