ನಿಮಗೆ ಗೊತ್ತಿತ್ತಾ? ನಟಿ ಹೇಮಾಮಾಲಿನಿ ಹಾಗೂ ಆಕೆಯ ಪತಿ ಧರ್ಮೇಂದ್ರರದ್ದೊಂದು ವಿಚಿತ್ರ ದಾಂಪತ್ಯ. ಹೇಮಾಮಾಲಿನಿ ಈತನನ್ನು ಮದುವೆಯಾಗುವಾಗ ಇವನಿಗೆ ಆಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದವು. ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಆತ ಎರಡನೇ ಮದುವೆಯಾದ! ಇದೊಂದು ವಿಚಿತ್ರ ಕಥೆ.
ಹೇಮಾ ಮಾಲಿನಿ ಬಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಳು. ʼಶೋಲೆʼ ಫಿಲಂ ಶೂಟಿಂಗ್ ಹೊತ್ತಿಗೆ ಧರ್ಮೇಂದ್ರ, ಹೇಮಾಮಾಲಿನಿಯ ಫ್ಯಾನ್ ಆಗಿ ಬದಲಾಗಿದ್ದ. ಆಗ ಆಕೆ ಬಾಲಿವುಡ್‌ನ ಕನಸಿನ ಕನ್ಯೆ. ಹೇಮಾ ಮಾಲಿನಿಯ ಸೌಂದರ್ಯದಿಂದ ಎಲ್ಲರೂ ಹುಚ್ಚರಾಗಿದ್ದರು. ಹೇಮಾ ಮಾಲಿನಿಯ ಹೆಸರು ಅನೇಕ ನಟರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ ಆಕೆ ಧರ್ಮೇಂದ್ರನನ್ನು ಆಳವಾಗಿ ಪ್ರೀತಿಸುತ್ತಿದ್ದಳು. ಆದರೆ ಧರ್ಮೇಂದ್ರ ಸಿನಿಮಾಗೆ ಪ್ರವೇಶಿಸುವ ಮೊದಲು ವಿವಾಹವಾಗಿದ್ದ ಮತ್ತು ನಾಲ್ಕು ಮಕ್ಕಳ ತಂದೆಯೂ ಆಗಿದ್ದ. ಧರ್ಮೇಂದ್ರ ಮೊದಲು ಪ್ರಕಾಶ್ ಕೌರ್ ಎಂಬಾಕೆಯನ್ನು ವಿವಾಹವಾಗಿದ್ದ. ಅವರಿಗೆ ನಾಲ್ಕು ಮಕ್ಕಳು- ಸನ್ನಿ ಡಿಯೋಲ್, ಅಜೀತಾ ಡಿಯೋಲ್, ಬಾಬಿ ಡಿಯೋಲ್ ಮತ್ತು ವಿಜೇತ ಡಿಯೋಲ್. ಇದೆಲ್ಲದರ ಹೊರತಾಗಿಯೂ ಹೇಮಾಮಾಲಿನಿ, ಧರ್ಮೇಂದ್ರ ಅವರನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು. ಇದರ ಹೊರತಾಗಿಯೂ ಹೇಮಾಮಾಲಿನಿ ಮತ್ತು ಧರ್ಮೇಂದ್ರ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರು.
ಧರ್ಮೇಂದ್ರ, ಹೇಮಾಮಾಲಿನಿಯನ್ನು ಮದುವೆಯಾಗಲು ತನ್ನ ಮೊದಲ ಪತ್ನಿ ಪ್ರಕಾಶ್ ಕೌರ್‌ಗೆ ವಿಚ್ಛೇದನ ನೀಡಲಿಲ್ಲ. ಕಾರಣವೆಂದರೆ ಆಕೆ ಆತನಿಗೆ ವಿಚ್ಛೇದನ ಕೊಡಲಿಲ್ಲ. ಹಾಗಿದ್ದೂ ಧರ್ಮೇಂದ್ರ 1980ರಲ್ಲಿ ಹೇಮಾಮಾಲಿನಿಯನ್ನು ಮದುವೆ ಮಾಡಿಕೊಂಡ. ಅದೂ ಮುಸ್ಲಿಂ ಪದ್ಧತಿಯಂತೆ ನಿಕಾಹ್ ಆದ. ವಿಚಿತ್ರವೆಂದರೆ ಧರ್ಮೇಂದ್ರನೂ ಮುಸ್ಲಿಂ ಅಲ್ಲ, ಹೇಮಾಮಾಲಿನಿಯೂ ಆಗಿರಲಿಲ್ಲ. ಹಾಗಿದ್ದರೂ ಅವರು ಮೌಲಾನಾ ಕಾಜಿ ಅಬ್ದುಲ್ಲಾ ಫೈಜಾಬಾದಿ ಅವರ ನೇತೃತ್ವದಲ್ಲಿ ನಿಕಾಹ್ ಆದರು. ಇದಕ್ಕಾಗಿ ಆತ ತಾತ್ಕಾಲಿಕವಾಗಿ ಮುಸ್ಲಿಂ ಆಗಿ ಮತಾಂತರ ಆದ. ಮುಸ್ಲಿಮರು ನಾಲ್ಕು ಮದುವೆ ಆಗಬಹುದು ಎಂಬುದಕ್ಕೆ ಅವರ ಶರಿಯತ್‌ನಲ್ಲಿ ಒಪ್ಪಿಗೆ ಇದೆ. ಧರ್ಮೇಂದ್ರ ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ!
ಆದರೆ ಆಶ್ಚರ್ಯಕರ ಸಂಗತಿಯೆಂದರೆ ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾಮಾಲಿನಿಯನ್ನು ಧರ್ಮೇಂದ್ರನ ಕುಟುಂಬ ಎಂದಿಗೂ ಸ್ವೀಕರಿಸಲಿಲ್ಲ. ಮದುವೆಗೆ ಮುಂಚೆಯೇ, ಧರ್ಮೇಂದ್ರ ಹೇಮಾಮಾಲಿನಿಯ ಮುಂದೆ ಹಲವು ಷರತ್ತುಗಳನ್ನು ಹಾಕಿದ್ದ. ಇದರಿಂದಾಗಿ ಅವಳು ಎಂದಿಗೂ ತನ್ನ ಅತ್ತೆಯ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಅಂದರೆ ಹೇಮಾಮಾಲಿನಿ ಇಲ್ಲಿಯವರೆಗೆ ತನ್ನ ಅತ್ತೆ-ಮಾವಂದಿರನ್ನು ಭೇಟಿಯೇ ಮಾಡಿಲ್ಲ!
ಇತ್ತೀಚೆಗೆ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ಧಾರ್ಮಿಕ ಭಾವನೆಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಹೇಮಾಮಾಲಿನಿ ಸುದ್ದಿಯಲ್ಲಿದ್ದಾರೆ. ಅವರು ಇತ್ತೀಚೆಗೆ ಪುರಿ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಿದ್ದರು. ಈ ದೇವಾಲಯಕ್ಕೆ ಅನ್ಯಧರ್ಮೀಯರಿಗೆ ಪ್ರವೇಶವಿಲ್ಲ. ಮುಸ್ಲಿಂ ಆಗಿರುವ ಆಕೆ ಪುರಿ ದೇವಾಲಯಕ್ಕೆ ಹೋಗಿದ್ದಾಳೆ ಎಂಬುದು ಆರೋಪ. ಆದರೆ ಆಕೆ ತಾನು ಮುಸ್ಲಿಂ ಅಲ್ಲ ಎಂದು ತುಂಬ ಹಿಂದೆಯೇ ಹೇಳಿದ್ದಾಳೆ. ಧರ್ಮೇಂದ್ರ ಕೂಡ ತಾನು ಮುಸ್ಲಿಂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.
ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರದ ವೇಳೆಯಿಂದಲೂ ಬಿ-ಟೌನ್ ಆಳಿ, ಕನಸಿನ ಕನ್ಯೆ ಎಂದೇ ಬಿರುದು ಪಡೆದಿರುವ, ಇಂದಿಗೂ ಅದೇ ಬಿರುದನ್ನು ಉಳಿಸಿಕೊಂಡಿರುವ ನಟಿ ಹೇಮಾ ಮಾಲಿನಿ. ಕಳೆದ ಅಕ್ಟೋಬರ್ 16 ರಂದು 75 ವಸಂತಗಳನ್ನು ಪೂರೈಸಿದ್ದಾರೆ ನಟಿ. ವಯಸ್ಸು ದೇಹಕ್ಕೆ ಮಾತ್ರ ಎನ್ನುವ ಮಾತಿಗೆ ಅನ್ವರ್ಥರಾಗಿರುವವರಲ್ಲಿ 1948ರ ಅಕ್ಟೋಬರ್ 16ರಂದು ಜನಿಸಿರುವ ಹೇಮಾ ಮಾಲಿನಿ ಕೂಡ ಒಬ್ಬರು. ಈ ವಯಸ್ಸಿನಲ್ಲಿಯೂ ಅವರು ಅದ್ಭುತವಾಗಿ ಶಾಸ್ತ್ರೀಯ ನೃತ್ಯ ಮಾಡಬಲ್ಲರು. ಬಣ್ಣ ಹಚ್ಚಿ ವೇದಿಕೆಯ ಮೇಲಿಳಿದರೆ ಇವರಿಗೆ ನಿಜಕ್ಕೂ ಇಷ್ಟು ವಯಸ್ಸಾಗಿದ್ದು ಹೌದಾ ಎನ್ನುವಂಥ ಸೌಂದರ್ಯ. ಹೇಮಾ ಮಾಲಿನಿ ಅವರು ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ರಾಜಕಾರಣಿಯೂ ಹೌದು. 2014ರಿಂದ ಮಥುರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬಿಜೆಪಿ ಆಡಳಿತದಲ್ಲಿ ಲೋಕಸಭೆ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2011ರಿಂದ 2012ರವರೆಗೆ ಕರ್ನಾಟಕ ರಾಜ್ಯಸಭೆಯ ಸದಸ್ಯೆಯಾಗಿದ್ದರು.