ರಾಮದುರ್ಗ : ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಪೌರಾಡಳಿತ ನಿರ್ದೇಶನಾಲಯ ಪುರಸಭೆ ಕಾರ್ಯಾಲಯ ರಾಮದುರ್ಗ ಇವರ ನೇತೃತ್ವದಲ್ಲಿ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಯಿತು
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಪುರಸಭೆಯಲ್ಲಿ ಪೌರಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ಸರ್ಕಾರದ ಆದೇಶದಂತೆ ಸ್ವಚ್ಛತಾಹಿ ಸೇವರ್ ಎಂಬ ಶೀರ್ಷಿಕೆ ಅಡಿಯಲ್ಲಿ ದಿನನಿತ್ಯ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಪುರಸಭೆಯಿಂದ ವಿವಿಧ ಆಟೋಟ ಚಟುವಟಿಕೆಗಳು ಹಾಗೂ ಆರೋಗ್ಯ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಆಟೋಟ ಸ್ಪರ್ಧೆಯಲ್ಲಿ ಅಂದರೆ ಕ್ರಿಕೆಟ್ ಕಬಡ್ಡಿ ಹಗ್ಗ ಜಗ್ಗಾಟ ಸ್ಪರ್ಧೆಗಳಲ್ಲಿ ಪ್ರಥಮ ದ್ವಿತೀಯ ತೃತೀಯ ಬಂದವರಿಗೆ ಬಹುಮಾನಗಳನ್ನು ವಿತರಿಸಿದರು ಮತ್ತು ಎಲ್ಲ ಪೌರ ಕಾರ್ಮಿಕರಲ್ಲಿ ಹೆಚ್ಚಿನ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನಹರಿಸಿ ಕೆಲಸ ಮಾಡುವವರಿಗೆ ಅಂತಹ ಐದು ಜನ ಪೌರ ಕಾರ್ಮಿಕರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿದರು
ಜಿಲ್ಲಾಧಿಕಾರಿಗಳು ಕಾರ್ಯಾಲಯ ಜಿಲ್ಲಾ ನಗರಾಭಿವೃದ್ಧಿ ಕೋಶ್ ಬೆಳಗಾವಿ, ಪುರಸಭೆ ಕಾರ್ಯಾಲಯ ರಾಮದುರ್ಗ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿ 2.0 ಅವಾಸ ಯೋಜನೆಯಲ್ಲಿ (ನಗರ) ಹೌಸಿಂಗ್ ಫಾರ್ ಆಲ್ ಯೋಜನೆಅಡಿ ಅಂಗೀಕಾರ ಆಂದೋಲನ ದಿನಾಂಕ 04-09-2025 ರಿಂದ 31-10-2025 ರವರೆಗೆ ಈ ಯೋಜನೆಯಲ್ಲಿ ರಾಮದುರ್ಗ ಪುರಸಭೆ ಯಲ್ಲಿ ಸಾರ್ವಜನಿಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳಾದ ಈರಣ್ಣ ಕೆ ಗುಡದಾರಿ ಅವರು ಪೌರಕಾರ್ಮಿಕರ ಆರೋಗ್ಯದ ಸ್ಥಿತಿಗತಿ ಕುರಿತು ಮತ್ತು ಕುಟುಂಬದ ಅವಲಂಬಿತರ ಕುರಿತು ಮುಂಜಾಗ್ರತೆ ಬಗ್ಗೆ ಮತ್ತು ಪೌರಕಾರ್ಮಿಕರಿಗೆ ಸರಕಾರದಿಂದ ಸಿಗುವ ಹೆಚ್ಚಿನ ಸೌಲಭ್ಯಗಳ ಹಾಗೂ ಸಣ್ಣಪುಟ್ಟ ಬರುವು ಸೌಲಭ್ಯಗಳನ್ನು ತೆಗೆದುಕೊಳ್ಳಿ ದುರುಪಯೋಗ ಪಡಿಸಿಕೊಳ್ಳಬೇಡಿ ಮತ್ತು ಪೌರಕಾರ್ಮಿಕರಿಗೆ ಹೆಚ್ಚಿನ ಕಾಳಜಿ ವಹಿಸಿ ಮಾತನಾಡಿದರು.
ಅಂಚೆ ಕಚೇರಿಯ ನಿರೀಕ್ಷಕರಾದ ಶ್ರೀ ನಾಗರಾಜ ಮಳ್ಳಿ ಸರ್ ಅವರು ಪೌರಕಾರ್ಮಿಕರಿಗೆ ಅಂಚೆ ಕಚೇರಿಯಲ್ಲಿ ಸಿಗುವಂತ ಯೋಜನೆಗಳ ಬಗ್ಗೆ ಪೌರಕಾರ್ಮಿಕರಿಗೆ ಪಡೆದುಕೊಳ್ಳಿ ಎಂದು ಮಾಹಿತಿಯನ್ನು ಸೂಚಿಸಿದರು .
ಹಾಗೂ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಎಸ್ ಡಿ ಐನಾಪುರ್ ಆರೋಗ್ಯದ ಕುರಿತು ಮಾಹಿತಿಯನ್ನು ಸೂಚಿಸಿದರು.
ಈ ಕಾರ್ಯಕ್ರಮದ ಸಂದರ್ಭದಲ್ಲಿ ಪುರಸಭೆಯ ಪೌರ ಸೇವಾ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ರೇಣುಕಾ ಹಲಗಿ, ಹಾಗೂ ಕಚೇರಿ ವ್ಯವಸ್ಥಾಪಕರಾದ ಶ್ರೀ ಎಂ ಆರ್ ನದಾಫ್, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ಪಿ.ಎನ್ ಪಾಟೀಲ್, ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ಚಂದನ್ ಪಾಟೀಲ್, ಮತ್ತು ಪುರಸಭೆ ಇಲಾಖೆಯ ಎಲ್ಲ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ




