Ad imageAd image

ಜ. 21 ರಂದು ರೋಟರಿ ಕ್ಲಬ್  ವತಿಯಿಂದ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರ ವಿತರಣಾ ಶಿಬಿರ

Bharath Vaibhav
ಜ. 21 ರಂದು ರೋಟರಿ ಕ್ಲಬ್  ವತಿಯಿಂದ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರ ವಿತರಣಾ ಶಿಬಿರ
WhatsApp Group Join Now
Telegram Group Join Now

ಅಥಣಿ :ರೋಟರಿ ಕ್ಲಬ್ ಆಫ್ ವೇಣುಗ್ರಾಮ ಬೆಳಗಾವಿ ಹಾಗೂರೋಟರಿ ಕ್ಲಬ್ ಆಫ್ ಅಥಣಿ.ಇವರ ಸಹಯೋಗದಲ್ಲಿ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋ, ಗಜಾನನ ಮಂಗಸೂಳಿ ಸಂಸ್ಥಾಪಕ ಅಧ್ಯಕ್ಷರು ತಿಳಿಸಿದರು.

ಬರುವ ಜನವರಿ 21-01-2026 ರಂದು ಸಮಯ : ಬೆಳಿಗ್ಗೆ 9-00 ರಿಂದ ಮಧ್ಯಾಹ್ನ 1-00 ಗಂಟೆಯವರೆಗೆ
ಯಶಸ್ವಿನಿ ಮಲ್ಟಿಸ್ಪೇಶಾಲಿಟಿ ಆಸ್ಪತ್ರೆ, ಶಿವಾಜಿ ಸರ್ಕಲ್, ಅಥಣಿಯಲ್ಲಿ ಜರುಗುವುದು.ಖ್ಯಾತ ವೈದ್ಯರಾದ Dr ಕಿಶೋರ ಜಗದಾಳೆ ಅವರು ಶ್ರವಣ ತಪಾಸಣೆ ಮಾಡಲಿದ್ದಾರೆ.

ಈ ಯೋಜನೆ ಕಡು ಬಡವರಿಗೆ ಮಾತ್ರ ಇದ್ದು ಎಲ್ಲರೂ ಸರಿಯಾದ ಸಮಯಕ್ಕೆ ಹಾಜರ ಇರಲು ವಿನಂತಿ ದಯವಿಟ್ಟು ಗಮನಿಸಿ: ಶಿಬಿರಕ್ಕೆ ಬರುವಾಗ ತಮ್ಮ ಆಧಾರ ಕಾರ್ಡ ಹಾಗೂ ರೇಶನ್ ಕಾರ್ಡ ಝರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು.
ದಯವಿಟ್ಟು ಆಸಕ್ತರು 18-01-2026 ರ ಮೊದಲು ತಮ್ಮ ಹೆಸರನ್ನು ಮೇಲೆ ತಿಳಿಸಿದ ಮೊಬೈಲ್ ನಂಬರಗಳಿಗೆ ಕರೆಮಾಡಿ ಹೆಸರನ್ನು ನೊಂದಾಯಿಸಲು ವಿನಂತಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ರೋ. ಸಚಿನ ಬಿ. ದೇಸಾಯಿ ಅಧ್ಯಕ್ಷರು, ರೋಟರಿ ಕ್ಲಬ್, ಅಥಣಿ. ಮೋ.: 9448637384/ ರೋ. ಶೇಖರ ಕೋಲಾರ ಕಾರ್ಯದರ್ಶಿ, ರೋಟರಿ ಕ್ಲಬ್, ಅಥಣಿ, .: 9448352617./ರೋ. ಡಾ|| ಆನಂದ ಕುಲಕರ್ಣಿ ರೋಟರಿ ಕ್ಲಬ್, ಅಥಣಿ, .: 944929 1849 ಇವರನ್ನು ಸಂಪರ್ಕಿಸಿರಿ ಎಂದು ತಿಳಿಸಿದರು.

ವರದಿ:ರಾಜು ವಾಘಮಾರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!