Ad imageAd image

ಕಿತ್ತೂರು ಉತ್ಸವದಲ್ಲಿ ಪಾರಂಪರಿಕ ನಡಿಗೆ

Bharath Vaibhav
ಕಿತ್ತೂರು ಉತ್ಸವದಲ್ಲಿ ಪಾರಂಪರಿಕ ನಡಿಗೆ
WhatsApp Group Join Now
Telegram Group Join Now

ಚನ್ನಮ್ಮನ ಕಿತ್ತೂರು:– ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕಿ. ನಾ.ವಿ.ವ ಪದವಿ ಕಾಲೇಜು ಕಿತ್ತೂರು ಇವರ ಸಹಯೋಗದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಲ್ಮಠದ ರಾಜಯೋಗೀಂದ್ರ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತಾ ಪರಂಪರೆಯು ನಮ್ಮ ರಾಷ್ಟ್ರದ ಅಮೂಲ್ಯ ಸಂಪತ್ತು ಎಂದು ಅಭಿಪ್ರಾಯಪಟ್ಟರು.

ಅನಂತರ ಉದ್ಘಾಟಿಸಿ ಮಾತನಾಡಿದ ಮಾನ್ಯ ಶಾಸಕರಾದ ಶ್ರೀ ಬಾಬಾಸಾಹೇಬ್ ಪಾಟೀಲ್ ಅವರು ನಮ್ಮ ಇತಿಹಾಸ ಪರಂಪರೆಗಳನ್ನು ಅರಿತುಕೊಂಡು ಜವಾಬ್ದಾರಿಯಿಂದ ಅವುಗಳನ್ನು ರಕ್ಷಿಸಿಕೊಳ್ಳಬೇಕೆಂಬ ವಿಷಯವನ್ನು ತಿಳಿಸಿದರು ಜನರು ಪ್ರತಿಯೊಬ್ಬರು ಇತಿಹಾಸ ಪರಂಪರೆಯ ಜ್ಞಾನವನ್ನು ಹೊಂದಿರಬೇಕು ಅಂದಾಗ ಮಾತ್ರ ರಾಷ್ಟ್ರೀಯ ಪ್ರಜ್ಞೆ, ಪರಂಪರೆ ಇತಿಹಾಸಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ರಾಜೇಶ್ವರಿ ಕಳಸನ್ನವರ್ ಪ್ರಾರ್ಥನೆಯನ್ನು ಸಲ್ಲಿಸಿದರು ಶ್ರೀ ಬಿ ಸಿ ಬಿದರಿ ಅವರು ಸರ್ವರನ್ನು ಸ್ವಾಗತಿಸಿದರು ನಂತರ ಮಾತನಾಡಿದ ಇಲಾಖೆಯ ಕ್ಯೂರೇಟರ್ ಶ್ರೀ ರಾಘವೇಂದ್ರ ಅವರು ಪ್ರಸ್ತವಿಕವಾಗಿ ಪರಂಪರೆಯ ಪ್ರಕಾರಗಳಾದ ಮೂರ್ತ ,ಅಮೂರ್ತ ಪರಂಪರೆ ಮತ್ತು ನೈಸರ್ಗಿಕ ಪರಂಪರೆ ಕುರಿತು ಮತ್ತು ಅವುಗಳ ಸಂರಕ್ಷಣೆ ಕುರಿತು ತಿಳಿಸಿದರು. ನಂತರ ಇಲಾಖೆಯ ಶ್ವೇತ ಧ್ವಜವನ್ನು ಮಾನ್ಯ ಶಾಸಕರು ತಾಲೂಕಿನ ದಂಡಾಧಿಕಾರಿಗಳಾದ ಶ್ರೀ ರವೀಂದ್ರ ಹಾದಿಮನಿಯವರಿಗೆ ಹಸ್ತಾಂತರಿಸುವ ಮೂಲಕ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದರು.

ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ದೇಶಿಯ ಮತ್ತು ಪಾರಂಪರಿಕ ಉಡುಗೆ ತೊಡುಗೆ ತೊಟ್ಟು ವಿದ್ಯಾರ್ಥಿನಿಯರು ಶಿಕ್ಷಕರು ಇಲಾಖೆಯ ಎಲ್ಲಾ ಅಧಿಕಾರಿಗಳು ವಿಶೇಷ ಆಕರ್ಷಣೆಯ ಕೇಂದ್ರವಾಗಿದ್ದರು. ಪಾರಂಪರಿಕ ನಡಿಗೆಯು ಕಿತ್ತೂರು ಚೆನ್ನಮ್ಮ ವೃತ್ತದಿಂದ ಕೋಟೆಯವರಿಗೆ ಕಾಲ್ನಡಿಗೆಯಲ್ಲಿ ತಲುಪಿದ ವಿದ್ಯಾರ್ಥಿಗಳನ್ನು ಕೋಟೆಯಲ್ಲಿ ಸ್ವಾಗತಿಸಿ ಸಮಾರೋಪ ನುಡಿಗಳನ್ನು ಆಡಿದ ನಿವೃತ್ತ ಆಯುಕ್ತರಾದ ಶ್ರೀ ವೆಂಕಟೇಶ ಮಾಚಕನೂರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮೂಲಕ ಪ್ರಾಚ್ಯ ಪ್ರಜ್ಞೆಯ ಮತ್ತು ಪರಂಪರೆಯ ಕುರಿತು ತಿಳುವಳಿಕೆ ನೀಡಿ ಸಂವಾದ ನಡೆಸಿದರು ಹಾಗೂ ಪುಸ್ತಕ ರೂಪದ ಬಹುಮಾನಗಳನ್ನು ನೀಡಿದರು .

ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಮಂಜುನಾಥ ಕಳಸಣ್ಣವರ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಗೆ ಶ್ರೀ ರಾಜಶೇಖರ ರಗಟಿ, ವಂದಿಸಿದರು ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್ ಬಿ ದಳವಾಯಿ, ಮುಖ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್,ಅಧಿಕಾರಿಗಳಾದ ಶ್ರೀ ಮಲ್ಲಯ್ಯ ಹಿರೇಮಠ ಪಿಡಬ್ಲ್ಯೂಡಿ ಅಧಿಕಾರಿಗಳಾದ ಸಂಜಯ ಮಿರಜ್ಕರ್, ಉಪನ್ಯಾಸಕಿಯಾದ ಶ್ರೀಮತಿ ಪಾರ್ವತಿ ಲದ್ದಿಮಠ ಮಲ್ಲಿಕಾರ್ಜುನ್ ಉಳ್ಳಾಗಡ್ಡಿ, ಮುಖಂಡರಾದ ಅನಿಲ ಎಮ್ಮಿ, ಅಸ್ಪಕ ಹವಾಲ್ದಾರ್ , ಸುನೀಲ್ ಘಿವಾರಿ, ಶಿಕ್ಷಕರಾದ ಮಹೇಶ ಚೆನ್ನಂಗಿ, ಮಹೇಶ್ ಹೆಗಡೆ , ಮಹೇಶ್ ಹೊಂಗಲ್ ಅನೇಕ ಇಲಾಖೆಯ ಅಧಿಕಾರಿಗಳು, ಮಹಿಳಾ ಸಂಘಗಳ ಸದಸ್ಯರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 ವರದಿ- ಬಸವರಾಜ ಭಿಮರಾಣಿ. ಜಗದೀಶ ಕಡೋಲಿ
ಚನ್ನಮ್ಮನ ಕಿತ್ತೂರು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!