ಬೆಂಗಳೂರು : ಪುರಾತನ ಕಾಲದಿಂದಲೂ ಹಿಂದೂ ದೇವಸ್ಥಾನಗಳಲ್ಲಿ ಅನ್ನ ದಾಸೋಹ, ಶಿಕ್ಷಣ ದಾಸೋಹ, ಆಶ್ರಯ ಮತ್ತು ಸಂಸ್ಕಾರ ಸಂಸ್ಕೃತಿ ಸಂಪ್ರದಾಯ ಹೀಗೆ ಅನೇಕ ಸನಾತನ ಹಿಂದೂ ಧರ್ಮವನ್ನು ಪ್ರಪಂಚದಲ್ಲಿ ಉಳಿದಿರುವ ಅತ್ಯಂತ ಹಳೆಯ ಧರ್ಮವೆಂದು ಕರೆಯಲ್ಪಡುತ್ತವೆ ಎಂದು ರಾಷ್ಟ್ರೀಯ ಹಿಂದೂ ಹೆಲ್ಪ್ ಲೈನ್ ಜನರಲ್ ಕಾರ್ಯದರ್ಶಿ ಹೆಮಂತ್ ತ್ರಿವೇದಿ ಜೀ ಹೇಳಿದರು.
ಅವರು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಆರ್ ಎಂ ಸಿ ಯಾರ್ಡ್ 9ನೇ ಬಳಿ ಇರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮಂಗಳವಾರದ ವಿಶೇಷ ಪೂಜಾ ಮತ್ತು ಪ್ರತಿ ಮಂಗಳವಾರ ಸಾವಿರಾರು ಭಕ್ತಾಧಿಗಳಿ ಅನ್ನಸಂತರ್ಪಣೆ ಕಾರ್ಯಕ್ರಮ ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸೆಲ್ವರಾಜ್, ಅಂತರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಹಿರಿಯ ಸಮಾಜ ಮುಖಂಡ ಮುನಿರಾಜು ಮತ್ತು ಪ್ರದಾನ ಅರ್ಚಕರಾದ ಶ್ರೀ ಚಂದ್ರಶೇಖರ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೀರಾಂಜನೇಯ ಸ್ವಾಮಿ ದರ್ಶನ ಪಡೆದು ಅನ್ನಸಂತರ್ಪಣೆ ಚಾಲನೆ ನೀಡಿ ಜನರಲ್ ಕಾರ್ಯದರ್ಶಿ ಹೆಮಂತ್ ತ್ರಿವೇದಿ ಜೀ ಜೈ ಶ್ರೀರಾಮ್ ನಾಮವಳಿ ಪಠಿಸುತ್ತಾ ಭಕ್ತರನ್ನು ಹುರಿ ತುಂಬಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆದಂತೆ ನಮ್ಮ ಧರ್ಮದ ಆರಾಧ್ಯ ದೈವ ಶ್ರೀ ರಾಮನ ಅಯೋಧ್ಯದಲ್ಲಿ ರಾಮ್ ಆರ್ ಎಂ ಸಿ ಯಾರ್ಡ್ ನಲ್ಲಿ ಬಾಲ ರಾಮನ ಪುತ್ಥಳಿ ನಿರ್ಮಾಣ ಹಂತದಲ್ಲಿದ್ದು ಅತಿ ಶೀಘ್ರದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾನೆ ಮಾಡಲಾಗುತ್ತದೆ ಭಕ್ತಾದಿಗಳು ತಮ್ಮೇಲ್ಲರ ಸೇವಾ ಸಹಕಾರ ತನುಮನ ಧನ ಪ್ರೋತ್ಸಾಹ ನೀಡಿರಿ ಎಂದು ವಿ. ಆನಂದ್ ಮನವಿ ಮಾಡಿಕೊಂಡರು.
ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸೆಲ್ವರಾಜ್ ಮಾತನಾಡಿ ಈ ಒಂದು ದೇವತಾ ಕಾರ್ಯಕ್ಕೆ ತಮ್ಮ ಶಕ್ತಿ ಅನುಸಾರವಾಗಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಅನ್ನದಾನಕ್ಕೆ ತಮ್ಮೇಲ್ಲರ ಸಹಕಾರ ಅಗತ್ಯವಿದೆ ಯಾರು ಅನ್ಯತ ಭಾವಿಸ ಬೇಡಿ ಪ್ರೋತ್ಸಾಹ ನೀಡಿರಿ ಎಂದು ಸರ್ವರಿಗೂ ಸ್ವಾಗತಿಸಿ ಮನದಾಳದ ಮಾತುಗಳು ಆಡಿದರು.
ಈ ಸಂದರ್ಭದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಅಪಾರ ಭಕ್ತಾದಿಗಳು, ಆರ್ ಎಂ ಸಿ ಯಾರ್ಡ್ ಅಂಗಡಿ ಮಾಲೀಕರು ಕಾರ್ಮಿಕರು ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದು ತೀರ್ಥ ಪ್ರಸಾದ ಸ್ವೀಕರಿಸಿದರು.
ವರದಿ : ಅಯ್ಯಣ್ಣ ಮಾಸ್ಟರ್




