Ad imageAd image

ಆರೋಗ್ಯವೆ ಭಾಗ್ಯ : ಅನಂತ ಬಿರಾದಾರ

Bharath Vaibhav
ಆರೋಗ್ಯವೆ ಭಾಗ್ಯ : ಅನಂತ ಬಿರಾದಾರ
WhatsApp Group Join Now
Telegram Group Join Now

ಪಟ್ಟದ್ದೆವರ ಹಾಗೂ ಅಗ್ರವಾಲರ ಅಮೃತ ಮಹೋತ್ಸವದ ಪ್ರಯುಕ್ತ ಉಪನ್ಯಾಸ ಮಾಲೆಯ ಉದ್ಘಾಟನೆ

ಭಾಲ್ಕಿ: ಆರೋಗ್ಯವೆ ಭಾಗ್ಯ , ಸ್ವಾಸ್ಥ್ಯ ಬದುಕಿಗೆ ಯೋಗ ಅತ್ಯಗತ್ಯ ಎಂದು ಅಂತರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆಯ ರಾಷ್ಟ್ರೀಯ ಅದ್ಯಕ್ಷ ಅನಂತ ಬಿರಾದಾರ ಹೇಳಿದರು.

ನಗರದ ನಿರ್ಮಲಾ ಪದವಿ ಪೂರ್ವ ಕಾಲೇಜಿನಲ್ಲಿ ಸೂರ್ಯ ಫೌಂಡೇಶನ್, ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೆಶನ್ ಹಾಗೂ ಪತಂಜಲಿ ಯೋಗ ಸಮಿತಿಯ ಯುವ ಭಾರತ ಘಟಕದ ವತಿಯಿಂದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪದ್ಮಶ್ರೀ ಜಯಪ್ರಕಾಶ ಅಗ್ರವಾಲ ಅವರ ಅಮೃತ ಮಹೋತ್ಸವದ ಪ್ರಯುಕ್ತ ಆರೋಗ್ಯ ಜನಜಾಗೃತಿ ಅಭಿಯಾನದ ವಿಶೇಷ ಉಪನ್ಯಾಸವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಬದುಕಿಗೆ ಯೋಗದ ಜೊತೆಗೆ ಪ್ರಾಕೃತಿಕ ಚಿಕಿತ್ಸಾ ಪದ್ದತಿ ಅತ್ಯಗತ್ಯವಾಗಿದೆ, ಒತ್ತಡದ ಜೀವನದ ನಡುವೆಯು ಎಲ್ಲರು
ಪ್ರತಿದಿನ ನಿಯಮಿತವಾಗಿ ಯೋಗ ಮಾಡುವುದರಿಂದ ಮನಸ್ಸಿನ ಹಾಗೂ ದೇಹದ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು, ಯೋಗದಿಂದ ಉತ್ತಮ ಆರೋಗ್ಯ ಹೊಂದಿ, ಸಾಮಾಜಿಕ ಬದುಕಿನಲ್ಲಿ ಉತ್ತಮ ಜೀವನ ನಡೆಸುವುವ ಜತೆಗೆ, ಬೌದ್ಧಿಕ ಬೆಳವಣಿಗೆ ಸಾಧ್ಯವಿದೆ ಜೊತೆಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಲ್ಲಿ ಪ್ರಾಕೃತಿಕ ಚಿಕಿತ್ಸಾ ಪಧ್ಧತಿ ಅಳವಡಿಸಿಕೊಳ್ಳಬೇಕು ಇದರಿಂದ ಯಾವುದೆ ಅಡ್ಡ ಪರಿಣಾಮವಿರುವುದಿಲ್ಲ ಎಂದು ತಿಳಿಸಿದರು.

ನಿರ್ಮಲಾ ಸಂಸ್ಥೆಯ ಅದ್ಯಕ್ಷ ಮಲ್ಲಿಕಾರ್ಜುನ ಹಲ್ಮಡಗೆ ಮಾತನಾಡಿ ಮನುಷ್ಯ ಆಧುನಿಕ ಒತ್ತಡದಿಂದ ಕಲಬೆರಿಕೆಯ ಆಹಾರದಿಂದ ಶ್ರಮರಹಿತ ಜೀವನದಿಂದ ಮತ್ತು ವೈಜ್ಞಾನಿಕ ಸಾಧನಗಳ ದುರ್ಬಳಕೆ ಹಾಗೂ ದುಶ್ಚಟಗಳಿಂದ ಅನೇಕ ರೋಗಗಳಿಗೆ ಬಲಿಯಾಗುತಿದ್ದಾನೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದರೆ ಪ್ರಕೃತಿಯನ್ನು ಅರ್ಥಮಾಡಿಕೊಂಡು ಸಹಜ, ಸರಳ ಬದುಕು ನಡೆಸುವುದು ಈ ನಿಟ್ಟಿನಲ್ಲಿ ಈ ಆರೋಗ್ಯ ಜನಜಾಗೃತಿ ಶಿಬಿರ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.

ಸೂರ್ಯ ಫೌಂಡೇಶನ್ ಹಾಗೂ ಐ.ಎನ್.ಓ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ ಪ್ರಾಸ್ತಾವಿಕವಾಗಿ ಮಾತನಾಡಿ ಅನುಭವ ಮಂಟಪ ಬಸವಕಲ್ಯಾಣದ ಅದ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೆವರು ಹಾಗೂ ಸೂರ್ಯ ಫೌಂಡೇಶನ್ ಸಂಸ್ಥಾಪಕರಾದ ಪದ್ಮಶ್ರೀ ಜಯಪ್ರಕಾಶ್ ಅಗ್ರವಾಲ್ ಅವರ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲೆಯಾದ್ಯಂತ ಸೂರ್ಯ ಫೌಂಡೇಶನ್, ಇಂಟರ್ನ್ಯಾಷನಲ್ ನ್ಯಾಚುರೋಪತಿ ಆರ್ಗನೈಜೆಶನ್ ಹಾಗೂ ಪತಂಜಲಿ ಯೋಗ ಸಮಿತಿಯ ಯುವ ಭಾರತ ವತಿಯಿಂದ ಆರೋಗ್ಯ ಜನಜಾಗೃತಿ ಅಭಿಯಾನ ಹಮ್ಮಕೊಂಡಿದ್ದು ಈ ಅಭಿಯಾನದಲ್ಲಿ 75 ಕಡೆ ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸಾ ಪದ್ದತಿ ಕುರಿತು ವಿಶೇಷ ಉಪನ್ಯಾಸ, 75 ಜನರಿಂದ ರಕ್ತದಾನ ಶಿಬಿರ, 75 ಅರಳಿ ಮರ ನೆಡುವುದು ಹಾಗೂ ಆಯುಶ್ ಇಲಾಖೆಯ ಮೂಲಕ 75 ಜನ ಯೋಗ ಶಿಕ್ಷಕರ ನಿರ್ಮಾಣ ಮಾಡುವ ಕಾರ್ಯವನ್ನ ಸೂರ್ಯ ಫೌಂಡೇಶನ್ ಉಪಾಧ್ಯಕ್ಷರಾದ ಅನಂತ ಬಿರಾದಾರ ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ಮಲಾ ಸಂಸ್ಥೆಯ ಕಾರ್ಯದರ್ಶಿ ಅಮರ ಹಲ್ಮಡಗೆ, ಐ.ಎನ್.ಓ ರಾಜ್ಯ ಕಾರ್ಯದರ್ಶಿ ಯೋಗೇಂದ್ರ ಯದಲಾಪುರೆ, ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಜಿಲ್ಲಾ ಸಂಚಾಲಕ ಡಾ.ಮಂಜುಳಾ ಮುಚಳಂಬೆ, ಜಿಲ್ಲಾ ಉಪಾಧ್ಯಕ್ಷ ಹರಿದೇವ ರುದ್ರಮುನಿ, ಉಮಾದೇವಿ ಭಾಲ್ಕಿ ತಾಲ್ಲೂಕು ಸಂಚಾಲಕ ಈಶ್ವರ ರುಮ್ಮಾ, ತುಕರಾಮ ಮೋರೆ ಸೇರಿದಂತೆ ಇತರರಿದ್ದರು.

ವರದಿ: ಸಂತೋಷ ಬಿಜಿ ಪಾಟೀಲ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!