
ಸೇಂಟ್ ಜಾರ್ಜ, ಗ್ರೇಂಡಾ ( ವೆಸ್ಟ್ ಇಂಡೀಸ್): ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು 133 ರನ್ ಗಳಿಂದ ಗೆದ್ದು ಸರಣಿಯಲ್ಲಿ 2-0 ರಿಂದ ಮುನ್ನಡೆ ಪಡೆಯಿತು.
ಆಸ್ಟ್ರೇಲಿಯಾ ಪರವಾಗಿ ನ್ಯಾಥನ್ ಲೇನ್ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಮೂರು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಜೋಶ್ ಹೆಜಲ್ ವುಡ್ 2 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ದ್ವಿತೀಯ ಸರದಿಯಲ್ಲಿ ಕೇವಲ 143 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ವೆಸ್ಟ್ ಇಂಡೀಸ್ 276 ರನ್ ಗಳ ಗೆಲುವಿನ ಗುರಿ ಪಡೆದಿತ್ತು. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸಮನ್ ಅಲೆಕ್ಸ್ ಕ್ಯಾರಿ ಪಂದ್ಯ ಶ್ರೇಷ್ಠರಾದರು.




