ಚಾಮರಾಜನಗರ:– ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಸುತ್ತಮುತ್ತಲು ಕಳೆದ ಹಲವಾರು ದಿನಗಳಿಂದ ನಿರಂತರವಾಗಿ ಭರ್ಜರಿ ಮಳೆಯಾಗುತ್ತಿ ರುವ ಹಿನ್ನಲೆಯಲ್ಲಿ ಮಳೆಯ ನೀರಿನಿಂದ ರಸ್ತೆ ಸಂಪರ್ಕ ಸೇತುವೆಗಳು ಮುಳುಗಡೆಯಾಗುತ್ತಿದ್ದು, ತಗ್ಗು ಪ್ರದೇಶದತ್ತ ಮಳೆಯ ನೀರು ಹರಿಯತೊಡಗಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಾಳವಾಡಿ ತಾಲ್ಲೂಕಿನ ಮೆಟ್ಲವಾಡಿ, ಅರಳವಾಡಿ, ಕೊಂಗಹಳ್ಳಿ, ತಿಗಣಾರೆ , ತಾಳವಾಡಿ, ತಲಮಲೈ ಸೇರಿದಂತೆ ಹಲವಾರು ಕಡೆ ಭರ್ಜರಿ ಮಳೆಯಾಗಿದ್ದು, ಆ ಭಾಗದಲ್ಲಿರುವ ಕೆರೆ ಕಟ್ಟೆಗಳತ್ತ ಮಳೆಯ ನೀರು ಹರಿಯುತ್ತಿದೆ.
ಇನ್ನೂ ಕೆಲವೆಡೆ ಮಳೆಯ ನೀರು ರಸ್ತೆ ಮೇಲೆ ಹರಿತ್ತಿರುವುದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ತುಸು ಪ್ರಾಯಾಸವಾಗಿದೆ. ಬಿಸಿಲಿನ ತಾಪಮಾನದಿಂದ ಬತ್ತಿ ಹೋಗುತ್ತಿರುವ ಕರೆ ಕಟ್ಟೆಗಳಲ್ಲಿ ಇದೀಗ ಜೀವ ಜಲ ಹರಿಯುತ್ತಿದ್ದು, ಕೆರೆ ಕಟ್ಟೆಗಳಲ್ಲಿ ಹೊಸ ನೀರು ಸಂಗ್ರಹವಾಗುತ್ತಿದೆ. ಜೀವ ಜಲ ಕಂಡು ಗ್ರಾಮಾಂತರ ಪ್ರದೇಶದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ವರದಿ :ಸ್ವಾಮಿ ಬಳೇಪೇಟೆ