ಚಿಕ್ಕೋಡಿ: ಶ್ರೀ. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಾ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಇಂದು ಚಿಕ್ಕೋಡಿ ನಗರದಲ್ಲಿ ಶ್ರೀ. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಾ ಮೂರ್ತಿ ಪ್ರತಿಷ್ಠಾಪಣೆ ಮಾಡಬೇಕೆಂದು ಸುಮಾರು ವರ್ಷಗಳಿಂದ ಸಂಗೋಳ್ಳಿ ರಾಯಣ್ಣಾ ಯುವ ಘರ್ಜನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಇವರು ಚಿಕ್ಕೋಡಿ ನಗರದಲ್ಲಿ ಮೂರ್ತಿ ಪ್ರತಿಷ್ಠಾಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮತ್ತು ಸ್ಥಳೀಯ ಜನ ಪ್ರತಿನಿಧಿಗಳಿಗೆ ಒತ್ತಾಯ ಮಾಡುತ್ತಾ ಬಂದಿರುತ್ತೇವೆ.
ಆದರೆ ಇಲ್ಲಿಯವರೆಗೆ ಯಾವ ಜನ ಪ್ರತಿನಿಧಿಗಳಾಗಲಿ ಸರ್ಕಾರವಾಗಲಿ ಮೂರ್ತಿ ಸ್ಥಾಪಣೆ ಮಾಡಲಿಕ್ಕೆ ಮುಂದಾಗಲಿಲ್ಲ ಆದ್ದರಿಂದ ಇದನ್ನು ನಾವು ತೀರ್ವವಾಗಿ ಖಂಡಿಸುತ್ತೇವೆ ಮತ್ತು ಈ ಹೊತ್ತು ನಾವು ಚಿಕ್ಕೋಡಿ ಪ್ರವಾಸಿ ಮಂದಿರದಿAದ ಪ್ರತಿಭಟನೆ ಮಾಡುತ್ತಾ ಮಾನ್ಯ ತಹಶೀಲ್ದಾರ ಸಾಹೇಬರು ಚಿಕ್ಕೋಡಿ ಇವರ ಕಛೇರಿಗೆ ತೆರಳಿ ಮೆ|| ತಹಶೀಲ್ದಾರ ಸಾಹೇಬರ ಮುಖಾಂತರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ನೀಡಿ ಮೂರ್ತಿ ಸ್ಥಾಪಣೆ ಮಾಡಲಿಕ್ಕೆ ಒತ್ತಾಯಿಸಿರುತ್ತೇವೆ.

ಶ್ರೀ. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಾ ಇವರು ರಾಷ್ಟçದ ಮಹಾಪುರುಷರಲ್ಲಿ ಒಬ್ಬರಾಗಿದ್ದು ಅದರ ಜೊತೆಗೆ ಈ ನಾಡಿಗೆ ಕೂಡಾ ಅವರ ಕೊಡುಗೆ ಅಪಾರವಾದದ್ದು ಮತ್ತು ಅವರು ಸ್ವಾತಂತ್ರö್ಯ ಪೂರ್ವದಲ್ಲಿ ದೇಶಕ್ಕಾಗಿ ಹಾಗೂ ನಮ್ಮ ನಾಡಿಗಾಗಿ ಸೇವೆ ಸಲ್ಲಿಸಿರುತ್ತಾರೆ. ಆದರೆ ಇಲ್ಲಿಯ ವರೆಗೆ ನಮ್ಮ ಚಿಕ್ಕೋಡಿಯ ನಗರದಲ್ಲಿ ಯಾರೊಬ್ಬರು ರಾಜಕಾರಣಿ ಹಾಗೂ ಜನ ಪ್ರತಿನಿಧಿ ಮತ್ತು ಕರ್ನಾಟಕ ಸರ್ಕಾರ ಅವರು ಮೂರ್ತಿಯನ್ನು ಸ್ಥಾಪನೆ ಮಾಡಲಿಕ್ಕೆ ಮುಂದಾಗಿರುವುದಿಲ್ಲ. ಇದನ್ನು ನಾವು ತೀರ್ವವಾಗಿ ಖಂಡಿಸುತ್ತೇವೆ. ಮತ್ತು ಚಿಕ್ಕೋಡಿ ನಗರದಲ್ಲಿ ರಾಷ್ಟç ಹಾಗೂ ನಾಡಿನ ಎಲ್ಲ ಮಹಾಪುರುಷರ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗಿದೆ ಆದ್ದರಿಂದ ಇದರ ಜೊತೆಗೆ ಶ್ರೀ. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣಾ ರವರ ಮೂರ್ತಿಯನ್ನು ಸಹ ತಾವು ಪ್ರತಿಷ್ಠಾಪಣೆ ಮಾಡಬೇಕೆಂದು ಈ ಹೊತ್ತು ತಮ್ಮಲ್ಲಿ ಮನವಿ ಮುಖಾಂತರ ಒತ್ತಾಯಿಸುತ್ತೇವೆ.
ಸಂಜು ಬಡಿಗೇರ, ಸಂತೋಷ ಪೂಜೇರಿ, ಸಂಗೋಳ್ಳಿ ರಾಯಣ್ಣಾ ಯುವ ಘರ್ಜನೆ ಅಧ್ಯಕ್ಷರು, ಅನೀಲ ನಾವ್ಹಿ, ಮಾಳು ಕರೆನ್ನವರ, ಅಮೂಲ ನಾವ್ಹಿ, ಹಾಲಪ್ಪಾ ಖದ್ದಿ, ಪ್ರತಾಪ ಪಾಟೀಲ, ರಫಿಕ ಮುಲ್ಲಾ, ಶಿವು ಮದಾಳೆ, ದುಂಡಪ್ಪಾ ಚೌಗಲಾ, ಮಹನುದಿನ್ ಬೇಪಾರಿ, ಚನ್ನಪ್ಪಾ ಬಡಿಗೇರ, ರಮೇಶ ಡಂಗೇರ, ಭೀಮಾ ನೇಜ ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




