Ad imageAd image

 ಶಿವಾಪುರ ಸ್ವಾಮಿಜಿ ಮತ್ತೆ ಮರಳಿ ಮಠಕ್ಕೆ ಬರಬೇಕೆಂದು ಗ್ರಾಮಸ್ಥರಿಂದ ಪಟ್ಟು- ಪ್ರತಿಭಟನೆ

Bharath Vaibhav
 ಶಿವಾಪುರ ಸ್ವಾಮಿಜಿ ಮತ್ತೆ ಮರಳಿ ಮಠಕ್ಕೆ ಬರಬೇಕೆಂದು ಗ್ರಾಮಸ್ಥರಿಂದ ಪಟ್ಟು- ಪ್ರತಿಭಟನೆ
WhatsApp Group Join Now
Telegram Group Join Now

ಗೋಕಾಕ: ಮೂಡಲಗಿ ತಾಲೂಕಿನ ಶಿವಾಪುರದ ಅಡವಿಸಿದ್ದೇಶ್ವರ ಮಠದಲ್ಲಿ ಮಹಿಳೆ ಜೊತೆಗೆ ಸ್ವಾಮೀಜಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂದಿಸಿದಂತೆ ಅಡವಿಸಿದ್ದೇಶ್ವರ ಸ್ವಾಮೀಗಳ ಪರವಾಗಿ ಶಿವಾಪುರ ಗ್ರಾಮದ ಸಾವಿರಾರು ಭಕ್ತರು ಗೋಕಾಕ ನಗರದ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ಮಾಡಿದರು.

ಮಠದ ಅಬಿವೃದ್ದಿ ಸಹಿಲಾಗದ ಕೆಲವು ಹಿತಾಬದ್ದ ಶಕ್ತಿಗಳು ಶಿವಾಪುರ ಅಡವಿಸಿದ್ದೇಶ್ವರ ಸ್ವಾಮೀಜಿಗಳನ್ನ ಉದ್ದೇಶ ಪೂರ್ವಕವಾಗಿ ಸುಳ್ಳು ಆರೋಪ ಮಾಡಿ ಸ್ವಾಮಿಜಿಗಳನ್ನು ಮಠದಿಂದ ಹೊರಹಾಕಿದ್ದಾರೆಂದು ಶಿವಾಪೂರ ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳಿಯರಾದ ಮಹಾಂತೇಶ ಕುಡುಚಿಯವರು ಸ್ವಾಮಿಜಿಗಳು ಅದಿಕೃತ ಅಲ್ಲ ಅಂದರೆ ಅವರಿಗೆ ಪಟ್ಟಾಭಿಷೇಕ ಯಾಕೆ ಮಾಡಿದರು. ಅಷ್ಟೆ ಅಲ್ಲ ಇವತ್ತು ಸ್ವಾಮಿಜಿಗಳಿಂದ ಕೇವಲ ಮಠ ಅಷ್ಟೆ ಅಲ್ಲ ಶಿವಾಪುರ ಗ್ರಾಮದ ಸಾರ್ವಜನಿಕರು ಕೂಡ ಸಮಾಜ ಮುಖಿ ಕೆಲಸದಲ್ಲಿ ತೊಡಗಿದ್ದಾರೆ, ಅವರ ವಿರುದ್ದ ಮಾಡಿದ ಆರೋಪ ಸಾಬಿತು ಪಡಿಸಬೇಕು ,ಮತ್ತೆ ಅವರು ಮಠಕ್ಕೆ ಬರಬೇಕೆಂದು ಪಟ್ಟು ಹಿಡಿದರು.

ಸಾವಿರಾರು ಸಂಖ್ಯೆಯಲ್ಲಿ ಗೋಕಾಕ ನಗರಕ್ಕೆ ಆಗಮಿಸಿದ ಮಹಿಳೆಯರು ಮಕ್ಕಳು ಹೋರಾಟ ಮಾಡಿ ಸ್ವಾಮಿಜಿಗಳು ಮಠಕ್ಕೆ ಬರುವ ತನಕ ಪ್ರತಿಭಟನೆ ಮಾಡುತ್ತೆವೆಂದು ಘೊಷಣೆ ಕೂಗಿದರು.

ಇನ್ನು ಮಠದ ಇನ್ನೊರ್ವ ಭಕ್ತರದ ಮಹಾದೇವಿಯವರು ಸ್ವಾಮಿಜಿಗಳು ಇವತ್ತು ಪ್ರತಿ ಹೆಣ್ಣು ಮಕ್ಕಳು ಮಠದ ಸೇವೆ ಮಾಡಲು‌ ಅವಕಾಶ ಕೊಟ್ಟಿದ್ದಾರೆ.ಅಷ್ಟೆ ಅಲ್ಲ ಶಾಲೆ ಬಿಟ್ಟ ಮಕ್ಕಳ ಪೀ ತುಂಬಿ ವಿದ್ಯಾಭ್ಯಾಸ ಕಲಿಸುತಿದ್ದಾರೆ,ಶಿವಾಪುರದ ಹೆಣ್ಣುಮಕ್ಕಳು ಮಠಕ್ಕೆ ಹೋಗುತ್ತಾರೆ. ಅವರ ಮೇಲೆ ಆರೋಪ ಮಾಡದವರು, ಈಗ್ಯಾಕೆ ಎಂದರು.ಅಂತವರ ವಿರುದ್ದ ಆಗದವರು ಉದ್ದೇಶ ಪೂರ್ವಕವಾಗಿ ಸ್ವಾಮಿಜಿಯವರ ಮೇಲೆ ಷಡ್ಯಂತ್ರ ಮಾಡಿದ್ದಾರೆಂದರು. ಒಂದು ವೇಳೆ ಸ್ವಾಮಿಜಿಗಳು ಮಠಕ್ಕೆ ಬರದೆ ಹೊದಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!