ಟ್ರೆನಿಡಾಡ್ ( ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಇಲ್ಲಿನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಡೆಕವರ್ತ್ ಲೂಯಿಸ್ ನಿಯಮದ ಪ್ರಕಾರ 5 ವಿಕೆಟ್ ಗಳಿಂದ ಮಣಿಸಿತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಮಳೆಯಿಂದ ಕಡಿತಗೊಂಡ 37 ಓವರುಗಳ ಪಂದ್ಯದಲ್ಲಿ 7 ವಿಕೆಟ್ ಗೆ 171 ರನ್ ಗಳಿಸಿತು. ಪ್ರತಿಯಾಗಿ ಆಡಿದ ವೆಸ್ಟ್ ಇಂಡೀಸ್ 33.2 ಓವರುಗಳಲ್ಲಿ 5 ವಿಕೆಟ್ ಗೆ 184 ರನ್ ಗಳಿಸಿ 5 ವಿಕೆಟ್ ಗಳ ಜಯ ಸಾಧಿಸಿತು. ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಜಯ ಸಾಧಿಸಿತ್ತು. ವೆಸ್ಟ್ ಇಂಡೀಸ್ ಪರವಾಗಿ 47 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದ ರೋಸ್ಟೋನ್ ಚೇಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.




