ಸಿಂಧನೂರು: ಮಾರ್ಚ್ 12 ರಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕೆ ಗೋಷ್ಟಿ ನಡೆಸಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಮಾರ್ಚ್ 13ರಂದು ಸಿಂಧನೂರು ಡಾ. ಅಂಬೇಡ್ಕರ್ ಸರ್ಕಲ್ ನಿಂದ ಬೆಂಗಳೂರಿನವರಿಗೂ ಸುಮಾರು ನೂರಕ್ಕೂ ಹೆಚ್ಚು ಹೋರಾಟಗಾರರು ಪಾದಯಾತ್ರೆ ಆರಂಭಿಸಲಾಗಿದೆ ಎಂದು ಒಳ ಮೀಸಲಾತಿ ಹೋರಾಟಗಾರ ಅಂಬರೀಶ್ ಗಿರಿಜಾಲಿ ಹೇಳಿದರು .
ಈ ಪಾದಯಾತ್ರೆಯಲ್ಲಿ ಅರೆಬೆತ್ತಲೆ ಉರುಳು ಸೇವೆ ಸೇರಿದಂತೆ ವಿವಿಧ ರೀತಿಯ ಹೋರಾಟ ನಡೆಯಲಿದೆ ಎಂದು ಬುದವಾರ ಪತ್ರಿಕೆಗೋಷ್ಠಿಯಲ್ಲಿ ಅವರು ಮಾತನಾಡಿ ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗ ಮನೆಮನೆಗೆ ಸಮೀಕ್ಷೆ ನಡೆಸಿ ಆಯಾ ಜಾತಿಗಳ ಜನಸಂಖ್ಯೆಗಳ ಹಿಂದುಳಿದಿರುವಿಕೆ ಒಳ ಮೀಸಲಾತಿ ವರ್ಗೀಕರಣ ವರದಿಯನ್ನು ಸಿದ್ಧಪಡಿಸಿ ಪರಿಶಿಷ್ಟ ಜಾತಿಯ ಉಪ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 2024ರ ಆಗಸ್ಟ್ 1 ರಂದು ಆದೇಶಿಸಿದೆ ಸರ್ಕಾರ ನವೆಂಬರ್ 12ರಂದು ನಿವೃತ್ತ ನ್ಯಾಯಮೂರ್ತಿ ಎಚ್ ಎನ್. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿದೆ ಆದರೆ ರಾಜ್ಯ ಸರ್ಕಾರ ನೆಪ ಮಾತ್ರಕ್ಕೆ ಆಯೋಗ ನೇಮಿಸಿ ಮಾದಿಗ ಸಮಾಜಕ್ಕೆ ದ್ರೋಹ ಎಸಗುತ್ತಿದೆ.
ಈ ಪಾದಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಬೇಕಾಗಿದೆ ಎಂದರು,
ಈ ಸಂದರ್ಭದಲ್ಲಿ – ಮರಿಯಪ್ಪ ಜಾಲಿಹಾಳ. ಅಂಬ್ರೂಸ್. ಯಮನಪ್ಪ ಬಿಎಸ್ಎನ್ಎಲ್. ಅಲ್ಲಮಪ್ರಭು ಪೂಜಾರಿ. ಅಂಬರೀಷ್ ಗಿರಿಜಾರಿ. ದುರುಗೇಶ್ ಬಾಲಿ. ರಾಮಣ್ಣ ಸಾಸಲಮರಿ. ಹನುಮಂತ ಹಂಪನಾಳ
ಮೌನೇಶ್ ಜಾಲವಾಡಗಿ. ಪ್ರವೀಣ್. ಪಾಮಯ್ಯ. ಮತ್ತು ಸಾಗರ್. ಸುರೇಶ್ ಗೊರೆಬಾಳ.
ಇನ್ನು ಅನೇಕರಿದ್ದರು




