Ad imageAd image

ಜಿಲ್ ಫೌಂಡೇಶನ್ ವತಿಯಿಂದ ಆರೋಗ್ಯ ಶಿಬಿರ & ಜಾಗೃತಿ ಕಾರ್ಯಾಗಾರ

Bharath Vaibhav
ಜಿಲ್ ಫೌಂಡೇಶನ್ ವತಿಯಿಂದ ಆರೋಗ್ಯ ಶಿಬಿರ & ಜಾಗೃತಿ ಕಾರ್ಯಾಗಾರ
WhatsApp Group Join Now
Telegram Group Join Now

ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟ ಹೋಬಳಿ ಹೊರವಲಯದಲ್ಲಿರುವ ಜಿಲ್ ಫೌಂಡೇಶನ್ ವತಿಯಿಂದ ನಡೆಸುವ ಉಚಿತ ವಸತಿ (ಮದ್ರಾಸ) ಶಾಲೆಯಲ್ಲಿ ಸರ್ವಚೇತನ ಫೌಂಡೇಶನ್ ಮತ್ತು ಜೀಲ್ ಫೌಂಡೇಶನ್ ಮತ್ತು ಆರೋಗ್ಯ ಇಲಾಖೆಯ ಸಹಾಭಾಗೀತ್ವದೊಂದಿಗೆ ಒಂದು ದಿನದ ಆರೋಗ್ಯ ಶಿಬಿರ ಹಾಗೂ ಜಾಗೃತಿ ಕಾರ್ಯಾಗಾರ ಹಾಜರತ್ ಸಿದ್ದಿಕ್ ಉದ್ಘಾಟಿಸಿದರು.

ಜನಾಬ್ ಬುರ್ಹನ್ ನಂತರ ಮಾತನಾಡಿ ರವರು ಮಕ್ಕಳಿಗೆ ದೈಹಿಕ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನಂತರ ಆರೋಗ್ಯ ಇಲಾಖೆಯ ಸಮುದಾಯ ಅರೋಗ್ಯ ಅಧಿಕಾರಿಗಳದ ರೇಣುಕಮ್ಮ ಪೌಷ್ಟಿಕ ಆಹಾರದ ಮಹತ್ವವನ್ನು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಜನಾಬ್ ಟಿ ಫಾರುಖ್ ಅಬ್ದುಲ್ ರವರು ಮಾನಸಿಕ ಅರೋಗ್ಯದ ಬಗ್ಗೆ ಹಾಗೂ ಸರ್ವಚೇತನ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರು ಶ್ರೀ ಖಾಸಿಮ್ ಹಳೇಕೋಟೆಯವರು ಆರೋಗ್ಯ ಮತ್ತು ಜೀವನ ಶೈಲಿ, ಸಂಬಂಧಗಳು, ವ್ಯಕ್ತಿತ್ವ ಬೆಳವಣಿಗೆ, ಶಿಕ್ಷಣ ಮತ್ತು ವೃತ್ತಿ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿ, ವಿದ್ಯಾರ್ಥನಿಯರಿಗೆ ಅಚ್ಚುಕಟ್ಟಾಗಿ ಮನ ಮುಟ್ಟುವಂತೆ ಮಾಹಿತಿಯನ್ನು ತಿಳಿಸಿಕೊಟ್ಟರು.

ಇದೇ ವೇಳೆ ವಸತಿ ಶಾಲೆಯ ಶಿಕ್ಷಕ ಉಸ್ತಾದ್ ಹಾಜರತ್. ಅಬುಬುಕರ್ ಸಿದ್ದಿಕ್. ಉಸ್ತಾದ್, ಸಿ. ಹೆಚ್, ಓ, ರೇಣುಕಾ .
ಉಸ್ತಾದ್ ಬುರ್ಹನ್, ಆಶಾಕಾರ್ಯಕರ್ತೆಯರು ಮತ್ತು ಫೌಂಡೇಶನ್ನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!