ರಾಯಚೂರು : ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೇಂದ್ರ ಘಟಕ ಒಪ್ಪಿಗೆಯಲ್ಲಿ. ಇಂದು ಲಿಂಗಸಗೂರು ತಾಲೂಕಿನ ದೊಡ್ಡ ಹನುಮಂತ ದೇವಸ್ಥಾನ ಅವರ್ಣದಲ್ಲಿ, ರಾಜ್ಯ ಸಮಿತಿಯ ಪದಾಧಿಕಾರಿಗಳು ನವಂಬರ್ ತಿಂಗಳ ಮೊದಲನೆಯ ವಾರದಲ್ಲಿ ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಅವರು ರೈತರ ಉಳಿವಿಗಾಗಿ ಪಾದಯಾತ್ರೆ ಇರುವುದರಿಂದ. ಆ ವಿಷಯದ ಬಗ್ಗೆ ಇಂದು ಸಭೆಯಲ್ಲಿ ಚರ್ಚಿಸಿ ಯಶಸ್ವಿಗೊಳಿಸಲಾಯಿತು.

ಈ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರು, ರಾಜ್ಯ ಕಾರ್ಯದರ್ಶಿಗಳು, ರಾಜ್ಯ ಸಂಚಾಲಕರು, ಜಿಲ್ಲಾ ಅಧ್ಯಕ್ಷರಗಳು, ಜಿಲ್ಲಾ ಉಪಾಧ್ಯಕ್ಷರು ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರು ಮತ್ತು ತಾಲೂಕ ಅಧ್ಯಕ್ಷರು ಭಾಗಿಯಾಗಿದ್ದರು.




