ಸಿರಿಗೇರಿ: ಇಲ್ಲಿನ ಸಮೀಪದ ದಾಸಪುರ ಗ್ರಾಮದ ಮಂಗಳವಾರ ಸಂಜೆ ಭಾರಿ ಗಾಳಿ ಮಳೆ ಸುರಿದ ಪರಿಣಾಮದಿಂದ 30 ರಿಂದ40 ಎಕರೆ ಭತ್ತದ ಬೆಳೆಯುವ ನೆಲಕಚ್ಚಿದ ನಾಶವಾಗಿದೆ. ಈ ಬೆಳೆಯು ಇನ್ನೇನು 10 ರಿಂದ12 ದಿನದಲ್ಲಿ ಕೊಯ್ಲು ಮಾಡಬೇಕಾಗಿತ್ತು. ಏಕಾಏಕಿ ಭಾರಿ ಮಳೆಯಿಂದ ಬೆಳೆ ನಾಶಕ್ಕೆ ಒಳಭಾಗ ರೈತರುಗಳಾದ ಟಿ ಚಂದ್ರಪ್ಪ, ಬಿ ಹನುಮಂತಪ್ಪ, ಪಿ ರುದ್ರಪ್ಪ, ಪಿ ಲವಣ್ಣ, ಗುಡಿಸಲಿ ಶೇಷಪ್ಪ, ಶಾನವಾಸಪುರ ಹನುಮಯ್ಯ, ಪೂಜಾರಿ ದ್ಯಾವಣ್ಣ, ಗುಡಿಸಲಿ ಈರಣ್ಣ ಈ ಮಳೆಯಿಂದ ಅವಾಂತರಗೊಂಡ ರೈತರು ಕಂಗಲಾಗಿ ತೋಚದಂತಾಗಿದೆ ಎಂದು ಹೇಳಿಕೊಂಡರು.

ಅದೇ ರೀತಿ ಸಿರಿಗೇರಿ ಗ್ರಾಮದ 3 ನೇ ವಾರ್ಡಿನಲ್ಲಿ ಕೇವಲ ಅರ್ಧಗಂಟೆಯಲ್ಲಿ ಜೋರಾದ ಮಳೆ ಸುರಿದಿದ್ದರಿಂದ ಗ್ರಾಮದ ಎಲ್ಲಾ ಚರಂಡಿಗಳ ನೀರು, ಕೆರೆ ನೀರು ಸೇರಿ ಕಾಲುವೆಯಂತೆ ಹರಿದು, ದ್ವಿಚಕ್ರ ವಾಹನಗಳು ಭಾಗಶಹ ಮುಳಗಿದ್ದವು, ಹಬ್ಬದ ವಾತಾವರಣ ಇರುವುದರಿಂದ ಗ್ರಾಹಕರು ಅಂಗಡಿಗಳ ಪೂಜೆ ಕೈಂಕಾರ್ಯ ಗಳಿಗೆ ಹೂ, ಹಣ್ಣು,ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುವಲ್ಲಿ ನಿರತರಾಗಿದ್ದರು.
ಕೆಲ ಕಾಲ ಜನಜೀವನ ಅಸ್ತವ್ಯಸ್ತಗೊಳಿಸಿತು. 3 ನೇ ವಾರ್ಡಿನ ರಸ್ತೆಯಲ್ಲಿ ಭಾರಿ ನೀರು ಸೇರಿದ್ದರಿಂದ ತಾಯಿಯು ಮಗನನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುವ ದೃಶ್ಯವು ಮನಕಲುಕುವಂತಿತ್ತು.
ಅಲ್ಲಿನ ನಿವಾಸಿಗಳು ಅನೇಕ ಬಾರಿ ಶಾಸಕರಿಗೆ, ಜಿ ಪಂ ಸಿಇಒಗೆ, ಗ್ರಾಮ ಪಂಚಾಯಿತಿಯ ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದರು ಈ ಕೆಲಸಕ್ಕೆ ಅನುದಾನ ಹೆಚ್ಚು ಬೇಕು ಮಾಡುವುದಕ್ಕೆ ಆಗುವುದಿಲ್ಲ ಎಂದು ನುಳಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಇಲ್ಲವೇ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
ಮುಂದಿನ ದಿನಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲವೆಂದರೆ ಅಲ್ಲಿ ನಿವಾಸಿಗಳು ಅವರಿಗೆ ತಕ್ಕ ಪಾಠ ಕಲಿಸುವುದಂತು ನಿಜ.
ವರದಿ: ಶ್ರೀನಿವಾಸ ನಾಯ್ಕ




