Ad imageAd image

ಸ್ವತಃ ಹೆಂಡತಿಯನ್ನು ಅಕ್ಕ ಎಂದು ನಂಬಿಸಿ ಯುವತಿಗೆ ಕೋಟ್ಯಾಂತರ ರೂಪಾಯಿ ವಂಚನೆ

Bharath Vaibhav
ಸ್ವತಃ ಹೆಂಡತಿಯನ್ನು ಅಕ್ಕ ಎಂದು ನಂಬಿಸಿ ಯುವತಿಗೆ ಕೋಟ್ಯಾಂತರ ರೂಪಾಯಿ ವಂಚನೆ
WhatsApp Group Join Now
Telegram Group Join Now

ಬೆಂಗಳೂರು : ಜಗತ್ತಿನಲ್ಲಿ ಎಂತೆಂತಹ ಜನರು ಇರುತ್ತಾರೆ ಅಂದರೆ, ಮದುವೆಯಾಗುವುದಾಗಿ ನಂಬಿಸಿ ಆಸಾಮಿ ಒಬ್ಬ ತನ್ನ ಪತ್ನಿಯನ್ನೇ ಅಕ್ಕ ಎಂದು ಯುವತಿಗೆ ಪರಿಚಯಿಸಿ ಆಕೆಗೆ ಕೋಟ್ಯಾಂತರ ರೂಪಾಯಿ ಹಣ ವಂಚನೆ ಎಸಗಿದ್ದಾನೆ. ಬೆಂಗಳೂರಿನ ಯುವತಿಗೆ ವಂಚನೆ ಎಸಗಿದ್ದು, ಬೆಂಗಳೂರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಯುವತಿ ವಂಚನೆಗೆ ಒಳಗಾಗಿದ್ದಾಳೆ.

ಮ್ಯಾಟರ್ ಮೋನಿಯಲ್ಲಿ ಆರುಪಿ ವಿಜಯ್ ರಾಜೇಗೌಡ ಪರಿಚಯವಾಗಿದ್ದ. 2024 ಮಾರ್ಚ್ ನಲ್ಲಿ ವಿಜಯ್ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ತಾನು ಉದ್ಯಮಿ 715 ಕೋಟಿ ಮಾಡಿದ ಆಸ್ತಿ ಒಡೆಯ ಇದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಕುಟುಂಬದ ಸದಸ್ಯರನ್ನು ಪರಿಚಯಿಸಿದ. ಕೆಂಗೇರಿ ಬಳಿ ಯುವತಿಯ ಕುಟುಂಬ ಸದಸ್ಯರನ್ನು ಪರಿಚಯಿಸಿದ್ದಾನೆ.

ಅಲ್ಲದೆ ಇನ್ನೊಂದು ಬೆಚ್ಚಿ ಬೀಳಿಸೋ ವಿಷಯ ಏನೆಂದರೆ ಆರೋಪಿ ವಿಜಯ್ ತನ್ನ ಪತ್ನಿಯನ್ನು ಅಕ್ಕ ಎಂದು ಯುವತಿಗೆ ಪರಿಚಯಿಸಿದ್ದಾನೆ. ನಂತರ ಆಸ್ತಿ ಸಂಬಂಧ ಜಾರಿ ನಿರ್ದೇಶನಾಲಯದಲ್ಲಿ ಕೇಸ್ ಆಗಿದೆ ಎಂದು ಯುವತಿಗೆ ಆರೋಪಿ ಹೇಳಿ ನಂಬಿಸಿದ್ದಾನೆ.

ಈ ಬಗ್ಗೆ ಕೆಲವು ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನು ತೋರಿಸಿದ್ದಾನೆ. ತಾನಾಗೇ ಹಣದ ಅವಶ್ಯಕತೆ ಇದೆ ಎಂದು 15 ಸಾವಿರ ಹಣ ಪಡೆದಿದ್ದ. ಒಟ್ಟಿಗೆ ಬಿಸಿ ಮಾಡೋಣ ಅಂತ ಹೇಳಿ ಲೋನ್ ಮಾಡಿಸಿದ್ದಾನೆ.

ಯುವತಿಯ ಹೆಸರಿನಲ್ಲಿ ವಿಜಯ್ ರಾಜುಗೌಡ ಲೋನ್ ಮಾಡಿಸಿದ್ದು ಹೀಗೆ ಹಂತ ಹಂತವಾಗಿ 1.75 ಕೋಟಿ ರೂಪಾಯಿ ಹಣ ಪಡೆದಿದ್ದಾನೆ.

ಅಷ್ಟೆ ಅಲ್ಲದೇ ಯುವತಿಯ ಸಂಬಂಧಿಕರು ಮತ್ತು ಸ್ನೇಹಿತರಿಂದ ವಿಜಯ್ ರಾಜುಗೌಡ ಲಕ್ಷ ಲಕ್ಷ ಹಣ ಪಡೆದಿದ್ದಾನೆ. 22 ಲಕ್ಷ ಹಣ ವಾಪಸ್ ಕೊಟ್ಟು ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಾನೆ.

ಹಣ ವಾಪಸ್ ಕೇಳಲು ಹೋದಾಗ ವಿಜಯ್ ರಾಜುಗೌಡ ನಿಜ ಬಣ್ಣ ಬಯಲಾಗಿದ್ದು ಮದುವೆಯಾಗಿ ಮಗುವಾದರು ಯುವತಿಯ ಜೊತೆಗೆ ಮದುವೆಗೆ ಯತ್ನಿಸಿದ್ದಾನೆ.

ಹಣ ಕೇಳಿದ ಯುವತಿ ಮತ್ತು ಸ್ನೇಹಿತರಿಗೆ ವಿಜಯ್ ಬೆದರಿಕೆ ಹಾಕಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ವೈಟ್‌ಫೀಲ್ಡ್ ಠಾಣೆಗೆ ವಂಚನೆಗೆ ಒಳಗದ ಯುವತಿ ದೂರು ನೀಡಿದ್ದು ವಿಜಯ ರಾಜುಗೌಡ, ಬೋರೇಗೌಡ ಹಾಗು ಸೌಮ್ಯ ವಿರುದ್ಧ ಮೊಕದಮೆ ದಾಖಲಿಸಿದ್ದಾಳೆ.

ವೈಟ್‌ಫೀಲ್ಡ್ ಠಾಣೆ ಪೊಲೀಸರು ಕೆಂಗೇರಿ ಠಾಣೆಗೆ ಈ ಪ್ರಕರಣವನ್ನು ವರ್ಗಾಯಿಸಿದ್ದಾರೆ. ಪ್ರಕರಣದ ದಾಖಲಿಸಿಕೊಂಡ ಕೆಂಗೇರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!