ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಹೆಗ್ಗನಹಳ್ಳಿಯ ದೊಡ್ಡಣ್ಣ ಕೈಗಾರಿಕಾ ಪ್ರದೇಶದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಷಾಢ ಮಾಸದ ಗುರುಪೂರ್ಣಿಮೆದಂದು ಸಾಯಿಬಾಬಾನಿಗೆ ವಿಷೇಶ ಪೂಜೆ ಪುನಸ್ಕಾರ ಹೂವಿನ ಅಲಕಾರ ಜರುಗಿದವು.

ಕ್ಷೇತ್ರದ ಶಾಸಕ ಎಸ್ ಮುನಿರಾಜು ಆಗಮಿಸಿ ಬಾಬಾನ ಆಶಿರ್ವಾದ ಪಡೆದರು.
ಬೆಳಿಗ್ಗೆ 6ಗಂಟೆಗೆ ವಿಷೇಶ ಪೂಜೆ ಪುನಸ್ಕಾರ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಡೆಯಿತು.
ಸಹಸ್ರಾರು ಭಕ್ತಾದಿಗಳು ಶ್ರದ್ದಾ ಭಕ್ತಿ ಭಾವದಿಂದ ಸಾಯಿ ಬಾಬಾನಿಗೆ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ನಂತರ ಪ್ರತಿಯೋಬ್ಬ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ದೊಡ್ಡಣ್ಣ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಕುಮಾರ್, ಶಿಕ್ಷಕ ರಮೇಶ್ ಸೇರಿದಂತೆ ದೊಡ್ಡಣ್ಣ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಶಾಲಾ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಶಿಕ್ಷಕ ಶಿಕ್ಷಕಿಯರು ವಿದ್ಯಾರ್ಥಿಗಳು ಪೋಷಕರು ಮತ್ತು ಸಾರ್ವಜನಿಕರು ಮಹಿಳೆಯರು ಮುಂತಾದವರು ಸಾಯಿ ಬಾಬಾ ದರ್ಶನ ಪಡೆದರು.
ವರದಿ: ಅಯ್ಯಣ್ಣ ಮಾಸ್ಟರ್




