ಬೆಂಗಳೂರು: ಸ್ವಾದಭರಿತ ಹಾಲು ಡೈರಿ ಉತ್ಪನ್ನ ಪಾನೀಯವಲ್ಲದ ಕಾರಣ ಅದಕ್ಕೆ ಶೇಕಡ 12ರಷ್ಟು ಜಿ.ಎಸ್.ಟಿ. ಬದಲು ಶೇ. 5ರಷ್ಟು ಮಾತ್ರ ತೆರಿಗೆ ವಿಧಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಸ್ವಾದಭರಿತ ಹಾಲನ್ನು ಡೈರಿ ಉತ್ಪನ್ನ ಒಂದು ಪರಿಗಣಿಸಬೇಕೆ ಹೊರತು ಪಾನೀಯ ಎಂದು ವರ್ಗೀಕರಿಸುವಂತಿಲ್ಲ.
ಹೀಗಾಗಿ ಸ್ವಾಗತ ಹಾಲಿಗೆ ಶೇಕಡ 12ರಷ್ಟು ಜಿ.ಎಸ್.ಟಿ. ವಿಧಿಸುವ ಬದಲು ಶೇಕಡ 5ರಷ್ಟು ಮಾತ್ರ ಜಿ.ಎಸ್.ಟಿ. ವಿಧಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ದೊಡ್ಲಾ ಡೈರಿ ಲಿಮಿಟೆಡ್ ಕಂಪನಿ ಈ ಬಗ್ಗೆ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿಯ ಎಸ್.ಆರ್. ಕೃಷ್ಣ ಕುಮಾರ್, ದೊಡ್ಲಾ ಕಂಪನಿ ಪಾವತಿಸಿರುವ ತೆರಿಗೆ ಹಣವನ್ನು ಮರುಪಾವತಿಸುವಂತೆ ಆದೇಶಿಸಿದೆ.
ಹಾಲು ಸೇರಿದಂತೆ ದೊಡ್ಲಾ ಕಂಪನಿಯ ಇತರ ಉತ್ಪನ್ನಗಳಿಗೆ ಡೈರಿ ಉತ್ಪನ್ನಗಳಿಗೆ ಅನ್ವಯವಾಗುವ ಶೇಕಡ 5ರ ಜಿ.ಎಸ್.ಟಿ. ಬದಲು ಶೇಕಡ 12 ಮತ್ತು ಶೇಕಡ 18ಕ್ಕೂ ಹೆಚ್ಚು ಜಿ.ಎಸ್.ಟಿ. ವಿಧಿಸಲಾಗಿತ್ತು. ಸುವಾಸನೆ ಭರಿತ ಹಾಲು ತನ್ನ ಮೂಲ ಸ್ವರೂಪದಲ್ಲಿ ಉಳಿದುಕೊಳ್ಳುತ್ತದೆ.
ಸುವಾಸನೆಭರಿತ ಹಾಲು ತನ್ನ ಮೂಲ ಸ್ವರೂಪದಲ್ಲಿಯೂ ಹಾಲು ಆಗಿಯೇ ಉಳಿಯುತ್ತದೆ. ಸುಂಕ ಶೀರ್ಷಿಕೆ ವ್ಯಾಪ್ತಿಗೆ ಒಳಪಡುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ತೆರಿಗೆದಾರರು ಠೇವಣಿ ಮಾಡಿದ ಮೊತ್ತವನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಮರುಪಾವತಿಸಬೇಕು ಎಂದು ತೆರಿಗೆ ಇಲಾಖೆಗೆ ಆದೇಶಿಸಲಾಗಿದೆ.




