ಸೇಡಂ: ತಾಲೂಕಿನ ಶಿಲಾರಕೋಟ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಡಾ. ಮಧುಸೂಧನ್ ರೆಡ್ಡಿ ಪಾಟೀಲ್ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳಾದ ರಾಮಪ್ಪ ಅವರು ಬೇಟಿ ನೀಡಿ ವಿದ್ಯಾರ್ಥಿಗಳ ಕುಂದುಕೊರತೆಗಳ ಬಗ್ಗೆ ವಿಚಾರಿಸಿ ಮಾತನಾಡಿದರು.
ಶಾಲೆಯಲ್ಲಿ ಕೊಠಡಿಗಳು ಕಡಿಮೆ ಇದಾವೆ ಇಂತಹ ಸಂಧರ್ಭದಲ್ಲಿ ಸಾರ್ವಜನಿಕ ಗ್ರಂಥಾಲಯಕ್ಕೆ ಒಂದು ಕೋಣೆಯನ್ನು ತೆಗೆದುಕೊಂಡಿರುವುದು ಸರಿ ಅಲ್ಲಾ ಇದನ್ನು ಅದಷ್ಟು ಬೇಗ ಬೆರಕಡೆ ಸ್ಥಳಾಂತರ ಮಾಡಿ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಡಾ. ಮಧುಸೂಧನ್ ರೆಡ್ಡಿ ಪಾಟೀಲ್ ಅವರು ಹೇಳಿದರು.
ದೂರವಾಣಿ ಮೂಲಕ ತಾಲೂಕ ಪಂಚಾಯತ್ ಅಧಿಕಾರಿಗಳ ಜೊತೆ ಮಾತನಾಡಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಹೊಸ ಬಜೆಟ್ ಮಂಜೂರಾತಿ ಮಾಡುವಂತೆ ಮನವಿ ಮಾಡಿದರು.
ತದನಂತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬೇಟಿ ಅಲ್ಲಿನ ವಿದ್ಯಾರ್ಥಿಗಳ ಜೊತೆ ಶಿಕ್ಷಣದ ಬಗ್ಗೆ ಚರ್ಚಿಸಿದರು. ನಮ್ಮ ರಾಜ್ಯ ಮತ್ತು ದೇಶದ ಹೆಸರಿಗೆ ವ್ಯತ್ಯಾಸ ತಿಳಿಯದೆ ಉತ್ತರ ನೀಡಿದಕ್ಕೆ ಮುಖ್ಯ ಗುರುಗಳಾದ ಈರಪ್ಪ ಅವರನ್ನು ತರಾಟೆಗೆ ತಗೊಂಡರು ಹಾಗೆ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳಾದ ರಾಮಪ್ಪ, ಉಪಾಧ್ಯಕ್ಷರಾದ ಡಾ. ಮಧುಸೂಧನ್ ರೆಡ್ಡಿ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ ಮತ್ತು ಶಾಲಾ ಶಿಕ್ಷಕರು ಮತ್ತು ಮುದ್ದು ಮಕ್ಕಳು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




