ಪಾವಾಗಡ : ತಾಲ್ಲೂಕಿನ ಕೋಟಗುಡ್ಡ ವಲಯದ ಕರಿಯಮ್ಮನಪಾಳ್ಯ ತಿರುಮಲ ತಿಮ್ಮಪ್ಪ ದೇವಸ್ಥಾನದ ಕಟ್ಟಡ ರಚನೆಗೆ ಶ್ರೀ ಕ್ಷೇತ್ರಧಮ೯ಸ್ಥಳದಿಂದ ಪೂಜ್ಯರ ಆಶೀವಾ೯ದದಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ದೇವಸ್ಥಾನದ ಅಭಿವೃದ್ಧಿಗೆ 1.50 ಲಕ್ಷ ಅನುದಾನದ ಡಿ. ಡಿ ಯನ್ನ ದೇವಸ್ಥಾನ ಸಮಿತಿಯವರಿಗೆ ವಿತರಣೆ ಮಾಡಿ ತಾಲ್ಲೂಕು ಯೋಜನಾಧಿಕಾರಿಗಳಾದ ಮಹೇಶ್ ರವರು ಮಾತನಾಡಿ ನೀವು ಕಳುಹಿಸಿದ ಮನವಿಗೆ ಸ್ಪಂದಿಸಿದ ಪೂಜ್ಯರು ತಕ್ಷಣವೇ ದೇವಸ್ಥಾನದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದಾರೆ.
ಇದು ನಿಮ್ಮೆಲ್ಲರ ಭಾಗ್ಯ ಸಮಿತಿಯವರು ಹಾಗೂ ಗ್ರಾಮಸ್ಥರು ಒಗ್ಗಟ್ಟಾಗಿ ನಿಮ್ಮ ಗ್ರಾಮದಲ್ಲಿರುವ ಸ್ವ ಸಹಾಯ ಸಂಘಗಳ ಬಲವಧ೯ನೆ ಮಾಡಿಕೊಂಡು ಯೋಜನೆಯ ಕಾಯ೯ಕ್ರಮಗಳಿಗೆ ಸಕ್ರಿಯವಾಗಿ ಭಾಗವಹಿಸಿ ಸಹಕಾರ ನೀಡಲು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಟಿ.ಹಳ್ಳಿ ವಿ.ಎಸ್.ಎಸ್. ಎನ್. ನಿರ್ದೇಶಕರಾದ ಲೋಕೇಶ್ ಪಾಳೇಗಾರ್ . ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ. ಪ್ರಧಾನ ಅರ್ಚಕರಾದ ಚಿನ್ನಪ್ಪ. ರಾಜ್ಯ ಸಂಪನ್ಮೂಲ ವ್ಯಕ್ತಿ ನಿಂಗಪ್ಪ. ದೈಹಿಕ ಶಿಕ್ಷಕರಾದ ರಾಜಗೋಪಾಲ್ ಯುವ ಮುಖಂಡರಾದ ಗೋಪಾಲಪ್ಪ ಓಂಕಾರ್ ನಾಯಕ. ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಹಾಗೂ ದೇವಸ್ಥಾನದ ಎಲ್ಲಾ ಪದಾಧಿಕಾರಿಗಳು ಮತ್ತು ವಲಯ ಮೇಲ್ವಿಚಾರಕರಾದ ಹಾಲೇಶಪ್ಪ . ಸೇವಾ ಪ್ರತಿನಿಧಿಗಳು/ ಗ್ರಾಮಸ್ಥರು ಬಾಗವಹಿಸಿದ್ದರು.
ವರದಿಗಾರರು: ಶಿವಾನಂದ ಪಾವಗಡ




