Ad imageAd image

ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ಕೊಲೆಗೈದ ತಮ್ಮ 

Bharath Vaibhav
ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ಕೊಲೆಗೈದ ತಮ್ಮ 
WhatsApp Group Join Now
Telegram Group Join Now

ಬೆಳಗಾವಿ : ಅಣ್ಣ ತಮ್ಮಂದಿರ ವೈ ಮನಸ್ಸು ಸಾವಿನಲ್ಲಿ ಕೊನೆಯಾಗೋದು ಇತ್ತೀಚೆಗೆ ತುಂಬಾ ಕಾಮನ್ ಆಗಿದೆ. 50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆಗೈದಿದ್ದಾನೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ‌ ಬಳಿ‌ ನಡೆದಿದ್ದ ಘಟನೆ ತನಿಖೆ ಮುಕ್ತಾಯವಾಗಿದೆ.ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.ಹನುಮಂತ ಗೋಪಾಲ ತಳವಾರ(35) ಕೊಲೆಯಾಗಿದ್ದ ದುರ್ದೈವಿ ಎಂದು ಗೊತ್ತಾಗಿದೆ.

ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನ ಹತ್ಯೆಗೈದ ಪಾಪಿಯಾಗಿದ್ದಾನೆ. ಹನುಮಂತನ ಹೆಸರಲ್ಲಿ 50 ಲಕ್ಷ ಇನ್ಸೂರೆನ್ಸ್ಶು  ಮಾಡಿಸಿದ್ದ ಬಸವರಾಜ್, ಇಂಶುರೆನ್ಸ್ ನಾಮಿನಿ ಕೂಡ ಆಗಿದ್ದನು.

ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಚಟ್ಟ ಕಟ್ಟಿದ್ದಾನೆ. ಕಂಠಪೂರ್ತಿ ಕುಡಿಸಿ ತನ್ನ ಸ್ನೇಹಿತರೊಂದಿಗೆ ಅಣ್ಣನನ್ನು ಕರೆದೊಯ್ದಿದ್ದ ಸಹೋದರನೆ ಅಣ್ಣನ ಹತ್ಯೆ ಮಾಡಿದ್ದಾನೆ.

ಶ್ರೀಗಂಧದ ಕಟ್ಟಿಗೆಗಳಿವೆ ಅದನ್ನು‌ ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ ಚಾಲಾಕಿ ತಮ್ಮ ಹನುಮಂತನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ.

ಮೃತನ ಸಹೋದರ ಬಸವರಾಜ್ ತಳವಾರ, ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ್ ಕಂಟೆನ್ನವರ್ ಎಂಬಾತರನ್ನು ಪೋಲೀಸರು ಬಂಧಿಸಿದ್ದಾರೆ.ಬೆಳಗಾವಿ ಜಿಲ್ಲೆಯ ‌ಘಟಪ್ರಭಾ ಠಾಣೆಯ ಪೋಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!