Ad imageAd image

ಮಣ್ಣಿನ ಮಡಿಕೆಯಲ್ಲಿನ ನೀರು ಕುಡಿದರೆ ಆರೋಗ್ಯ ರಕ್ಷಣೆ

Bharath Vaibhav
ಮಣ್ಣಿನ ಮಡಿಕೆಯಲ್ಲಿನ ನೀರು ಕುಡಿದರೆ ಆರೋಗ್ಯ ರಕ್ಷಣೆ
WhatsApp Group Join Now
Telegram Group Join Now

ಬೇಸಿಗೆ ಬಿಸಿಲಿ ಝಳದಿಂದ ಮುಕ್ತಿ ಪಡೆಯಲು ಅನೇಕರು ತಣ್ಣೀರಿನ ಮೊರೆ ಹೋಗುತ್ತಾರೆ. ಬೇಸಿಗೆ ಬರುತ್ತಿದ್ದಂತೆ ಹಲವು ಮಣ್ಣಿನ ಮಡಿಕೆಗಳನ್ನು ಖರೀಸಿದಿಸಿ ಅದರಲ್ಲಿನ ತಣ್ಣೀರನ್ನು ಕುಡಿಯಲು ಆರಂಭಿಸುತ್ತಾರೆ. ಫ್ರಿಡ್ಜ್‌ನಲ್ಲಿರುವ ನೀರು ಕೆಲವೇ ನಿಮಿಷಗಳಲ್ಲಿ ತಣ್ಣಗಾಗುತ್ತದೆ. ಆದರೆ, ಫ್ರಿಡ್ಜ್​ನಲ್ಲಿರುವ ನೀರು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಬಿಸಿಲಿನ ದಿನದ ನಂತರ ಫ್ರಿಡ್ಜ್‌ನಿಂದ ತಣ್ಣೀರು ಕುಡಿಯುವುದರಿಂದ ಗಂಟಲಿನ ವಿವಿಧ ಸಮಸ್ಯೆಗಳು ಉಂಟಾಗುತ್ತದೆ.

ಫ್ರಿಡ್ಜ್‌ನಲ್ಲಿರುವ ತಣ್ಣೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳೂ ಉಂಟಾಗುತ್ತವೆ. ಇದರಿಂದಗಾಗಿ ಹಿಂದೆ ಹಿರಿಯರು ತಣ್ಣೀರಿಗಾಗಿ ಮಡಕೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ, ಆಧುನಿಕ ಕಾಲದಲ್ಲಿ ಮಡಕೆ ಬದಲಿಗೆ ರೆಫ್ರಿಜರೇಟರ್‌ನಲ್ಲಿರುವ ನೀರನ್ನು ಹೆಚ್ಚು ಕುಡಿಯುತ್ತಿದ್ದಾರೆ. ಆದರೆ, ಫ್ರಿಡ್ಜ್‌ನಿಂದ ನೀರು ಕುಡಿಯುವುದಕ್ಕಿಂತ ಮಣ್ಣಿನ ಮಡಕೆಯಲ್ಲಿರುವ ನೀರು ಕುಡಿಯುವುದು ಯಾವಾಗಲೂ ಉತ್ತಮ. ನೈಸರ್ಗಿಕವಾಗಿ ನೀರನ್ನು ತಂಪಾಗಿಸಲು ಮಣ್ಣಿನ ಮಡಿಕೆಗಳು ಪ್ರಯೋಜನಕಾರಿ.

ಮಣ್ಣಿನ ಮಡಕೆಗಳನ್ನು ಖರೀದಿಸುವಾಗ ನೀವು ಕೆಲವು ವಿಷಯಗಳಿಗೆ ಗಮನಹರಿಸಬೇಕಾಗುತ್ತದೆ. ಏಕೆಂದರೆ, ಕೆಲವು ಮಡಕೆಗಳಲ್ಲಿ ನೀರು ಸರಿಯಾಗಿ ತಣ್ಣಗಾಗುವುದಿಲ್ಲ. ಇನ್ನು ಕೆಲವು ಮಡಕೆಗಳು ಬೇಗನೆ ಬಿರುಕು ಬಿಡುತ್ತದೆ. ಮಣ್ಣಿನ ಮಡೆಕೆಗಳನ್ನು ತೆಗೆದುಕೊಳ್ಳುವಾಗ ಈ ವಿಷಯಗಳನ್ನು ಗಮನಿಸಬೇಕಾಗುತ್ತದೆ.

ಮಣ್ಣಿನ ಮಡಕೆ ಖರೀದಿಸುವಾಗ ಬಣ್ಣದ ಬಗ್ಗೆ ಗಮನ ಕೊಡುವುದು ಮುಖ್ಯ. ಕಪ್ಪು ಬಣ್ಣದ ಮಡಕೆಯಲ್ಲಿರುವ ನೀರು ತಂಪಾಗಿರುತ್ತವೆ ಇದರಿಂದ ಕಪ್ಪು ಬಣ್ಣದ ಮಣ್ಣಿನ ಮಡಕೆಗಳನ್ನು ಆರಿಸಿಕೊಳ್ಳುವುದು ಉತ್ತಮ. ಜೊತೆಗೆ ಕೆಂಪು ಬಣ್ಣದ ಮಡಕೆಗಳನ್ನು ಸಹ ಖರೀದಿಸಬಹುದು. ಇದಕ್ಕಾಗಿ ನೀವು ಜೇಡಿಮಣ್ಣಿನಿಂದ ಮಾಡಿದ ಕೆಂಪು ಬಣ್ಣದ ಮಡಕೆಯನ್ನು ಆರಿಸಿಕೊಳ್ಳಬೇಕು.

ಮಣ್ಣಿನ ಮಡಕೆಯನ್ನು ತೆಗೆದುಕೊಳ್ಳುವಾಗ, ನಿಮ್ಮ ಕೈ ಬೆರಳಿನಿಂದ ಮಡಕೆಯ ಮೇಲೆ ಬಾರಿಸಿ ನೋಡಿ ತೆಗೆದುಕೊಳ್ಳಿ. ಸರಿಯಾಗಿ ಸುಟ್ಟಿರದೇ ಇರುವ ಮಣ್ಣಿನ ಮಡಕೆಗಳನ್ನು ತೆಗೆದುಕೊಳ್ಳಬೇಡಿ. ಮತ್ತು ಬಣ್ಣ ಬಳಿದ ಮಡಕೆಗಳನ್ನು ಖರೀದಿಸುವುದನ್ನು ತಪ್ಪಿಸಿ ಏಕೆಂದರೆ ಅವುಗಳು ನೀರಿನಲ್ಲಿ ಕರಗುವ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಮಣ್ಣಿನ ಮಡಕೆಗಳ ಕೆಳಭಾಗದಲ್ಲಿ ಅನೇಕ ಸೋರಿಕೆಯಾಗುತ್ತದೆ. ಆದ್ದರಿಂದ, ಕೆಳಭಾಗದಲ್ಲಿ ಸರಿಯಾಗಿದೆ ಇಲ್ಲವೆ ಎಂಬುದನ್ನು ಪರಿಶೀಲಿಸಬೇಕು. ಅದರಲ್ಲಿ ನೀರು ತುಂಬಿಸಿ ಸ್ವಲ್ಪ ಸಮಯದವರೆಗೆ ನೆಲದ ಮೇಲೆ ಬಿಡಿ. ಅದರಿಂದ ನೀರು ಸೋರುತ್ತಿದ್ದರೆ, ಕೆಲವು ಕಡೆಗಳಲ್ಲಿ ಬಿರುಕುಗಳಿದ್ದರೆ, ಸೋರಿಕೆಯಾಗುತ್ತದೆ.

WhatsApp Group Join Now
Telegram Group Join Now
Share This Article
error: Content is protected !!