ಕನ್ನಡ ತೆಲುಗು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಹೆಬಾ ಪಟೇಲ್ ಇಂದು ತಮ್ಮ 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
2014ರಲ್ಲಿ ತೆರೆಕಂಡ ಶರಣ್ ನಟನೆಯ ‘ಅಧ್ಯಕ್ಷ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ ಹೆಬಾ ಪಟೇಲ್ ಬಳಿಕ ತಮಿಳಿನ ‘ತಿರುಮಾನಂ ಎನುಮ್ ನಿಕ್ಕಃ’ ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು.
ಬಳಿಕ ‘ಅಲಾ ಎಲಾ’ ಸೇರಿದಂತೆ ‘ಕುಮಾರಿ 21F’ ‘ಎಕ್ಕಡಿಕಿ ಪೋತಾವು ಚಿನ್ನವಾಡ’ ‘ಮಿಸ್ಟರ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರು.
ಕಳೆದ ವರ್ಷ ‘ಹನಿಮೂನ್ ಎಕ್ಸ್ಪ್ರೆಸ್’ ‘ಧೂಮ್ ಧಾಮ್’ ನಲ್ಲಿ ಅಭಿನಯಿಸಿದ್ದ ಇವರು ಇತ್ತೀಚಿಗೆ ‘ಸಸನ್ ಸಭಾ’ ‘ಆದ್ಯಾ’ ‘ಒಡೆಲಾ 2 ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.
ಇದರ ಬೆನ್ನಲ್ಲೇ ಹತ್ತು ವರ್ಷದ ಬಳಿಕ ಕನ್ನಡದಲ್ಲಿ ‘ರಾಮರಸ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರತಂಡ ಇಂದು ಹೆಬಾ ಪಟೇಲ್ ಅವರ ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ.