ಉತ್ತರಾಖಂಡ : ಇಲ್ಲಿನ ಪ್ರಸಿದ್ಧ ಗಂಗೋತ್ರಿ ಯಾತ್ರಾ ಸ್ಥಳಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಏಕಾಏಕಿ ಪತನಗೊಂಡ ಪರಿಣಾಮ ಆರು ಮಂದಿ ಪ್ರಯಾಣಿಕರು ಸಾವನ್ನಪ್ಪಿದ ಘಟನೆ ಉತ್ತರಾಖಂಡದ ಉತ್ತರಕಾಶಿಯ ಗಂಗಾನಿ ಬಳಿ ನಡೆದಿದೆ.
ಗಂಗೋತ್ರಿ ಯಾತ್ರಾ ಸ್ಥಳಕ್ಕೆಂದು ಪೈಲೆಟ್ ಸೇರಿದಂತೆ ಒಟ್ಟು ಆರು ಜನರಿದ್ದ ಹೆಲಿಕಾಪ್ಟರ್ ದೆಹಲಿಯ ಡೆಹ್ರಾಡೂನ್ ನಿಂದ ಹರ್ಸಿಲ್ ಹೆಲಿಪ್ಯಾಡ್ ಗೆ ತೆರಳುತ್ತಿತ್ತು.
ಈ ವೇಳೆ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ ಪರಿಣಾಮ ಆರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಅಪಘಾತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.




