ಹುಮನಾಬಾದ: ಶ್ರೇಯಾ 007 ತಳಿಯ ಕಲ್ಲಂಗಡಿ ಬೆಳೆ ಬೆಳೆಯುವದರಿಂದ ರೈತರಿಗೆ ಅಧಿಕ ಲಾಭ ಸಿಗಲಿದೆ ಎಂದು ಕೃಷಿಕ ಸಿಡ್ಸ್ ಪ್ರವೀಟ್ ಲಿಮಿಟ್ ರಿಜನಲ್ ಮ್ಯಾನೇಜರ್ ಪ್ರವೀಣಕುಮಾರ ಜಾಬಾಡೆ ಹೇಳಿದರು.
ಭಾಲ್ಕಿ ತಾಲ್ಲೂಕಿನ ಜಾಂತಿ ಗ್ರಾಮದ ರೈತರ ಹೊಲದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾನಾಡಿದರು.
ಶ್ರೇಯಾ 007 ತಳಿಯ ಕಲ್ಲಂಗಡಿ ಒಂದು ಎಕ್ಕರೆಯಲ್ಲಿ ಸರಿಸುಮಾರು 15 ರಿಂದ 20 ಟನ್ ಬೆಳೆ ಬೆಳೆಯಬಹುದಾಗಿದೆ.ಕಡಿಮೆ ವೆಚ್ಚದಲ್ಲಿ ಸಿಗುವ ಈ ತಳಿಯಿಂದ ರೈತರು ಉತ್ತಮ ಬೆಳೆ ಬೆಳದು ತಮ್ಮ ಆರ್ಥಿಕ ಸ್ಥಿತಿಯನ್ನ ಉತ್ತಮ ಮಾಡಿಕೊಳ್ಳಲು ಕಲ್ಲಂಗಡಿ ಬೇಸಾಯ ಮಾಡಬೇಕು.ಒಂದು ಎಕ್ಕರೆ ಕಲ್ಲಂಗಡಿ ಬೆಳೆಯಿಂದ ಅಧಿಕ ಆದಾಯವನ್ನ ರೈತರು ಗಳಿಸಬಹುದು ಎಂದು ರೈತರಿಗೆ ಸಲಹೆ ನೀಡಿದರು.
ಬಳಿಕ ಗ್ರಾಮದ ಪ್ರಗತಿಪರ ರೈತರಾದ ಶಿವನಾಥ ಪಾಟೀಲ ಹಾಗೂ ಶಿವಕುಮಾರ ರವೀಂದ್ರನಾಥ ಪಾಟೀಲ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ ಎಂ.ಎ,ವಿನೋದಕುಮಾರ ಮೇತ್ರೆ,ಆನಂದ ಕಾಮಟಠಾಣೆ,ಸಂತೋಷ ಪಾಟೀಲ,ಪ್ರಭಾಕರ ಬೆಳೆಕೆರೆ,ವಿರಶೆಟ್ಟಿ ಬಿಚಗುಂಡಿ, ರಮೇಶ ಪಾಟೀಲ,ಬಾಬುರಾವ ಹಂಚನಾಳೆ, ಮಲ್ಲಿಕಾರ್ಜುನ ಗುತ್ತೇದಾರ,ಚಂದ್ರಕಾಂತ ಸಿರ್ಸಿ, ರಮೇಶ ಚಾಕುರೆ,ಸಂಜುಕುಮಾರ ಪ್ರಭಾ, ರಾಜಶೇಖರ್ ಪಾಟೀಲ,ಬಸವಚೇತನ ಖಂಡ್ರೆ ಸೇರಿ ದಂತೆ ರೈತರು,ಮುಖಂಡರು ಉಪಸ್ಥಿತರಿದ್ದರು.
ಸಜೀಶ ಲಂಬುನೋರ, ಹುಮನಾಬಾದ