Ad imageAd image

ಇಲ್ಲಿ ಮೊಬೈಲ್ ರಿಂಗ್ ಆಗುತ್ತಿದ್ದಂತೇಯೇ ಜನ ಮರ ಹತ್ತುತ್ತಾರೆ !!

Bharath Vaibhav
ಇಲ್ಲಿ ಮೊಬೈಲ್ ರಿಂಗ್ ಆಗುತ್ತಿದ್ದಂತೇಯೇ ಜನ ಮರ ಹತ್ತುತ್ತಾರೆ !!
WhatsApp Group Join Now
Telegram Group Join Now

ಗಯಾ, ಬಿಹಾರ: ದೇಶದಲ್ಲಿ ಈಗ 6ಜಿ ಬಗ್ಗೆ ಚರ್ಚೆ ನಡೆಯುತ್ತಿದೆ. 5G ಸೇವೆ ಜಾರಿಗೆ ಬಂದು ಬಹಳ ದಿನಗಳೇ ಕಳೆದವು. ಆದರೆ, ಬಿಹಾರದ ಒಂದು ಗ್ರಾಮವಿದೆ, ಅಲ್ಲಿ ಜನರಿಗೆ 5G-6G ಬಗ್ಗೆ ತಿಳಿದಿಲ್ಲ. ಇಲ್ಲಿ ಮೊಬೈಲ್ ನೆಟ್‌ವರ್ಕ್ ಬಿಕ್ಕಟ್ಟಿನಿಂದ ಜನರು ತಮ್ಮ ಸಂಬಂಧಿಕರೊಂದಿಗೆ ಸರಿಯಾಗಿ ಮಾತನಾಡಲು ಕೂಡಾ ಸಾಧ್ಯವಾಗುತ್ತಿಲ್ಲ. ಮೊಬೈಲ್ ರಿಂಗಣಿಸಿದ ತಕ್ಷಣ ಮರ ಹತ್ತುತ್ತಾರೆ ಅಥವಾ ಯಾವುದಾದರೂ ಎತ್ತರದ ಜಾಗಕ್ಕೆ ಹೋಗಲೇಬೇಕು. ಇಲ್ಲದಿದ್ದರೆ ಮಾತುಕತೆ ಬಂದ್​​​.

ನಾವು ಮೋಕ್ಷಧಾಮ್ ಧಾಮಕ್ಕೆ ಹೆಸರುವಾಸಿಯಾದ ಗಯಾದ ಛಕರಬಂಧ್​ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳ ಬಗ್ಗೆ ಮಾತನಾಡುತ್ತಿದ್ದೇವೆ. ಇಲ್ಲಿ ಮೊಬೈಲ್ ರಿಂಗ್ ಕಡಿಮೆ ಕೇಳಿಸುತ್ತದೆ. ಜನರು ತಮ್ಮ ಮನೆಗಳ ಛಾವಣಿಯ ಮೇಲೆ, ಮರಗಳು ಅಥವಾ ಎತ್ತರದ ಬಂಡೆಗಳ ಮೇಲೆ ಹತ್ತಿದಾಗ ಮಾತ್ರವೇ ಅವರ ಮೊಬೈಲ್ ಗಳು ರಿಂಗಣಿಸುತ್ತವೆ. ಏಕೆಂದರೆ ಅವರ ಗ್ರಾಮದಲ್ಲಿ ಮೊಬೈಲ್ ನೆಟ್‌ವರ್ಕ್ ಬರುತ್ತಿಲ್ಲ. ಮರೆವೇರದಿದ್ದರೆ ಅಟ್ಟ ಏರದಿದ್ದರೆ ಮೊಬೈಲ್​​ ಗಳು ಸದ್ದೇ ಮಾಡೋದಿಲ್ಲ.

ಗ್ರಾಮದಲ್ಲಿ ಮೊಬೈಲ್ ಆಪರೇಟ್ ಮಾಡಲು ತಿಳಿಯದ ವೃದ್ಧರಿದ್ದಾರೆ. 70 ವರ್ಷದ ವಿಷ್ಣು ದೇವ್ ಪಾಸ್ವಾನ್ ಗೆ ಆಂಡ್ರಾಯ್ಡ್ ಮೊಬೈಲ್ ಬಗ್ಗೆ ಗೊತ್ತಿಲ್ಲ. ಮಗ ಕೀಪ್ಯಾಡ್ ಫೋನ್ ಕೊಟ್ಟಿದ್ದರೂ ನೆಟ್ ವರ್ಕ್ ಇಲ್ಲದ ಕಾರಣ ಮಾತನಾಡಲು ಆಗುತ್ತಿಲ್ಲ. ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಮುಂದೊಂದು ದಿನ ತಮ್ಮ ಗ್ರಾಮಕ್ಕೆ ಮೊಬೈಲ್ ಟವರ್ ಅಳವಡಿಸ್ತಾರೆ ಎಂಬ ಭರವಸೆಯಲ್ಲೇ ಜೀವನ ದೂಡುತ್ತಿದ್ದಾರೆ.

ಛಕರ್ಬಂದ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳು ಗಯಾ ಪ್ರಧಾನ ಕಚೇರಿಯಿಂದ 100 ಕಿಮೀ ದೂರದಲ್ಲಿರುವ ದುಮ್ರಿಯಾ ಬ್ಲಾಕ್‌ನಲ್ಲಿರುವ ಪರ್ವತದ ತಪ್ಪಲಿನಲ್ಲಿವೆ. ಕೆಲವು ವರ್ಷಗಳ ಹಿಂದೆ ಇದು ಹೆಚ್ಚು ನಕ್ಸಲ್ ಪೀಡಿತ ಪ್ರದೇಶವಾಗಿತ್ತು. ಮೂಲ ಸೌಕರ್ಯಗಳಿಲ್ಲದ ಕಾರಣ ಬೇರೆ ಕಡೆಯಿಂದ ಬಂದವರು ಈ ಭಾಗದಲ್ಲಿ ಮದುವೆ ಮಾಡಿ ಕೊಡಲು ಹೆದರುತ್ತಿದ್ದರು. ಸೌಲಭ್ಯಗಳು ಇನ್ನೂ ಸೀಮಿತವಾಗಿವೆ. ಆದರೆ ರಸ್ತೆಗಳು ಮತ್ತು ವಿದ್ಯುತ್‌ನಂತಹ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

WhatsApp Group Join Now
Telegram Group Join Now
Share This Article
error: Content is protected !!