ಬಹುತೇಕರು ತಮ್ಮ ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಆರಂಭಿಸುತ್ತಾರೆ. ಕೆಲವರು ಇವುಗಳನ್ನು ದಿನಕ್ಕೆ ಹಲವಾರು ಬಾರಿ ಕುಡಿಯುತ್ತಾರೆ. ಚಹಾ, ಕಾಫಿಯನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ.
ಸಾಮಾನ್ಯ ಚಹಾದ ಬದಲು ಹರ್ಬಲ್ ಚಹಾಗಳನ್ನು ಕುಡಿಯುವುದು ಉತ್ತಮ ಆಯ್ಕೆ ಎಂದು ತಜ್ಞರು ತಿಳಿಸುತ್ತಾರೆ. ಹರ್ಬಲ್ ಟೀನಲ್ಲಿ ಕಾಫಿ ಮತ್ತು ಚಹಾದಲ್ಲಿ ಕಂಡು ಬರುವ ಕೆಫೀನ್ ಇರುವುದಿಲ್ಲ. ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಹಾಗೂ ಖನಿಜಗಳು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಪುದೀನಾ ಚಹಾದ ಗುಣಲಕ್ಷಣಗಳು ಮೂಗಿನ ಹೊರಳೆ ಮತ್ತು ಉಸಿರಾಟದ ಪ್ರದೇಶವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಇದು ಹೆಚ್ಚಿನ ಉರಿಯೂತ ನಿವಾರಕ ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ ಎಂದು ತಜ್ಞರು ತಿಳಿಸುತ್ತಾರೆ.
ಬಿಸಿ ಶುಂಠಿ ಟೀ ಕುಡಿಯುವುದರಿಂದ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ಶ್ವಾಸಕೋಶವನ್ನು ನಿರ್ವಿಷಗೊಳಿಸುತ್ತದೆ. ಶುಂಠಿ ಚಹಾವು ಉರಿಯೂತದ ಹಾಗೂ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಉರಿಯೂತ ಕಡಿಮೆ ಮಾಡಲು ಹಾಗೂ ಉಸಿರಾಟ ಸಮಸ್ಯೆಯನ್ನು ಸುಧಾರಿಸಲು ಉಪಯುಕ್ತವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಥೈಮ್ ಎಲೆ ಔಷಧೀಯ ಗುಣಗಳನ್ನು ಸಮೃದ್ಧವಾಗಿ ಹೊಂದಿದೆ. ಇವು ಶ್ವಾಸಕೋಶವನ್ನು ನಿರ್ವಿಷಗೊಳಿಸುತ್ತವೆ. ಇದು ‘ಜರ್ನಲ್ ಆಫ್ ಮೆಡಿಸಿನ್ ಅಂಡ್ ಲೈಫ್’ನಲ್ಲಿ ಪ್ರಕಟವಾಗಿದ್ದು, ಲೋಳೆಯನ್ನು ತೆಗೆದುಹಾಕುತ್ತದೆ, ಕೆಮ್ಮು ಮತ್ತು ಶೀತಗಳನ್ನು ನಿವಾರಿಸುವ ಮೂಲಕ ಶ್ವಾಸಕೋಶದ ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ.