Ad imageAd image

ಮಲ್ಕಪಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆಗೆ ಗ್ರಹಣ

Bharath Vaibhav
ಮಲ್ಕಪಲ್ಲಿ ಆರೋಗ್ಯ ಕೇಂದ್ರ ಉದ್ಘಾಟನೆಗೆ ಗ್ರಹಣ
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ೨೦೦೯-೧೦ನೇ ಸಾಲಿನಲ್ಲಿ ಗ್ರಾಮ ಸ್ವರಾಜ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಸರಕಾರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಉಪಕೇಂದ್ರವು ಇಂದಿಗೆ ಸುಮಾರು ೧೬ವರ್ಷಗಳು ಕಳೆದರೂ ಕೂಡ ಉದ್ಘಾಟನೆ ಆಗದೆ ದನಕರುಗಳ ಕೊಠಡಿಯಾಗಿದೆ.

ಸಾರ್ವಜನಿಕರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಆಗಿನ ಶಾಸಕರಾದ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ಅವರು ಈ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದರು. ಆದರೆ ಅವರು ಸತತ ಮೂರನೇ ಬಾರಿ ಗೆದ್ದು ಎರಡು ಬಾರಿ ಸಚಿವರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ ಆದರೆ ಇದುವರೆಗೂ ಈ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿಲ್ಲಾ.

ಸಚಿವರು ಪ್ರತಿ ತಿಂಗಳು ಒಂದು ಗ್ರಾಮ ಪಂಚಾಯಿತಿಗೆ ಬೇಟಿ ನೀಡಿ ವಿವಿಧ ಕಾಮಗಾರಿಗಳಿಗೆ ನೀಡುತ್ತಿದ್ದಾರೆ. ಆದರೆ ಹದಿನಾರು ವರ್ಷ ಕಳೆದರೂ ಈ ಗ್ರಾಮಕ್ಕೆ ಭೇಟಿ ನಿಡಿಲ್ಲವೇ ಎಂಬ ಸಂದೇಹ ಬರುತ್ತಿದೆ.

ಸಾರ್ವಜನಿಕರಿಗೆ ಉಪಯೋಗವಾಗುವ ಇಂತಹ ಕಟ್ಟಡಗಳನ್ನು ನಿರ್ಮಿಸಿ ಮತ್ತೆ ನಿರ್ಲಕ್ಷ್ಯ ಮಾಡುವುದು ಸರಿಸಂಜಸವಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಚಿವರ ಗಮನಕ್ಕೆ ತಂದು ಈ ಉಪಕೆಂದ್ರಕ್ಕೆ ಒಬ್ಬ ಅಧಿಕಾರಿಯನ್ನು ನೇಮಿಸಿ ಉದ್ಘಾಟನೆ ಮಾಡಬೇಕು ಸ್ಥಳೀಯರ ಕನಸನ್ನು ನನಸಾಗಿಸಲು ಮುಂದಾಗಬೇಕಿದೆ.

ನಮ್ಮ ಊರಿನಲ್ಲಿ 2009/ 10 ಸಾಲಿನಲ್ಲಿ ಡಾ.ಶರಣ ಪ್ರಕಾಶ ಪಾಟೀಲ್ ಸಾಹೇಬರ ಮುತುವರ್ಜಿಯಿಂದ ಪೂರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣವಾಯಿತು. ಆದರೆ ನಂತರ ಆ ಕಟ್ಟಡ ಉದ್ಘಾಟನೆಯಾಗದೆ ಸುಮಾರು 10/15 ವರ್ಷಗಳಿಂದ ಬೀಳುಬಿದಿದ್ದು. ಇದುವರೆಗೆ ಎಷ್ಟೇ ದೂರುಗಳನ್ನು ಕೊಟ್ಟರು ಕೂಡ ಯಾವುದೇ ಪ್ರಯೋಜನ ಆಗಿಲ್ಲ.
ಈಗ ಸಧ್ಯಕ್ಕೆ ಪೂರ್ವ ಪ್ರಾಥಮಿಕ ಆರೋಗ್ಯ ಕೇಂದ್ರದವು ಬಾಡಿಗೆ ಕೊಟ್ಟಡಿಯಲ್ಲಿ ನಡೆಯುತ್ತಿದ್ದು. ಅಲ್ಲಿಗೆ ರೋಗಿಗಳಿಗೆ ಹೋಗಲು ಆಗುತ್ತಿಲ್ಲ. ಪ್ರಯುಕ್ತ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದಂತಹ ಶರಣಪ್ರಕಾಶ್ ಪಾಟೀಲ್ ಸಾಹೇಬರು ಈ ಕಡೆ ಗಮನ ಕೊಟ್ಟು ಪೂರ್ವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಸಮಸ್ತ ಮಲ್ಕಪ್ಪಲ್ಲಿ ಗ್ರಾಮದ ಗ್ರಾಮದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ನವದ ರೆಡ್ಡಿ ಗ್ರಾಮ ಪಂಚಾಯತ್ ಸದಸ್ಯರು ಮಲ್ಕಪಲ್ಲಿ ಅವರು ಮನವಿ ಮಾಡಿಕೊಂಡರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!