ಹಟ್ಟಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಜಗನ್ನಾಥ್ ನಿರ್ಲಕ್ಷ
ಹಟ್ಟಿ ಚಿನ್ನದ ಗಣಿ : ಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಬರುವ ಸಂತೆ ಬಜಾರ್ ಪ್ರತಿ ರವಿವಾರ ಬಂತೆಂದರೆ ಸಾಕು ರೈತರು ಬೆಳೆದ ತರಕಾರಿ,ಹಣ್ಣು, ಜೋಳ, ಗೋಧಿ ಸಜ್ಜಿ ಇನ್ನಿತರ ಗ್ರಹ ಬಳಕೆಯ ವಸ್ತುಗಳನ್ನು ತೆಗೆದುಕೊಂಡು ಬಂದು ಮಾರಾಟ ಮಾಡುತ್ತಾರೆ,ಆದರೆ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿರುವ ಸಂತೆ ಬಜಾರ್, ಜಾಗದಲ್ಲಿ ಕುಳಿತು ವ್ಯಾಪಾರ ಮಾಡುವ ಪರಿಸ್ಥಿತಿ ರೈತರದಾಗಿದೆ ಖರೀದಿ ಮಾಡಲು ಬಂದ ಗ್ರಾಹಕರು ಸಹ ಈ ದುರ್ವಾಸನೆಯಲ್ಲಿ ಮತ್ತು ಕೆಸರು ಗುಂಡಿಯಲ್ಲಿ ನಿಂತು ಖರೀದಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ವ್ಯಾಪಾರಕ್ಕೆಂದು ಕುಳಿತ ರೈತರ ಮಧ್ಯದಲ್ಲಿ ಹಂದಿ ಜಾನುವಾರುಗಳು ಸೇರಿದಂತೆ,
ತಂದಂತ ತರಕಾರಿಗಳನ್ನು ತಿನ್ನಲು ಮೇಲೆ ಬರುತ್ತವೆ, ಇದರಿಂದ ರೈತರಿಗೆ ಯಾವುದೇ ಸುರಕ್ಷತೆ ಇಲ್ಲದೆ ವ್ಯಾಪಾರ ಮಾಡಲು ಆಗುತ್ತಿಲ್ಲ
ಹಟ್ಟಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ನಿರ್ಲಕ್ಷತನದಿಂದ ರೈತರಿಗೂ ಮತ್ತು ಗ್ರಾಹಕರಿಗೂ ತೊಂದರೆಯಾಗುತ್ತಿದೆ
ಈ ಸಂತೆ ಬಜಾರಿನಿಂದ ಲಕ್ಷಾಂತರ ರೂಪಾಯಿ ಆದಾಯ ಹಟ್ಟಿ ಪಟ್ಟಣ ಪಂಚಾಯತಿಗೆ ಬಂದರು ಇಲ್ಲಿಯ ಮುಖ್ಯ ಅಧಿಕಾರಿಯಾಗಲಿ ಅಥವಾ ಅಧ್ಯಕ್ಷರ ಉಪಾಧ್ಯಕ್ಷರು ಸದಸ್ಯರಾಗಲಿ ಯಾರಿಗೂ ಈ ಸಂತೆ ಬಜಾರ್ ದು ಸ್ಥಿತಿ ನೋಡಿಯೂ ನೋಡದಿರೋ ಹಾಗೆ ಕಣ್ಮುಚ್ಚಿ ಕುಳಿತಿದ್ದಾರೆ ಅನ್ನುವುದಕ್ಕೆ ಇದೇ ಉದಾಹರಣೆ ,
ವ್ಯಾಪಾರ ಮಾಡಲು ಬಂದ ರೈತರು, ಖರೀದಿದಾರರು ಪಟ್ಟಣ ಪಂಚಾಯತಿ ಅಧಿಕಾರಿಗೆ ಇಡಿ ಶಾಪ ಹಾಕುತ್ತಾ ಖರೀದಿ ಮಾಡಿಕೊಂಡು ಹೋಗುವ ಪರಿಸ್ಥಿತಿ ಇದೆ.
ಸಂತೆ ಬಜಾರ್ ನಿಂದ ಲಕ್ಷಾಂತರ ರೂಪಾಯಿ ಆದಾಯ ಬಂದರು ಎಲ್ಲಿಗೆ ಹೋಯಿತು ಅನ್ನುವ ಪ್ರಶ್ನೆ…? ಆ ಹಣದಿಂದ ಸಂತೆ ಬಜಾರ್ ಜಾಗವನ್ನು ಅಭಿವೃದ್ಧಿಪಡಿಸುವುದು ಬಿಟ್ಟು ಬೇರೆ ಬೇರೆ ವೈಯಕ್ತಿಕ ಕೆಲಸಗಳಿಗೆ ಹಣ ಬಳಸಿಕೊಂಡು ಸಂತೆ ಬಜಾರ್ ನೀಲಾಕ್ಷಿಸಿದ್ದಾರೆ ಎಂದು ಇಲ್ಲಿಯ ಸ್ಥಳೀಯರ ಆರೋಪವಾಗಿದೆ,
ಇನ್ನು ಮುಂದಾದರೂ ಕಣ್ಣು ತೆರೆಯುವರೇ ಅಥವಾ ಕಣ್ಣಿದ್ದರೂ ಕೂಡನಂತೆ ಇರುವರೆ ಕಾಯ್ದು ನೋಡೋಣ
ವರ್ಷ ಕಳೆದರೂ ಸಂತೆ ಹರಾಜ್ ಮಾಡದ ಅಧಿಕಾರಿಗಳು ಮೇಲ್ನೋಟಕ್ಕೆ ಕಮಿಷನ್ ಹಾಸಿಗೆ ಬಿದ್ದು ಸಂತೆ ಬಜಾರ್ ಮತ್ತೆ ಹಿಂದೆ ಪಡೆದಿರುವ ವ್ಯಕ್ತಿಗೆ 10% ಹೆಚ್ಚಿಗೆ ಆದಾಯದ ಮೇಲೆ ನೀಡುವುದು ಎಷ್ಟರಮಟ್ಟಿಗೆ ಸೂಕ್ತ ಎನ್ನುವುದು ಇಲ್ಲಿಯ ಕೆಲ ಸಂಘಟನೆಗಳ ಆರೋಪವಾಗಿದೆ
ಪಟ್ಟಣ ಪಂಚಾಯಿತಿ ಅಧಿಕಾರಿಯನ್ನು ವಿಚಾರಿಸಿದಾಗ ಜಿಲ್ಲಾಧಿಕಾರಿಯ ಹೆಸರು ಹೇಳುತ್ತಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರಿಗೆ ಕೊಡುವುದಾಗಿ ಸ್ಪಷ್ಟವಾಗಿ ತಿಳಿಸುತ್ತಾರೆ, ಹರಾಜಿನಿಂದ ಹೆಚ್ಚಿಗೆ ಹಣ ಬರುತ್ತಿದ್ದರು ಸಂತೆ ಬಜಾರ್ ಹರಾಜ್ ಕರೆಯದೆ ಆ ವ್ಯಕ್ತಿಗೆ ಕೊಡುವುದು ನೋಡಿದರೆ ಕಮಿಷನ ಆಸೆಗೆ ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತದೆ
ಕೂಡಲೇ ಜಿಲ್ಲಾಧಿಕಾರಿಗಳು ಹಟ್ಟಿ ಪಟ್ಟಣ ಪಂಚಾಯತಿಗೆ ಲಕ್ಷಾಂತರ ಆದಾಯ ನೀಡುತ್ತಿರುವ ಸಂತೆ ಬಜಾರ್ ಹರಾಜು ಬಹಿರಂಗವಾಗಿ ಕರೆಯಲು ಹಟ್ಟಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿಗೆ ಸೂಚಿಸಬೇಕೆಂದು ಇಲ್ಲಿಯ ಸಂಘಟನೆ ಗಳ ಒತ್ತಾಯವಾಗಿದೆ
ವರದಿ : ಶ್ರೀನಿವಾಸ ಮಧುಶ್ರೀ