ನಿಪ್ಪಾಣಿ: ಅಪ್ಪಟ ಕನ್ನಡತಿಯ ಅಭಿಮಾನದ ಬದುಕು ಬಂದಾಗಿದ್ಧ ಶಾಲೆ ಪ್ರಾರಂಭಿಸಲು ಪ್ರತಿ ವಿದ್ಯಾರ್ಥಿಗೆ 5ಸಾವಿರ ರೂಪಾಯಿ ಘೋಷಣೆ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.ಬೆಳೆಸಿದರೆ ಕನ್ನಡ ಶಾಲೆ, ನೆಲ ಜಲ ಭಾಷೆ ಉಳಿಸಿ ಬೆಳೆಸುವ ಛಲವಿರಬೇಕು.

ಎಂಬುದಕ್ಕೆ ಉದಾಹರಣೆ ನಿಪ್ಪಾಣಿ ಕನ್ನಡ ಶಾಲೆಯ ಮುಖ್ಯೋಪಾ ಧ್ಯಾಯಕಿ ಮಂಗಲಾ ಅಭ್ಯಂಕರ. ನಿಪ್ಪಾಣಿ ತಾಲೂಕಿನ ಗಡಿಗ್ರಾಮಗಳಲ್ಲಿಯ ಅನೇಕ ಕನ್ನಡ ಶಾಲೆಗಳನ್ನು ಮುಚ್ಚುವ ಹಂತದಲ್ಲಿರುವಾಗ ಸರ್ಕಾರ,ಜನಪ್ರತಿನಿಧಿಗಳು, ಕನ್ನಡದ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ ನ ಅಧಿಕಾರಿಗಳು ಸತತ ಪ್ರಯತ್ನಿಸುತ್ತಿರುವಾಗ ಸ್ವತಃ ತನ್ನ ಸಂಬಳದಲ್ಲಿಯ 5ಸಾವಿರ ರೂಪಾಯಿ ಪ್ರತಿ ವಿದ್ಯಾರ್ಥಿಗೆ ನೀಡಿ ಗಡಿಭಾಗದಲ್ಲಿರುವ ಹಡನಾಳ ಗ್ರಾಮದಲ್ಲಿಯ ಪಾಲಕರಿಗೆ ಕನ್ನಡದ ಅರಿವು ಮೂಡಿಸುವ ಮೂಲಕ ಹೃದಯದಿಂದ ಹೊರಬಂದ ಕನ್ನಡದ ಕಂಪು ಮೆಚ್ಚುವಂತದ್ದು.
*ಕನ್ನಡ ಶಾಲೆ ಕೆಲ ವರ್ಷಗಳಿಂದ ಮುಚ್ಚಲ್ಪತ್ತಿದ್ದು ಶಾಲೆ ಬಾಗಿಲು ತೆರೆದು ಮಕ್ಕಳ ಕಲರವ ಮತ್ತೊಮ್ಮೆ ಕೇಳೋಣ ವೆಂದು ಸಂಕಲ್ಪ ಹೊತ್ತು ಗ್ರಾಮಸ್ಥರ ಪ್ರತಿ ಮನೆ ಬಾಗಿಲು ತಟ್ಟಿ ಪಾಲಕರ ಮನವೊಲಿಕೆಗೆ ಮುಂದಾಗಿದ್ದು ಜನಪ್ರತಿನಿಧಿಗಳ, ಶಿಕ್ಷಣ ಸಚಿವರ, ಶಾಸಕರ ಕನ್ನಡ ಶಾಲೆಗಳ ಸುಧಾರಣೆಗೆ ಇಚ್ಛಾಶಕ್ತಿ ಕೊರತೆಯನ್ನು ಎತ್ತಿ ಹಿಡಿದಂತಾಗಿದೆ.ಮಂಗಲಾ ಅಭ್ಯoಕರ ನಿಪ್ಪಾಣಿ ಪಟ್ಟಣದ ಕನ್ನಡ ಶಾಲೆ ಕ್ರಮಾಂಕ 3ರಲ್ಲಿ ದಕ್ಷ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿದ್ದು ತಾಲ್ಲೂಕಿನಾದ್ಯಂತ ಶಿಕ್ಷಣ ಪ್ರೇಮಿಗಳಿಂದ ಹಾಗೂ ಕನ್ನಡ ಮನಸ್ಸುಗಳಿಂದ ಅಭಿನಂದನೆಯಾಗುತ್ತಿದೆ.
ವರದಿ: ಮಹಾವೀರ ಚಿಂಚಣೆ




