ಭಾರತ ಕ್ರಿಕೆಟ್ ತಂಡ ಐದು ಟೆಸ್ಟ್ ಗಳ ಸರಣಿಗೆ ಇಂಗ್ಲೆಂಡ್ ನೆಲದಲ್ಲಿದ್ದು, ಮೊದಲ ಟೆಸ್ಟ್ ನಲ್ಲಿ ಸೋಲು ಕಂಡಿದೆ.
ಭಾರತ ಕ್ರಿಕೆಟ್ ತಂಡ ಈ ಪಂದ್ಯದಲ್ಲಿ ಸೋತಿದೆ ಎಂದ ಮಾತ್ರಕ್ಕೆ ಹೀನಾಯ ಪ್ರದರ್ಶನ ನೀಡಿದೆ. ಅಂತ ಅರ್ಥ ಅಲ್ಲ. ಭಾರತದ ಬೌಲರುಗಳು ಉತ್ತಮ ಸಾಧನೆ ತೋರಿದರು. ನಾಲ್ಕನೇ ಇನ್ನಿಂಗ್ಸ್ ನಲ್ಲಿ 371 ರನ್ ಚೇಸ್ ಮಾಡುವುದು ತುಂಬಾ ಸುಲಭದ ಕೆಲಸವೇನಲ್ಲ. ಆದರೆ ಇಂಗ್ಲೆಂಡ್ ತಂಡ ಇದನ್ನು ಸುಲಭ ಎಂದು ತೋರಿಸಿ ಕೊಟ್ಟಿತು.
ಮೊದಲ ಟೆಸ್ಟ್ ನಲ್ಲಿ ಭಾರತ ತಂಡ ಸೋಲಲು ಪ್ರಮುಖ ಕಾರಣ ಬೌಲಿಂಗ್ ಬಲ ಪ್ರಶ್ನೆ ಹುಟ್ಟು ಹಾಕಿದ್ದು, ನಾಲ್ಕನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 371 ರನ್ ಗಳನ್ನು ಅಷ್ಟು ಸುಲಭಕ್ಕೆ ಚೇಸ್ ಮಾಡಲು ಭಾರತೀಯ ಬೌಲರುಗಳು ಬಿಡಬಾರದಿತ್ತು. ಕಡೆಯ ಇನ್ನಿಂಗ್ಸ್ ನಲ್ಲಿ ಕನ್ನಡಿಗ ಪ್ರಸಿದ್ದ ಕೃಷ್ಣ ಮಾತ್ರ ಪರಿಣಾಮಕಾರಿಯಾಗಿ ಬೌಲ್ ಮಾಡಿದರು. ಪ್ರಮುಖ ಬೌಲರ್ ಜಸ್ಪ್ರೀತ್ ಬೂಮ್ರಾ ಸೇರಿದಂತೆ ಇತರ ಬೌಲರುಗಳು ವಿಫಲರಾದರು. ಇದಲ್ಲದೇ ಭಾರತದ ಬೌಲರುಗಳು ಕ್ಯಾಚ್ ಬಿಟ್ಟಿದ್ದು ಕೂಡ ಭಾರತ ತಂಡದ ಸೋಲಿಗೆ ಕಾರಣವಾಯಿತು.