Ad imageAd image

ಅಂದ್ರಹಳ್ಳಿ ಶಾಸಕ ಎಸ್ ಟಿ ಸೋಮಶೇಖರ್ ಅವರ ಕೃಪೆಯಿಂದ ಆರೋಗ್ಯ ತಪಾಸಣೆ ಶಿಬಿರ

Bharath Vaibhav
ಅಂದ್ರಹಳ್ಳಿ ಶಾಸಕ ಎಸ್ ಟಿ ಸೋಮಶೇಖರ್ ಅವರ ಕೃಪೆಯಿಂದ ಆರೋಗ್ಯ ತಪಾಸಣೆ ಶಿಬಿರ
WhatsApp Group Join Now
Telegram Group Join Now

ಬೆಂಗಳೂರು : ಮಾಜಿ ಸಚಿವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಮಾರ್ಗದರ್ಶನ ಸಹಕಾರ ಮತ್ತು ಅವರ ಆಶೀರ್ವಾದದಿಂದ ಈಗಿನ ಪರಿಸ್ಥಿತಿಯಲ್ಲಿ ಮನುಷ್ಯನು ಆರೋಗ್ಯ ಯಾವಾಗ ಏರುಪೇರು ಉಂಟಾಗುತ್ತದೆ ಎಂದು ನಮಗೆ ತಿಳಿಯುವುದಿಲ್ಲ ಆ ನಿಟ್ಟಿನಲ್ಲಿ ಅಂದ್ರಹಳ್ಳಿ ಕಾಂಗ್ರೆಸ್ ಪ್ರಭಾವಿ ನಾಯಕ, ಗ್ರೇಟರ್ ಬೆಂಗಳೂರು ಪಾಲಿಕೆ ಪ್ರಭಲ ಆಕಾಂಕ್ಷಿ ಅಭ್ಯರ್ಥಿ ಹಾಗೂ ಎಂಆರ್ ಟಿ ಕಲ್ಯಾಣ ಮಂಟಪದ ಮಾಲೀಕ ಟಿ. ಪ್ರಕಾಶ್ ಅವರು ಹೇಳಿದರು.

ಅವರು ಬಸವ ಅಕ್ಯ ಅಕಾಡೆಮಿ ಸಹಯೋಗದಲ್ಲಿ ಟಿ.ಪ್ರಕಾಶ್ ಅವರ ಸಹಕಾರ ತಮ್ಮ ನೇತೃತ್ವದಲ್ಲಿ ಎಂಆರ್ ಟಿ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣೆ ಶಿಬಿರಕ್ಕೆ ಪ್ರಕಾಶ್ ಅವರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಚಾಲನೆ ನೀಡಿ ಮಾತನಾಡಿ ಅವರು ನಮ್ಮ ದೊಡ್ಡ ಬಿದರಿಕಲ್ಲು ವಾರ್ಡಿನಲ್ಲಿ ಬರುವ ಎಲ್ಲಾ ಬಡಾವಣೆಯ ಮುಖಂಡರನ್ನು ಆಹ್ವಾನಿಸಿ ಪ್ರತಿ ಬಡಾವಣೆಯ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಆರೋಗ್ಯ ತಪಾಸಣೆ ಮಾಡಿಸಿ ಕೊಂಡು ಎಲ್ಲರೂ ಸುರಕ್ಷಿತವಾಗಿ ಆರೋಗ್ಯವಂತರಾಗಿ ಇರಲಿ ಎಂದು ಆಶಿಸುತ್ತೇನೆ ಎಂದರು.

ಇದೆ ವೇಳೆ ಮಾಜಿ ಸಚಿವ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಟಿ ಸೋಮಶೇಖರ್ ಅವರ ಸುಪುತ್ರ ಹಾಗೂ ಕಾಂಗ್ರೆಸ್ ಯುವ ನಾಯಕ ನಿಶಾಂತ್ ಸೋಮಶೇಖರ್ ಅವರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ನಮ್ಮ ಪಕ್ಷದ ಮುಖಂಡ ಟಿ. ಪ್ರಕಾಶ್ ಮತ್ತು ಅವರ ಸ್ನೇಹಿತರ ಜೊತೆಗೂಡಿ ತಪಾಸಣೆ ಶಿಬಿರ ಏರ್ಪಡಿಸಿದ್ದು ತುಂಬಾ ಖುಷಿ ಆಯ್ತು ದೊಡ್ಡ ಬಿದರಿಕಲ್ಲು ವಾರ್ಡಿನ ಸಮಸ್ತ ನಾಗರಿಕರು ಟಿ.ಪ್ರಕಾಶ್ ಅವರಿಗೆ ಮುಂದಿನ ದಿನಗಳಲ್ಲಿ ಅವರಿಗೆ ಆಶೀರ್ವಾದ ಮಾಡಬೇಕು ಮತ್ತು ಈ ಶಿಬಿರದ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ನಾಯಕ ನಿಶಾಂತ್ ಸೋಮಶೇಖರ್ ಅವರಿಗೆ ಟಿ. ಪ್ರಕಾಶ್ ಮತ್ತು ಸ್ನೇಹಿತರು ನಿಶಾಂತ್ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿದರು.

ಈ ಸಂದರ್ಭದಲ್ಲಿ ರಾಜು, ಶಿವಮೂರ್ತಿ, ಸಂತೋಷ್,ಉಮೇಶ್,ಡಿ ಗ್ರೂಪ್ ಸಂತೋಷ್, ಗಂಗರಾಜು, ಯೋಗೇಶ್, ಮಂಜುನಾಥ್, ಶ್ರೀನಿವಾಸ್, ಕುಮಾರ್ ಸೇರಿದಂತೆ ಹಲವಾರು ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!