ಯಳಂದೂರು: ಯಳಂದೂರು,ಪೊಲೀಸ್ ಠಾಣೆಯವತಿಯಿಂದ ಪಟ್ಟಣದ ಪ್ರಮುಖ ಬೀದಿಗಲ್ಲಿ ಹೆಲ್ಮೆಟ್ ಹಾಗೂ ಮಾದಕವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಠಾಣೆಯ ಸಿಬ್ಬಂದಿಗಳು ಹೆಲ್ಮೆಟ್ ಧರಿಸಿ ಮಾದಕ ವಸ್ತುಗಳ ದುಷ್ಟಪರಿಣಾಮ ತಿಳಿಸುತ್ತಾ ಬೈಕ್ ರ‍್ಯಾಲಿ ನೆಡೆಸಿದರು.

ಯಳಂದೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷೆಕರಾದ ಶ್ರೀಕಾಂತ್ ರವರು ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.
ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಯಳಂದೂರು ಪೊಲೀಸ್ ಇಲಾಖೆಯಿಂದ ವೃತ್ತ ನಿರೀಕ್ಷಕರು ಶ್ರೀಕಾಂತ್, ಉಪ ನಿರೀಕ್ಷಕರು ಅಕಾಶ್ ರವರು ಮಾದಕ ದ್ರವ್ಯ ವ್ಯಸನ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಬೀದಿ ನಾಟಕ ಆಯೋಜಿಸಿ ಜಾಗೃತಿ ಮೂಡಿಸಿದರು.
ಯಳಂದೂರು ವೃತ್ತ ನಿರೀಕ್ಷೆಕರಾದ ಶ್ರೀಕಾಂತ್ ರವರು ಮಾತನಾಡಿ ನಾವು ವಾಹನಗಳನ್ನು ಚಲಾಯಿಸುವಾಗ ಸಿಟಬೆಲ್ಟ್ ಹಾಕಿ ಜಾಗೃತವಾಗಿ ಚಲಾಯಿಸಬೇಕು ಬೈಕ್ ಹೊಡಿಸುವವರು ಹೆಲ್ಮೆಟ್ ಧರಿಸಿ ಹೊಡಿಸಬೇಕು ಬೈಕ್ ಇದುಗಡೆ ಕುಳಿತು ವ್ಯಕ್ತಿ ಗೆ ಹೆಲ್ಮೆಟ್ ಧರಿಸಿ ಹೋಗಬೇಕು ನಿಮಗಾಗಿ ಮನೆಯಲ್ಲಿ ತಂದೆ ತಾಯಿ ಹೆಂಡತಿ ಮಕ್ಕಳು ಇದ್ದರೆ ಎಚ್ಚರ ಎಂದು ತಿಳಿಸಿದರು.
ಯಳಂದೂರು ಪಿ ಎಸ್ ಐ. ಆಕಾಶ್ ರವರು ಮಾತನಾಡಿ ಮಾದಕ ವಸ್ತುಗಳು ನಮ್ಮ ಜೀವನ ಹಾಳುಮಾಡುತ್ತದೆ ನಮ್ಮ ಗಾಂಜಾ ಹೊಗೆಸೊಪ್ಪು ಕುಡಿತ ಮನೆಯನ್ನು ಹಾಳುಮಾಡುತ್ತದೆ ನಿಮ್ಮ ಭವಿಷ್ಯ ನಿಮ್ಮ ಮಕ್ಕಳು ಮುಂದಿನ ಜೇವನಕೆ ನೀವುಗಳು ಅರೋಗ್ಯವಾಗಿದ್ದರೆ ನಿಮ್ಮ ಮನೆಯವರು ಖುಷಿಯಾಗಿ ಇರುತ್ತಾರೆ ಆದುದರಿಂದ ಮಾಡಕವಸ್ತುಗಳಿಂದ ದೂರ ಇರಬೇಕು ಎಂದು ತಿಳಿಸಿದರು.
ಮಾಂಬಳ್ಳಿ ಪಿ ಎಸ್ ಐ ಕರಿಬಸಪ್ಪ ರವರು ಮಾತನಾಡಿ ಬೈಕ್ ಹಾಗೂ ವಾಹನ ಹೊಡಿಸುವವರು ಕುಡಿದು ಹೊಡಿಸಬಾರದು ಅತಿ ಹೆಚ್ಚು ಕುಡಿದು ವಾಹನ ಚಲಾಯಿಸಿ ಸತ್ತು ಹೋದವರೇ ಹೆಚ್ಚು ನೀವು ನಿಧಾನವಾಗಿ ವಾಹನ ಚಲಾಯಿಸಿ ಕುಡಿದು ಚಲಾಯಿಸಬೇಡಿ ಅತಿ ವೇಗ ತಿತಿ ಬೇಗ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಳಂದೂರು ವೃತ್ತ ನಿರೀಕ್ಷೆಕಾರು ಶ್ರೀಕಾಂತ್, ಪಿ ಎಸ್ ಐ. ಆಕಾಶ್, ಮಾಂಬಳ್ಳಿ ಠಾಣಾ ಪಿ ಎಸ್ ಐ. ಕರಿಬಸಪ್ಪ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




