ಬೇಸಿಗೆಯಲ್ಲಿ ನೀವು ಎಚ್ಚರದಿಂದ ಇರದಿದ್ದರೆ ಹೃದಯಕ್ಕೆ ತೊಂದರೆ ಆಗಬಹುದು. ಬೇಸಿಗೆಯಲ್ಲಿ, ಆರೋಗ್ಯದ ಬಗ್ಗೆ ಗಮನಹರಿಸದಿದ್ದರೆ ಹೃದಯಾಘಾತಕ್ಕೆ ಕಾರಣವಾಗಬಹುದು. ಬೇಸಿಗೆಯಲ್ಲಿ ದೇಹ ತನ್ನ ಸಾಮಾನ್ಯ ತಾಪಮಾನ ಕಾಪಾಡಿಕೊಳ್ಳಲು ಶ್ರಮಿಸುವುದರಿಂದ ಹೃದಯ, ಶ್ವಾಸಕೋಶ ಮತ್ತು ಮೂತ್ರಪಿಂಡಗಳ ಮೇಲೆ ಅಧೀಕ ಒತ್ತಡವನ್ನುಂಟು ಮಾಡುತ್ತದೆ. ನೀವು ಹೃದ್ರೋಗವನ್ನು ಹೊಂದಿದ್ದರೆ ಹೆಚ್ಚಿನ ತಾಪಮಾನದಿಂದ ದೂರವಿರಬೇಕು.
ಬಿಸಿಲಿನ ತಾಪಕ್ಕೆ ಅತಿಯಾದ ದೇಹ ಅತೀಯಾಗಿ ಬೆವರುವುದರಿಂದ ನೀರಿನ ಕೊರತೆ ಉಂಟಾಗುತ್ತೆ. ಸಾಕಷ್ಟು ನೀರು ಕುಡಿದು ದೇಹದಲ್ಲಿ ನೀರಿನ ಕೊರತೆ ಕಡಿಮೆಯಾಗದಂತೆ ನೋಡುಕೊಳ್ಳಬೇಕು. ಇದರಿಂದ ರಕ್ತದೊತ್ತಡವನ್ನು ಕಡಿಮೆ ಆಗೋದನ್ನು ಸಹ ತಪ್ಪಿಸಬಹುದು. ಅಧೀಕ ನೀರಿನ ಸೇವನೆಯಿಂದ ದೇಹ ತಂಪಾಗಿಡುವುದು ಅಗತ್ಯ.
- ಅತೀಯಾದ ಬಿಸಿಲಿನಲ್ಲಿ ಹೋಗುವುದು ಹೃದಯ ರಕ್ತನಾಳದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
- ಬೇಸಿಗೆಯಲ್ಲಿ ಅತಿಯಾಗಿ ಕರಿದ ಆಹಾರ ಪದಾರ್ಥಗಳನ್ನು ಮಿತವಾಗಿ ಬಳಸಿ, ಇವು ಹೆಚ್ಚುವರಿ ಕೊಬ್ಬನ್ನು ಒದಗಿಸುತ್ತದೆ, ಇದು ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ.
- ಬೇಸಿಗೆಯಲ್ಲಿ ಸಂಪೂರ್ಣವಾಗಿ ವ್ಯಾಯಾಮ ಬಿಡುವುದು ನಿಮ್ಮ ಹೃದಯಕ್ಕೆ ಹಾನಿಕಾರಕ. ನಿಯಮಿತ ವ್ಯಾಯಾಮ ಹೃದಯದ ಸ್ಥಿತಿಯನ್ನು ಸುಧಾರಿಸುತ್ತದೆ.
- ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೆವರಿನ ಮೂಲಕ ನೀರಿ ದೇಹದಿಂದ ಹೊರಹೋಗುತ್ತದೆ. ದೇಹಕ್ಕೆ ನೀರಿನ ಕೊರತೆಯಾಗದಂತೆ ನೊಡಿಕೊಳ್ಳಬೆಕು. ಇದು ದೇಹದ ಸಮತೋಲಿತ ರಕ್ತ ಪರಿಚಲನೆಗೆ ಅಡ್ಡಿಯಾಗಿ ಹೃದಯಾಘಾತದ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
- ಬೇಸಿಗೆಯಲ್ಲಿ, ಅನೇಕರು ಅತಿಯಾದ ಬಿಯರ್ ಕುಡಿಯುತ್ತಾರೆ. ಇದು ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು.
- ತಂಪಾದ ನೀರು ಕುಡಿದರೆ ನಮ್ಮ ದೇಹದಲ್ಲಿ ತ್ವರಿತ ಪ್ರತಿಕ್ರಿಯೆ ಉಂಟಾಗಬಹುದು, ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಬೆವರುತ್ತಿದ್ದರೆ ತಣ್ಣೀರು ಕುಡಿಯೋದನ್ನು ತಪ್ಪಿಸಬೇಕು. ತಣ್ಣಿರನ್ನು ಕುಡಿಯುವ ಮೊದಲು ದೇಹದ ತಾಪಮಾನವನ್ನು ಸಾಮಾನ್ಯಗೊಳಿಸಬೇಕು.