ಸಚಿವ ಮದುಬಂಗಾ ರಪ್ಪನವರು ಗಮನಿಸುವರೇ?
ಧಾರವಾಡ: ತಾಲ್ಲೂಕಿನ ಮದನಭಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಕಾಶ್ ರಾಥೋಡ್ ಎಂಬ ಮಹಾನುಭಾವ ಸರ್ಕಾರಿ ಶಾಲೆ ಹಿಂಬಾಗದಲ್ಲಿರುವ ಮಂಜುಳಾ ಮರೆದವರ್ ಎಂಬ ಕುಟುಂಬದ ಮೇಲಿನ ಹಳೇ ದ್ವೇಷಕ್ಕೆ ಇಡೀ ಕುಟುಂಬದ ವಿದ್ಯಾರ್ಥಿಗಳ ಭವಿಷ್ಯವನ್ನೇ ಹಾಳು ಮಾಡಲು ಹೊರಟ ಘಟನೆ ಇಂದು ಬೆಳಕಿಗೆ ಬಂದಿದೆ.
ಅಷ್ಟಕ್ಕೂ ಇಂದು ಬೆಳಿಗ್ಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರಿಗೆ ಕರೆ ಮಾಡಿ ತಮ್ಮ ಕುಟುಂಬದ ಹಳೇ ವೈಷಮ್ಯಕ್ಕೆ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಇಂದು ಅದೇ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಕೂರಿಸದೆ ಶಾಲೆಯಿಂದ ಬೈದು ಕಳಿಸಿದ್ದಾರೆ ಎಂದು ಮಂಜುಳಾ ಮರೆದವರ್ ಕರೆ ಮಾಡುತ್ತಾರೆ.
ಇನ್ನೂ ಈ ಬಗ್ಗೆ ಕೂಡಲೇ ನಮ್ಮ ಉಪ ಸಂಪಾದಕ ಬಸವರಾಜು ಅವರು ಧಾರವಾಡ ಡಿ.ಡಿ.ಪಿ.ಐ ಕೆಳದಿ ಮಠ ಹಾಗೂ ಬಿ.ಇ. ಓ ರಾಮಕೃಷ್ಣ ಸದಲಗಿ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದರೂ ಆ ಬಡ ಕುಟುಂಬದ ಮಕ್ಕಳ ಮೇಲೆ ಟಾರ್ಗೆಟ್ ಮಾಡಿದ ಶಿಕ್ಷಕನ ವಿರುದ್ಧ ಕ್ರಮವಾಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬವಸವರಾಜು