ರಾಮದುರ್ಗ : ಮೇ 7 ರಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಖಾತ್ರಿ ಯೋಜನೆ ಅಡಿಯಲ್ಲಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಇಂದು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಾಗೂ ದುಡಿಯೋಣ ಬಾ ಅಭಿಯಾನವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಾಂತೇಶ ನವಲಗುಂದ ರವರು ಉದ್ಘಾಟಿಸಿದರು.
ಆರೋಗ್ಯ ಶಿಬಿರದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮೀಣ ಜನರು ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ, ನರೇಗಾ ಕೆಲಸವನ್ನು ಅವಲಂಬಿಸಿದ್ದಾರೆ ಮೇ 1ನೇ ತಾರೀಖಿನಿಂದ ದುಡಿಯೋಣ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ತಾಲೂಕಿನ 37 ಗ್ರಾಮ ಪಂಚಾಯತಿಯ ಎಲ್ಲ ಗ್ರಾಮಗಳಲ್ಲಿ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮನೆಮನೆ ಬೇಟಿ ಕಾರ್ಯಕ್ರಮ ಮುಖಾಂತರ ಗ್ರಾಮೀಣ ಜನರಿಂದ ಕೂಲಿ ಬೇಡಿಕೆಯನ್ನು ಪಡೆದುಕೊಂಡು ನಿರಂತರವಾಗಿ ಕೆಲಸ ನೀಡುವುದಾಗಿ ಹೇಳಿದರು, ಗ್ರಾಮೀಣ ಜನರು ಇನ್ನು ಹೆಚ್ಚಾಗಿ ಕೂಲಿ ಕೆಲಸದಲ್ಲಿ ತೊಡಗಿಕೊಳ್ಳಲು ತಿಳಿಸಿದರು,
ಮಹಾತ್ಮ ಗಾಂಧಿ ರಾಷ್ಟ್ರೀಯ ಖಾತ್ರಿ ಯೋಜನೆಯಲ್ಲಿ ಗ್ರಾಮ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದು ನರೇಗಾ ಕೂಲಿ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಒಂದು ತಿಂಗಳ ಕಾಲ ನಿರಂತರವಾಗಿ ಒಂದು ತಿಂಗಳ ಕಾಲ ವರೆಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ತಮಗೆ ಕೆಲಸ ನೀಡಿರುವ ಜೊತೆಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನಿಮಗೆ ಸ್ಥಳದಲ್ಲಿ ಶುಗರ್,ಬಿಪಿ, ಪರೀಕ್ಷಿಸಿಕೊಂಡು, ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಬೇಕು ಎಂದು ಕೂಲಿ ಕಾರ್ಮಿಕರಿಗೆ ತಿಳಿಸಿದರು.

ತದನಂತರ ನರೇಗಾ ಯೋಜನೆಯಲ್ಲಿ ಪ್ರತಿ ಅಹರ್ ಕುಟುಂಬಕ್ಕೆ ನೂರು ದಿವಸದ ಕೆಲಸವನ್ನು ನಿಗದಿ ಪಡಿಸಲಾಗಿದ್ದು ಅದರಂತೆ ಪ್ರತಿ ಮಾನವ ದಿನಕ್ಕೆ 370 ಗಳನ್ನು ನಿಗದಿಪಡಿಸಲಾಗಿದ್ದು, ಮತ್ತು ಬೇಸಿಗೆ ಅವಧಿಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲಸದ ಪ್ರಮಾಣದಲ್ಲಿ 30 % ರಷ್ಟು ರಿಯಾಯಿತಿಯನ್ನು ಸಹ ನೀಡಿದೆ,ಇದರೊಂದಿಗೆ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ರಿಯಾಯಿತಿ ನೀಡಲಾಗಿದೆ ಎಂದು ಕರೆ ನೀಡಿದರು.
ಪ್ರತಿಯೊಂದು ಕುಟುಂಬಕ್ಕೆ ನರೇಗಾ ಯೋಜನೆಯಿಂದ ನೂರು ದಿವಸುಗಳ ಕೂಲಿ ಕೆಲಸ ಭದ್ರತೆ ನೀಡುತ್ತದೆ, ಕಳೆದ ಏಪ್ರಿಲ್ ತಿಂಗಳಿನಿಂದ ಕೂಲಿ ದರವು ಕೂಡ 370ಕ್ಕೆ ಹೆಚ್ಚಳವಾಗಿದೆ, ಹಾಗೂ ನರೆಗಾ ಯೋಜನೆ ಸೌಲಭ್ಯಗಳ ಕುರಿತು ಹಾಗೂ ಪ್ರಧಾನ ಮಂತ್ರಿ ಜೀವ ಸುರಕ್ಷಾ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಎರಡು ಇನ್ಸೂರೆನ್ಸ್ ಗಳನ್ನು ಕಡ್ಡಾಯವಾಗಿ ಎಲ್ಲಾ ಕೂಲಿಕಾರ್ಮಿಕರು ಮಾಡಿಸಿಕೊಳ್ಳುವಂತೆ ತಾಪಂ ಐ ಈ ಸಿ ಸಂಯೋಜಕ ಕಲ್ಮೇಶ್ ಹಗೆದ ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಸಹಾಯಕ ನಿರ್ದೇಶಕರು ಶೇಖರ್ ಹಿರೇ ಸೋಮಣ್ಣವರ್ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾಲತೇಶ ದಾಸಪ್ಪನವರ, ತಾಂತ್ರಿಕ ಸಂಯೋಜಕ ಮಹೇಶ್ ತಳವಾರ, ಹಾಗೂ TEA ಶ್ರೀ ಬಸವರಾಜ್ ಸೊಪ್ಪಡ್ಲ ಕೃಷಿ ಇಲಾಖೆಯ ಶ್ರೀ ನವೀಣಕುಮಾರ್ ಪಾಟೀಲ,CHO ವೆಂಕಟೇಶ್ ಲಮಾಣಿ,ಆಶಾ ಕಾರ್ಯಕರ್ತೆಯರು ಗ್ರಾ. ಪಂ. ಕಾರ್ಯದರ್ಶಿ ಜಾವೂರ ಹಾಗೂ DEO ಹಾಗೂ ಸಿಬ್ಬಂದಿ ವರ್ಗ, ಆರೋಗ್ಯ ಇಲಾಖೆ ಸಿಬ್ಬಂದಿಗಳು, VRW, GKM, ಕೂಸಿನ ಮನೆ ಆರೈಕೆದಾರರು, ನರೇಗಾ ಕಾಯಕ ಬಂಧುಗಳು, ಕೂಲಿಕಾರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕಲಾದಗಿ




