ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ಬ್ರೂಣಲಿಂಗ ಗ್ಯಾಂಗಕ್ಕೆ ಡೆಕಾಯಿ ಆಪರೇಷನ್ ಮೂಲಕ ಹೆಡೆಮುರಿ ಕಟ್ಟಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು.
ಬೆಳಗಾವಿಯಲ್ಲಿ ಮತ್ತೊಂದು ಭ್ರೂಣ ಲಿಂಗ ಪತ್ತೆ ಗ್ಯಾಂಗ್ ಖೆಡ್ಡಾಗೆ. ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಆಸ್ಪತ್ರೆಯ ಮೇಲೆ ಆರೋಗ್ಯಾಧಿಕಾರಿಗಳ ದಾಳಿ. ತಡರಾತ್ರಿ ದಾಳಿ ನಡೆಸಿ ಆಸ್ಪತ್ರೆ ಸೀಜ್ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಇಕ್ರಾ ಆಸ್ಪತ್ರೆಯ ಮೇಲೆ ಅಧಿಕಾರಿಗಳ ದಾಳಿ.
ಡಾ.ವಿವೇಕ್ ದೊರೆ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು. ಭ್ರೂಣಹತ್ಯೆ ತಡೆ ನಿಯೋಗದ ಅಧಿಕಾರಿಗಳಿಂದ ದಿಢೀರ್ ದಾಳಿ. ಏಜೆಂಟರು ಮೂಲಕ ಹಣ ಪಡೆದು ಭ್ರೂಣಲಿಂಗ ಪತ್ತೆ ಮಾಡ್ತಿದ್ದ ವೈದ್ಯರು. ತುಕಾರಾಂ ಖೋತ್ ಎಂಬ ಏಜೆಂಟನಿಂದ ಹಣ ಪಡೆವಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಅಧಿಕಾರಿಗಳು. 1 ಲಕ್ಷ 20 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವೈದ್ಯ ಖುಟೇಜಾ ಮುಲ್ಲಾ. ನಿನ್ನೆ ಒಂದೇ ದಿನ ನಾಲ್ಕು ಜನ ಗರ್ಭಿಣಿಯರ ತಪಾಸಣೆ. ರಾಜಾರೋಷವಾಗಿ ಭ್ರೂಣ ಲಿಂಗ ಪತ್ತೆ ಮಾಡಿ ಅವರಿಂದ ಹಣ ವಸೂಲಿ.
ಗೋಕಾಕ್ ಇಕ್ರಾ ಅಸ್ಪತ್ರೆಯನ್ನು ಸೀಜ್ ಮಾಡಿದ ಆರೋಗ್ಯಾಧಿಕಾರಿಗಳು. ಅಧಿಕಾರಿಗಳಿಗೆ ಡಿಹೆಚ್ಒ ಮಹೇಶ್ ಕೋಣಿ, ಡಾ. ವಿಶ್ವನಾಥ ಬೋವಿ ಜಿಲ್ಲಾ ಪಿ. ಸಿ & ಏನ್. ಡಿ. ಟಿ ನೂಡಲ್ ಅಧಿಕಾರಿ, ಮಂಜುನಾಥ್ ಬಿಸನಳ್ಳಿ, ಎಚ್. ಎ. ವಡೇ ಯರ್ ಅರೋಗ್ಯ ನೀರಿಕ್ಷ ನಾಧಿಕಾರಿಗಳು.ಟಿಹೆಚ್ಒ ಮುತ್ತಣ್ಣ ಕೊಪ್ಪದ ಸಾಥ್.
ವರದಿ: ವಿನೋದ. ಎಮ್. ಜೆ.