ಹೈದರಾಬಾದ್: ಹೈದರಾಬಾದ್‌ನ ನರಸಿಂಗಿಯಲ್ಲಿ 430 ಅಡಿ ಎತ್ತರದ ‘ಹರೇ ಕೃಷ್ಣ ಪರಂಪರೆ ಗೋಪುರ’ದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದು ಪೂರ್ಣವಾಗುತ್ತಿದ್ದಂತೆ ಭಾರತದ ಅತ್ಯಂತ ಎತ್ತರದ ಆಧ್ಯಾತ್ಮಿಕ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈ ಗೋಪುರವು ಹರೇ ಕೃಷ್ಣ ಚಳವಳಿಯ ಸಂಸ್ಥಾಪಕ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರಿಗೆ ಸಮರ್ಪಿತವಾಗಿದೆ.
6 ಎಕರೆಗೂ ಹೆಚ್ಚು ಪ್ರದೇಶದಲ್ಲಿರುವ ಈ ಸಂಕೀರ್ಣವು ಶ್ರೀ ಶ್ರೀ ರಾಧಾ ಕೃಷ್ಣ, ಶ್ರೀ ನಿತಾಯಿ ಗೌರಂಗ, ಶ್ರೀ ಸೀತಾ ರಾಮ ಲಕ್ಷ್ಮಣ ಹನುಮಾನ್ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಗಳನ್ನೂ ಒಳಗೊಂಡಿದೆ.
ಗೋಪುರದ ನಿರ್ಮಾಣ ಪೂರ್ಣಗೊಂಡಾಗ, ಪುರಿ ಜಗನ್ನಾಥ ದೇಗುಲ ಮಾದರಿಯ ಸುದರ್ಶನ ಚಕ್ರವನ್ನು ಸ್ಥಾಪಿಸಲಾಗುತ್ತದೆ. 2024ರ ಆಗಸ್ಟ್‌ನಲ್ಲಿ ಈ ದೇಗುಲದ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.




