ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತು ಪಡೆದು ಕೊಳ್ಳ ಬೇಕಾದರೆ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿ ಬಿಬಿಎಂಪಿ ಬೀದಿ ಬದಿ ವ್ಯಾಪಾರಿ ಕಾರ್ಡ್ ಕಡ್ಡಾಯ, ಆಧಾರ, ಪಡಿತರ ಚೀಟಿ, ಬ್ಯಾಂಕ್ ಬುಕ್ಕ್ , ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಈ ಎಲ್ಲಾ ದಾಖಲೆಗಳನ್ನು ಪ್ರತಿಯೋಬ್ಬ ಬೀದಿ ಬದಿ ವ್ಯಾಪಾರಿಗಳು ಹೊಂದಿರಬೇಕು ಎಂದು ಕರ್ನಾಟಕ ರಾಜ್ಯ ಬೀದಿ ಬದಿ ವ್ಯಾಪಾರಿ ಸಂಘದ ರಾಜ್ಯಾಧ್ಯಕ್ಷ ಸಿ.ಇ. ರಂಗಸ್ವಾಮಿ ಹೇಳಿದರು.

ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡಿನ ಅಬ್ಬಿಗೆರೆಯಲ್ಲಿ ಕ್ಷೇತ್ರದ ಬೀದಿ ಬದಿ ವ್ಯಾಪಾರಿಗಳ ಸಂಘದ ಸಭೆಯನ್ನು ಅಬ್ಬಿಗೆರೆ ನೂತನ ಅಧ್ಯಕ್ಷ ಪ್ರಸನ್ನ ಅರಸು, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿದ್ದರಾಜು ಹೆಗ್ಗನಹಳ್ಳಿ,ಉಪಾಧ್ಯಕ್ಷ ನಾಗಣ್ಣಾ ನಿವೃತ್ತ ಪೊಲೀಸ್, ರಾಜಗೋಪಾಲನಗರ ವಾರ್ಡಿನ ಅಧ್ಯಕ್ಷ ಜಗದೀಶ್ ಇವರುಗಳ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ವಲಯ ಅಧ್ಯಕ್ಷ ದೊಡ್ಡಯ್ಯ ಸರ್ವರಿಗೂ ಸ್ವಾಗತಿಸಿದರು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಿದ್ದರಾಜು ಹೆಗ್ಗನಹಳ್ಳಿ ಮಾತನಾಡಿ ಬೀದಿ ಬದಿ ವ್ಯಾಪಾರಿಗಳ ಎಲ್ಲಾ ದಾಖಲೆಗಳನ್ನು ಇದ್ದನ್ನು ಬೇರೆ ರಾಜ್ಯದ ಜನರಿಗೆ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ ಎಂದು ಸಿದ್ದರಾಜು ಖಾರವಾಗಿ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಹೆಗ್ಗನಹಳ್ಳಿ ವಾರ್ಡಿನ ಅಧ್ಯಕ್ಷ ಮಹಮ್ಮದ್ ಸಿದ್ದಿಕ್, ತಿಪ್ಪೇಸ್ವಾಮಿ, ರಾಮ ಪ್ರಸಾದ್, ಮಂಜುನಾಥ್, ಧರ್ಮಣ್ಣ ನೆಲಗೆದರನಹಳ್ಳಿ, ಪುಷ್ಟಾಲತಾ,ಪ್ರೇಮಾಮ್ಮ, ನಾಗಮ್ಮ,ವಿಜಿ, ಬಿ ರಾಜೇಶ್ ಪ್ರಮಿಲಬಾನು, ಕಾವ್ಯ ಸೇರಿದಂತೆ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಸದಸ್ಯರು ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




