ಯಳಂದೂರು: ಯಳಂದೂರು ಪಟ್ಟಣದ ಬುದ್ಧ ಧಮ್ಮ ಧ್ಯಾನ ಕೇಂದ್ರದಲ್ಲಿ ಬುದ್ಧಪ್ರಿಯಾ ಅಶೋಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ನೆಡೆಸಲಾಯಿತು.

ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಬುದ್ಧ ಧಾನ್ಯ ಕೇಂದ್ರದಲ್ಲಿ ಕಾರ್ಯಕ್ರಮ ನೆಡೆಸಲಾಯಿತು. ಗೌರವ ಅಧ್ಯಕ್ಷರು ರಾಜಣ್ಣ ಯರಿಯೂರು ಮಾತನಾಡಿ ಭಗವಾನ್ ಬುದ್ದರು ಮಾದಲು ಉಪದೇಶ ಮಾಡಿದ ದಿನವೇ ಗುರು ಪೂರ್ಣಿಮಾ ದಿನ ನಾವು ನಮ್ಮ ಎಲ್ಲಾ ಮಾರ್ಗದರ್ಶಕ ಗುರುಗಳನ್ನು ಗೌರವಿಸಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ರಾಜಣ್ಣ, ಅಧ್ಯಕ್ಷರಾದ ಉಮಾಶಂಕರ್, ಉಪಾಧ್ಯಕ್ಷರಾದ ಮಲ್ಲು ಯರಗಂಬಳ್ಳಿ, ಅಶೋಕ, ಹಾಗೂ ಸದ್ಯಸರುಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ



		
		
		
