ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪು ಸುಲ್ತಾನ್ ರವರ ಜಯಂತಿಯ ಅಂಗವಾಗಿ ಕಾರ್ಯಕ್ರಮ
ಅರಸೀಕೆರೆ ತಾಲೂಕಿನ ಬಾಣವಾರದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪು ಸುಲ್ತಾನ್ ರವರ ಜಯಂತಿಯ ಅಂಗವಾಗಿ ಬಾಣವರ ಯುವಕರ ಯುವತಿಯಿಂದ ರಕ್ತದಾನ ಹಾಗೂ ಕಣ್ಣಿನ ಪರೀಕ್ಷೆ ಮತ್ತ ಹಲ್ಲುಗಳ ಪರೀಕ್ಷೆ ಮಾಡಿಸುವ ಕಾರ್ಯಕ್ರಮವನ್ನು ಮಾಡಲಾಗಿದೆ.

ಈ ಕಾರ್ಯಕ್ರಮವು HYC ಫೌಂಡೇಶನ್ಹ ಹಾಸನ ಹಾಗೂ BYC ಫೌಂಡೇಶನ್ ಬಾಣವರ ಇವರ ಸಂಯುಕ್ತ ಆಶ್ರಯದಲ್ಲಿ ಸುಮಾರು ಯುವಕರು ರಕ್ತದಾನವನ್ನು ನೀಡಿ ಇದರ ಜೊತೆಯಲ್ಲಿ ಸಾರ್ವಜನಿಕರಿಗೆ ಹಲ್ಲಿನ ಪರೀಕ್ಷೆ ಕಣ್ಣಿನ ಪರೀಕ್ಷೆಯು ಕೂಡ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ HYC ಫೌಂಡೇಶನ್ ಸದಸ್ಯ ಅಯೂಬ್ ಹಾಸನ ಜಿಲ್ಲಾಧ್ಯಂತ ಇಂತಹ ಒಂದು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದು ರಕ್ತದ ಸಮಸ್ಯೆ ಇರುವ ರೋಗಿಗಳಿಗೆ ಸುಲಭ ರೀತಿಯಲ್ಲಿ ರಕ್ತ ಸಿಗುವ ವ್ಯವಸ್ಥೆಯಾಗಲಿ ಎಂದು ರಕ್ತ ದಾನ ಶಿಬಿರ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳು ಮಾಡುತ್ತೇವೆ ಎಂದು ಹೇಳಿದರು.
HYC ಫೌಂಡೇಶನ್ ಅಧ್ಯಕ್ಷರು ಆರ್ಭಜ್ BYC ಫೌಂಡೇಶನ್ ಅಯೂಬ್ ಅಕ್ರಮ, ತಬರೇಜ್, ಖಲೀಲ್, ರೂಷನ್ ನೈಯೂ ಯೂಸುಫ್ ಮುಬಾರಕ್ ಸೂಫಿಸಿಯಾನ್ ಫಾರ್ಹನ್ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ರಾಜು ಅರಸೀಕೆರೆ




