ನಿಪ್ಪಾಣಿ: ಬೆಳಗಾವಿಯಿಂದ ಅಥಣಿವರೆಗೆ 300 ಕಿಲೋಮೀಟರ್ ಅಂತರ ಹೊಂದಿದ ಚಿಕ್ಕೋಡಿ ಗಡಿಭಾಗದ ಜನತೆಯ ಅನೇಕ ವರ್ಷಗಳ ಹಕ್ಕೊತ್ತಾಯ ನ್ಯಾಯಯುತ ವಾಗಿದ್ದು ಚಿಕ್ಕೋಡಿ ಜಿಲ್ಲೆ ಆಗಲೇಬೇಕು.ಇದರಲ್ಲಿ ಎರಡು ಮಾತಿಲ್ಲ. ಇದಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ದಿವಂಗತ ಸಂಗಪ್ಪಜ್ಜನವರ ಕನಸು ನನಸಾಗಿಸಲು ತಾವು ಬದ್ಧರಾಗಿರುವುದಾಗಿ ನಿಪ್ಪಾಣಿ ಶಾಸಾಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕಳೆದ ಎರಡು ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಸಮಾಜಸೇವಕ ಚಂದ್ರಕಾಂತ ಹುಕ್ಕೇರಿ, ಸಂಜು ಬಡಿಗೇರ್ ಸೇರಿದಂತೆ ಕನ್ನಡಪರ ಸಂಘಟನೆಗಳು,ರೈತ ಸಂಘಟನೆ,ಯುವ ಹೋರಾಟ ಗಾರರಿಂದ ಅನೇಕ ಗನ್ಯಾತಿ ಗಣ್ಯರು, ರೈತರು, ಹೋರಾಟ ನಡೆಸಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತು ವಿಷಯ ಮಂಡಿಸಿದ್ದು ಸಭಾಧ್ಯಕ್ಷರಿಂದ ಸಮರ್ಪಕ ಹಾಗೂ ಉತ್ತಮ ಪ್ರತಿಕ್ರಿಯೆ ವ್ಯರ್ಥವಾಗಿದೆ. ಆದಷ್ಟು ಬೇಗ ಚಿಕ್ಕೋಡಿ ಜಿಲ್ಲೆ ಘೋಷಣೆಯಾಗುವ ಆತ್ಮವಿಶ್ವಾಸ ತಮಗಿದೆ. ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ವರದಿ ಮಹಾವೀರ ಚಿಂಚಣೆ