ಪುರಸಭೆಯ ಸಾಮಾನ್ಯ ಸಭೆ
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ಪಟ್ಟಣದಲ್ಲಿರುವ ಪುರಸಭೆಯ ಸಭಾಂಗಣದಲ್ಲಿ ದಿನಾಂಕ,16/04/25 ಬುಧವಾರ ಬೆಳಿಗ್ಗೆ 11:00 ಸಮಯಕ್ಕೆ ಸಾಮಾನ್ಯ ಸಭೆ ಸರ್ವಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷರಾದ ಪಿ.ಎಚ್. ರಾಜೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಉದ್ದೇಶ ಮಾತನಾಡಿದ ಪುರಸಭೆಯ ಅಧ್ಯಕ್ಷ ಪಿ ಎಚ್ ರಾಜೇಶ್ ನಾನು ಅಧ್ಯಕ್ಷ ಆದ ನಂತರ ಪುರಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ 222 ವಾಣಿಜ್ಯ ಮಳಿಗೆಗಳ ಪೈಕಿ 120 ಮಾಳಿಗೆಗಳನ್ನು ಮೂರು ಹಂತವಾಗಿ ಜಿಲ್ಲಾಧಿಕಾರಿಗಳಿಂದ ಆದೇಶ ಪಡೆದು ಹರಾಜು ಪ್ರಕ್ರಿಯೆ ನಡೆಸಲಾಯಿತು ಎಂದು ಹೇಳಿದರು.
ಕೇವಲ 2,16,540ರೂ ಬರುತ್ತಿದ್ದಂತಹ ಮಳಿಗೆಗಳ ಆದಾಯ ನಾಲ್ಕು ಹಂತಗಳ ಹರಾಜು ಪ್ರಕ್ರಿಯೆಲ್ಲಿ 19 ಲಕ್ಷದ 99,800 ರೂ ಬರುವ ಹಾಗೆ ಹರಾಜು ಪ್ರಕ್ರಿಯೆ ನಡೆಸಿ ಶ್ರಮಿಸಿದ್ದೇನೆ ಎಂದು ಹರಾಜು ಪ್ರಕ್ರಿಯೆ ಮಾಹಿತಿ ನೀಡಿದರು.
2025-2026 ನೇ ಸಾಲಿನ ಪುರಸಭೆ ನಿಧಿಯ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿತ್ತು
2025-26 ನೇ ಸಾಲಿನ ಪುರಸಭಾ ನಿಧಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮ ಅಂಗವಿಕಲರ ಕಲ್ಯಾಣ ಕಾರ್ಯಕ್ರಮ ಕ್ರೀಡಾವಂತಿಕೆಗಾಗಿ ಅನುದಾನಕ್ಕೆ ಕ್ರಿಯಾಯೋಜನೆ ನೀಡಲಾಗುತ್ತದೆ.
ಈ ಬಾರಿ ಸಾಮಾನ್ಯ ಸಭೆಯಲ್ಲಿ ಪಟ್ಟಣದ 23 ವಾರ್ಡಗಳಲ್ಲಿ ಕುಡಿಯುವ ನೀರು,ಚರಂಡಿ, ಬೀದಿ ದೀಪ, ಸೇರಿದಂತೆ ಮೂಲ ಮೂಲ ಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.
ಸಭೆಯಲ್ಲಿ ಸದಸ್ಯ ಸುದೇಶ್ ಬಾಬು ಮಾತನಾಡಿ ಅಧ್ಯಕ್ಷರಾಗಿ ರಾಜೇಶ್ ರವರು ಅದಿಕಾರ ಸಿಕ್ಕ ಕೇವಲ ಆರು ತಿಂಗಳಲ್ಲಿ ನಾಲ್ಕು ವರ್ಷದ ಕೆಲಸ ಮಾಡಿರುವುದು ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ಸಿಗಲಿ ಎಂದು ಹೇಳಿ ಮಾತನಾಡಿದ ಅವರು ಲಕ್ಷಾಂತರ ರೂಪಾಯಿಗಳ ಬಾಡಿಗೆ ಬಾಕಿ ಉಳಿದಿದ್ದು, ಅಧಿಕಾರಿಗಳು ಪ್ರತಿ ತಿಂಗಳು ತೆರಳಿ ಬಾಕಿ ವಸೂಲಿ ಮಾಡಿದರೆ ಮಾತ್ರ ಪುರಸಭೆಗೆ ಆದಾಯ ಬರಲಿದೆ ಎಂದು ಅಭಿಪ್ರಾಯಪಟ್ಟರು.
ಪಟ್ಟಣದ 23 ವಾರ್ಡ್‌ಗಳಿಗೆ 130 ಲಕ್ಷ ರೂ. ಅನುದಾನದಿಂದ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ಅಂಗೀಕಾರ ನೀಡಲಾಯಿತು
ಚಳ್ಳಕೆರೆ ವೃತ್ತವನ್ನು ನಟ ಪುನೀತ್ ರಾಜಕುಮಾರ್ ವೃತ್ತ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಯಿತು
ಈ ಸಭೆಯಲ್ಲಿ ಅಧ್ಯಕ್ಷ ಪಿ ಎಚ್ ರಾಜೇಶ್ ಹೇಳಿಕೊಂಡು ವಿಷಯ ಏನೆಂದರೆ
ಕೊಟ್ಟ ಮಾತಿನಂತೆ ರಾಜೀನಾಮೆ ನೀಡಲು ಬದ್ಧನಾಗಿದ್ದೇನೆ
ಪಾವಗಡ : ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ವೆಂಕಟೇಶ್ ರವರ ನಿರ್ದೇಶನದಂತೆ ಪುರಸಭಾ ಅಧ್ಯಕ್ಷರ ಸ್ಥಾನಕ್ಕೆ ಕೊಟ್ಟ ಮಾತಿನಂತೆ ರಾಜೀನಾಮೆ ನೀಡಲು ಬದ್ಧನಾಗಿದ್ದೇನೆ ಎಂದು ಪುರಸಭಾ ಅಧ್ಯಕ್ಷ ಪಿ ಎಚ್ ರಾಜೇಶ್ ತಿಳಿಸಿದರು.
ಸಿಎಂ ಸಿದ್ದರಾಮಯ್ಯನವರು ಇಷ್ಟು ದಿಸ ನನಗೆ ಗುಂಡಿಗೆ ಬಿದ್ದಿರುವಂತಹ ಇ ಖಾತ ಮತ್ತು ಬಿ ಖಾತ ಪ್ರಕ್ರಿಯೆ ಪ್ರಾರಂಭಿಸಿದ್ದು ಈ ಪ್ರಕ್ರಿಯೆಯಲ್ಲಿ ಫೆಬ್ರವರಿ ಮಾರ್ಚ್ ಏಪ್ರಿಲ್ ತಿಂಗಳಿಗಳಿಂದ 1,07,97,7745 ಆದಾಯ ಇ ಖಾತ ಮತ್ತು ಬಿ ಖಾತ ಪ್ರಕ್ರಿಯೆಯಿಂದ ಪಾವಗಡ ಪುರಸಭೆಗೆ ಆದಾಯ ಬಂದಿದೆ ಎಂದು ಮಾಹಿತಿ ಕೊಟ್ಟರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗೀತಾ, ಸದಸ್ಯರುಗಳಾದ ತೆಂಗಿನಕಾಯ ರವಿ, ರಾಮಾಂಜಿನಪ್ಪ, ವೇಲುರಾಜ್, ಇಮ್ರಾನ್ ಉಲ್ಲಾ, ವಿಜಯ್ ಕುಮಾರ್, ಲಕ್ಷ್ಮೀದೇವಿ, ಪುರಸಭಾಮುಖ್ಯಅಧಿಕಾರಿ ಜಾಫರ್ ಷರೀಫ್ ಖಾನ್, ಆರೋಗ್ಯ ಅಧಿಕಾರಿ ಶಂಸುದ್ದೀನ್, ಜ್ಞಾನೇಂದ್ರ ಕುಮಾರ್, ರಾಮಕೃಷ್ಣ,ಹರೀಶ್ ಜಿಲಾನಿ, ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಶಿವಾನಂದ, ಪಾವಗಡ ತಾಲ್ಲೂಕು ತುಮಕೂರು ಜಿಲ್ಲೆ