ಚಿಕ್ಕೋಡಿ:- ತಾಲೂಕಿನ ಕರೋಶಿ ಗ್ರಾಮದ ಲಕ್ಷ್ಮೀದೇವಿಯ ಪ್ರತಿ ವರ್ಷ ಹೆಡೆಯ ಜಾತ್ರೆ ಯ ನಡೆಯುವಂತೆ ಈ ವರ್ಷವೂಈ ಜಾತ್ರೆಯ ಸಂಭ್ರಮ ಅತಿ ಅದ್ದೂರಿಯಿಂದ ನಿನ್ನೆ ಜರುಗಿತು.
ಈ ಜಾತ್ರೆಯ ಸಂಭ್ರಮದಲ್ಲಿ ಲಕ್ಷ್ಮಿಯ ದೇವಿಯ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾಪ್ರಸಾದ ನಂತರ ಎರಡು ಸ್ಪರ್ಧಾರ್ಥಿಗಳ ನಡುವೆ ಗಾಯನ ಸ್ಪರ್ಧೆ ನಡೆಯುತ್ತದೆ.
ಇದರಲ್ಲಿ ಮುಂಜಾನೆ 10 ರಿಂದ ಸಾಯಂಕಾಲ 6:00 ವರೆಗೆ ಶ್ರೀ ಲಕ್ಷ್ಮಿ ದೇವಿ ಮೈದಾನದಲ್ಲಿ ಶ್ರೀ ಬೀರೇಶ್ವರ ಗಾಯನ ಸಂಘ, ಹಾಗೂ ಶ್ರೀಮಾಯ್ಯವ್ವಾ ಡೊಳ್ಳಿನ ಸಂಘ, ಇವು ಎರಡರ ಮಧ್ಯೆ ಸವಾಲ ಮತ್ತು ಜವಾಬ್ ಎಂಬ ಗಾಯನದ ಮೂಲಕ ಉತ್ತರಿಸಿ ಸೋಲೊ ಅಥವಾ ಗೆಲುಓ ಎಂಬುದನ್ನು ಕಡೆ ಜಾತ್ರೆಯ ಕಮಿಟಿ ನಿರ್ಣಯಿಸುತ್ತದೆ.
ನಂತರ ಅವರಿಗೆ ಬಹುಮಾನ ನೀಡಿ ಸ್ವಾಗತಿಸಿ ಸತ್ಕರಿಸಿ ಎಲ್ಲರೂ ಆನಂದಿಸುತ್ತಾರೆ ಇದೆ ಈ ಲಕ್ಷ್ಮಿ ದೇವಿಯ ಜಾತ್ರೆಯ ಮಹಿಮೆ ಮತ್ತು ಮಹತ್ವದ ಸಂಭ್ರಮ ನಂತರ ಸಾಯಂಕಾಲ 7:00ಗೆ ಭೇಟೆಯ ಮಹಾಪ್ರಸಾದ ನಡೆಯುತ್ತದೆ.
ಈ ಜಾತ್ರೆಯ ಸಂದರ್ಭದಲ್ಲಿ ಕರೋಸಿಯ ಲಕ್ಷ್ಮೀದೇವಿ ಕಮಿಟಿಯರಾದ ಶ್ರೀ ಸಂಭಾಜಿ ನಿಕ್ಕಮ್, ತಾನಾಜಿ ಪವಾರ್, ಮಹದೇವ್ ಮಾಳಗೆ, ದುಂಡಪ್ಪ ಸಿಂಗಾಯಿ, ಸೂರಜ್ ಮುಂಡೆ, ಅಶೋಕ್ ಸಿಂಗಾಯಿ (ಲಕ್ಷ್ಮೀದೇವಿ ಪೂಜೇರಿ) ಜೀವನ ಪವಾರ್, ಮಲ್ಲಿಕಾರ್ಜುನ ಸಿಂಗಾಯಿ,
ಮತ್ತು ಇತರೆಲ್ಲ ಕಮಿಟಿಯ ಸದಸ್ಯರು ಹಾಗೂ ಗ್ರಾಮದ ಸದ್ಭಕ್ತರ ಉಪಸ್ಥಿತಿಯಲ್ಲಿ ಈ ಇಡೀ ಜಾತ್ರೆ ಸಮಾರಂಭ ಅತಿ ಸಂತೋಷದಿಂದ ಮುಕ್ತಾಯ ಗೊಂಡಿತು.
ವರದಿ ರಾಜು ಮುಂಡೆ