ಬೆಳಗಾವಿ : ಲಿಂಬೆಹಣ್ಣು, ಮೊಸರನ್ನದ ಜೊತೆಗೆ ಸ್ಮಾರ್ಟ್ ಫೋನ್ ಇಟ್ಟು ವಾಮಾಚಾರ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.ರೈತ ಸದಾನಂದ ದೇಸಾಯಿ ಎನ್ನುವ ರೈತನ ಹೊಲದಲ್ಲಿ ಮೊಬೈಲ್ ಇಟ್ಟು ವಾಮಾಚಾರ ಮಾಡಲಾಗಿದೆ.
ಜಮೀನಿನ ರೈತರು ರಾಜು ಮರವೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕೆ ಹೋಗಿ ನೋಡಿದಾಗ ಲಿಂಬೆಹಣ್ಣು, ಮೊಸರನ್ನ ಜೊತೆಗೆ ಸ್ಮಾರ್ಟ್ ಫೋನ್ ಇರುವುದು ಕಂಡುಬಂದಿದೆ.
ಮೊಬೈಲ್ ಜೊತೆಗೆ ಲಿಂಬೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆ, ಕ್ಯಾರ್ಬೀಜ ಹಾಕಿ, ಗಿಡಕ್ಕೆ ಗಂಟು ಕಟ್ಟಿ ವಾಮಾಚಾರ ನಡೆಸಲಾಗಿದೆ.




